ದೇವಸ್ಥಾನದ ಜಾಗ ಒತ್ತುವರಿ ಬಿಡಿಸಿಕೊಡಿ ಎಂದು ತಹಸೀಲ್ದಾರ್ ಅವರಿಗೆ ಬಿನ್ನಡಿ ಗ್ರಾಮದ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಬಿನ್ನಡಿ ಗ್ರಾಮದಲ್ಲಿ 12 ಶತಮಾನದಲ್ಲಿ ಕಟ್ಟಿದ ಐತಿಹಾಸಿಕ ಕನ್ನೆರಮ್ಮ ದೇವಸ್ಥಾನವಿದ್ದು ಆ ದೇವಸ್ಥಾನದ ಜೊತೆಗೆ ಬ್ರಹ್ಮಲಿಂಗೇಶ್ವರ, ಬಾಸಮ್ಮ ಹಾಗೂ ದೇವಿರಮ್ಮ ದೇವಸ್ಥಾನಗಳಿಗೆ ಊರಿನ ಹಿರಿಯರು 11 ಎಕರೆ ಜಾಗವನ್ನು ಮೀಸಲಿಟ್ಟಿದ್ದರು.
11 ಎಕರೆ ಜಾಗದಲ್ಲಿ ಮುಕ್ಕಾಲು ಪಾಲು ಒತ್ತುವರಿ ಆಗಿದ್ದು ದೇವಸ್ಥಾನದ ಆಚಾರ ವಿಚಾರಗಳಿಗೆ ಜಾಗವಿಲ್ಲದಂತ ಸ್ಥಿತಿ ನಿರ್ಮಾಣವಾಗಿರುವುದರಿಂದ ಒತ್ತುವರಿ ಜಾಗವನ್ನು ತೆರವು ಗೊಳಿಸಿಕೊಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಗ್ರಾಮಸ್ಥರು ಹಿಂದೆ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದರು, ಈಗ ತಾಲ್ಲೂಕು ದಂಡಾಧಿಕಾರಿಗಳಿಗೆ ಭೇಟಿ ಮಾಡಿ ಸರ್ವೇ ಮಾಡಿ ಒತ್ತುವರಿ ತೆರವು ಮಾಡಿಸಿ ದೇವಸ್ಥಾನದ ಜಾಗವನ್ನು ಅಧಿಕೃತ ಮಾಡಿ ಕೊಡುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ದೀಪಕ್ ದೊಡ್ಡಯ್ಯ . ಗ್ರಾಮಸ್ಥರಾದ ಅರುಣ್ ಬಿನ್ನಡಿ. ವಿಜೇಂದ್ರ,ರಮೇಶ್, ಬಿ.ಟಿ.ದೇವರಾಜ್, ರವಿ ಕುಮಾರ್, ವೀರೇಂದ್ರ, ಧರ್ಮರಾಜ್, ಸುನೀಲ್, ವೆಂಕಟೇಶ್, ಉಪೇಂದ್ರ, ಲಕ್ಷ್ಮಣ, ವಿನುತ್, ಮೋಹನ್, ಅಭಿಜಿತ್, ಪೂರ್ಣೇಶ್, ಸಂಪತ್, ಮೊದಲಾದವರು ಇದ್ದರು.



