ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ.ದಿನೇಶ್ ಅವರನ್ನು ಗೌರವಿಸಲಾಯಿತು.
ಜೆಸಿಐ ಬಣಕಲ್ ವಿಸ್ಮಯ ಘಟಕದ ವತಿಯಿಂದ ಏಳು ದಿನಗಳ ಕಾಲ ಜೇಸಿ ಸಪ್ತಾಹವನ್ನು ಯಶಸ್ವಿಯಾಗಿ ಆಚರಿಸಲಾಯಿತು, ಮೊದಲನೇ ದಿನ ಜೇಸಿಐ ಧ್ವಜರೋಹಣದೊಂದಿಗೆ ಪ್ರಾರಂಭವಾದ ಸಪ್ತಾಹವು, ಪತ್ರಿಕಾಗೋಷ್ಠಿ, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಬಗ್ಗೆ ತರಬೇತಿ , ಉಚಿತ ನೇತ್ರ ತಪಾಸಣಾ ಶಿಬಿರ, ಬಿಜಿನೆಸ್ ಬೋರ್ಡ್ ಅಳವಡಿಕೆ, ಜೇಸಿ ಸಂಸ್ಥೆಗೆ ಯುವ ಜನತೆಯ ಆಹ್ವಾನ, ಮತ್ತು ಕರ ಪತ್ರ ಹಂಚಿಕೆ, ಜೂನಿಯರ್ ಜೆಸಿ ಮಕ್ಕಳಿಗಾಗಿ ಆಟೋ ಸ್ಪರ್ಧೆಗಳು, ಹೀಗೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ನೆರವೇರಿಸಲಾಯಿತು.
ಸಮಾರೋಪ ಸಮಾರಂಭವನ್ನು ಬಣಕಲ್ ಜೆಸಿ ಭವನದಲ್ಲಿ 15-09-2025 ಸೋಮವಾರ ನಡೆಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವರುಂದ ರವರು ಮಾತನಾಡಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಉತ್ತಮ ಬೆಲೆ ಬಂದಿದ್ದು ಬೆಳೆಗಾರರು ಇದರ ಸದುಪಯೋಗಪಡಿಸಿಕೊಂಡು ಕಾಫಿ ಬೆಳೆ ಹೆಚ್ಚಿಸಲು ಮೂಲಭೂತ ಸೌಕರ್ಯಗಳನ್ನು ಮಾಡಿಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ ನೂರು ವರ್ಷ ಪೂರೈಸುತ್ತಿದ್ದು … ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳಗಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಂತ ತಿಳಿಸಿದರು.
ಜೇಸಿ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರ ಕೋಳೂರು ಮಾತನಾಡಿ ; ವಲಯ 14ರಲ್ಲಿ ಪ್ರತಿಷ್ಠಿತ ಘಟಕ ವಾದ ಬಣಕಲ್ ವಿಸ್ಮಯ ಘಟಕವು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಿದ್ದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ್ಯ, ಜೇಸಿ ಕಮಲ ಪತ್ರವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷರಾದ ಸುರೇಶ್ ಶೆಟ್ರು ಮಾತನಾಡಿದರು, ನಿಕಟ ಪೂರ್ವ ಅಧ್ಯಕ್ಷರಾದ ಮದನ್, ಮಹಿಳಾ ವಿಭಾಗದ ಅಧ್ಯಕ್ಷಣಿ ಪೂರ್ಣಿಮಾ ನರೇಂದ್ರ , ಸಪ್ತಾಹ ನಿರ್ದೇಶಕರಾದ ರಂಜಿತ್, ಕಾರ್ಯದರ್ಶಿ ಗಗನ್, ಸಂಸ್ಥೆಯ ಪೂರ್ವ ಅಧ್ಯಕ್ಷರು ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು….



