ಜೆಸಿಐ ಆಲ್ಮುನಿ ಕ್ಲಬ್ ಝೋನ್-14 ವತಿಯಿಂದ ಎಂಜಿನಿಯರ್ಸ್ ಡೇ ದಿನವನ್ನು ಭರ್ಜರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಇಂಜಿನಿಯರ್ ಮತ್ತು ಮೂಡಿಗೆರೆ ಜೇಸಿಯ ನ ಹಿರಿಯ ಸದಸ್ಯ ವಿಶ್ವಕುಮಾರ್ ಪಿ ಅವರನ್ನು ಅವರ ಸಾಧನೆಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಮೂಲಕ ನೀಡಿದ ಸಮಾಜ ಸೇವೆಗಾಗಿ ಜೆಸಿಐ ಆಲ್ಮುನಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೆಸಿಐ ಆಲ್ಮುನಿ ಕ್ಲಬ್ ಝೋನ್ ಚೇರ್ಮನ್ ಯೋಗೇಶ್ ಎಚ್.ಕೆ. ಮಾತನಾಡಿ ಇಂಜಿನಿಯರ್ಸ್ ಎಂಬುದು ಕೇವಲ ಒಂದು ಹುದ್ದೆಯಲ್ಲ, ಅದು ಸಮಾಜವನ್ನು ಸುವ್ಯವಸ್ಥಿತವಾಗಿಸುವ ಒಂದು ಗುರುತರ ಜವಾಬ್ದಾರಿಯಾಗಿದೆ. ಕಟ್ಟಡ ನಿರ್ಮಾಣವಿರಬಹುದ, ರಸ್ತೆ ನಿರ್ಮಾಣವಿರಬಹುದು, ಅಣೆಕಟ್ಟು ನಿರ್ಮಾಣವಿರಬಹುದು ಜನರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳ ನಿರ್ಮಾಣದಲ್ಲಿ ಇಂಜಿನಿಯರ್ಸ್ ಸೇವೆ ಅನುಪಮವಾದುದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮೂಡಿಗೆರೆ ಜೇಸಿಐ ನ ಹಿರಿಯ ಸದಸ್ಯರಾದ ಪಿ. ವಿಶ್ವಕುಮಾರ್ ಅವರು ಹಲವಾರು ವರ್ಷಗಳಿಂದ ವೃತ್ತಿನಿರತರಾಗಿದ್ದು, ಮೂಡಿಗೆರೆ ಜೇಸಿ ಭವನ ಕಟ್ಟಡವನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸಿ ಅಂದಗೊಳಿಸುವುದರಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ಸಭೆಯಲ್ಲಿ ಆಲುಮ್ನಿ ವಲಯ ಮಂಡಳಿ ಸದಸ್ಯ ರಾಜೇಶ್ ಜಿ.ಟಿ., ಸದಸ್ಯರಾದ ದೀಪಕ್ ದೊಡ್ಡಯ್ಯ, ವಿಜಯಕುಮಾರ್ ಎಂ.ಡಿ., ಅತುಲ್ ರಾವ್, ಪ್ರದೀಪ್ ಎಚ್.ಆರ್., ತೇಜಸ್ವಿ ಕೆ.ಎಲ್.ಎಸ್., ಪ್ರಸನ್ನ ಗೌಡಹಳ್ಳಿ, ರತೀಶ್ ಬೆಟ್ಟಗೆರೆ, ನಾಗೇಶ್ ಮಾಡ್ಕಲ್, ಚಂದ್ರಶೇಖರ್, ವಿನೋದ್ ಶೆಟ್ಟಿ, ರವಿಕುಮಾರ್, ಹರೀಶ್ ಟಿ, ಸವಿತಾ ರವಿ ಸಚಿನ್ ಎಸ್., ವಿಕಾಸ್, ಸುನಿಲ್, ಜೇಸಿಐ ವಲಯ ಕಾರ್ಯದರ್ಶಿ ಸುಪ್ರೀತ್ ಕಾರಬೈಲ್, ಮೂಡಿಗೆರೆ ಜೇಸಿಐ ಅದ್ಯಕ್ಷ ಪ್ರದೀಪ್ ಕೆ.ಕೆ., ಇತರರು ಉಪಸ್ಥಿತರಿದ್ದರು.




