ವಿಶ್ವದ ಇತಿಹಾಸದಲ್ಲೇ ಗ್ರಾಹಕರ ಹೊರೆ ತಗ್ಗಿಸಿದ ಏಕೈಕ ಸರ್ಕಾರ ಇದ್ದರೆ ಅದು ಭಾರತದ ಮಾನ್ಯ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಜೆ.ಎಸ್ ರಘು, ಜನ್ನಾಪುರ ತಿಳಿಸಿದರು.
ಅವರು ಈ ಬಗ್ಗೆ ಹೇಳಿಕೆ ನೀಡಿ ; ಜನರ ಕೊಳ್ಳುವ ಶಕ್ತಿ ಕಡಿಮೆ ಅಗಬಾರದು ಮತ್ತು ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿ ಆಗಿದ್ದು ಇದು ಇನ್ನಷ್ಟು ಉತ್ತಮ ಸ್ಥಿತಿಗೆ ತಲುಪಲು ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು ಎಂಬುವುದು ಆರ್ಥಿಕ ವ್ಯವಸ್ಥೆಯ ತತ್ವ ಆಗಿದ್ದು ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿಯವರು ಗುಂಡು ಪಿನ್ನಿನಿಂದ ಹಿಡಿದು ಆಟೋಮೊಬೈಲ್ ಕ್ಷೇತ್ರದ ತನಕ ಶೇಕಡ ಹತ್ತಕ್ಕೂ ಹೆಚ್ಚು ಪ್ರಮಾಣದ ಬೆಲೆ ಇಳಿಕೆ ಮಾಡಿದ್ದು ಇತಿಹಾಸದಲ್ಲೇ ಇದು ವಿಶಿಷ್ಟ ಕ್ರಮವಾಗಿದೆ ಎಂದರು.
ಈಗಾಗಲೇ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಕೊಳ್ಳುವ ಸುಗ್ಗಿ ಪ್ರಾರಂಭವಾಗಿದ್ದು ಟಿವಿ, ದಿನೋಪಯೋಗಿ ವಸ್ತುಗಳು, ವಾಹನಗಳನ್ನು ಕೊಳ್ಳುವಿಕೆ ಹೆಚ್ಚಾಗಿದೆ ಅಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಔಷಧಿಗಳ ಬೆಲೆ ಕಡಿಮೆಯಾಗಿದೆ ಮತ್ತು ಜೀವವಿಮೆ ಮತ್ತು ಆರೋಗ್ಯ ವಿಮೆ ದರಗಳು ಗಣನೀಯವಾಗಿ ಇಳಿಕೆಯಾಗಿವೆ ಇವುಗಳು ಸಾಮಾನ್ಯ ಭಾರತೀಯ ಜೀವನದ ಮೇಲೆ ಅತ್ಯುಪಯುಕ್ತ ವಾಗಿದ್ದು ಜನರ ಕೊಳ್ಳುವ ಶಕ್ತಿ ಹೆಚ್ಚಾಗಲಿದೆ.
ಇಷ್ಟೆಲ್ಲಾ ದೇಶದ ಅರ್ಥ ವ್ಯವಸ್ಥೆಗೆ ಉತ್ತಮ ಕೊಡುಗೆ ನೀಡುತ್ತಿದ್ದರು ರಾಜ್ಯ ಸರ್ಕಾರ ಬೆಲೆ ಇಳಿಕೆಯನ್ನು ವಿರೋಧಿಸುತ್ತಿದೆ. ಕೇಂದ್ರ. ಹಾಲು. ದಿನಸಿ. ಬೆಲೆ ಇಳಿಸಿದರೆ ರಾಜ್ಯ ಹೆಚ್ಚಿಸುವ ಹುನ್ನಾರ ಮಾಡುತ್ತಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ರಸ್ತೆಗಳು ಗುಂಡಿ ಬಿದ್ದಿದ್ದು ಇದನ್ನು ಮುಚ್ಚುವ ಕೆಲಸ ಆಗುತ್ತಿಲ್ಲ. ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇಂತಹ ಸಮಯದಲ್ಲೂ ಕೇಂದ್ರದ ಬೆಲೆ ಇಳಿಕೆಯನ್ನು ಸ್ವಾಗತಿಸುವ ಬದಲು ವಿರೋಧಿ ಮನಸ್ಥಿತಿ ತೋರಿಸುತ್ತಿರುವುದು ಆಡಳಿತ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ತಿಳಿಸಿದರು.



