Screenshot_2025-09-28-19-46-10-22_40deb401b9ffe8e1df2f1cc5ba480b12_copy_944x756_1

 

 

ವರ್ಕ್ ಫ್ರಮ್ ಹೋಂ ಕುರಿತ ಅಂತರ್ಜಾಲದಲ್ಲಿನ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರಿಗೆ ಸುಮಾರು ಎರಡೂವರೆ ಲಕ್ಷ ರೂಗಳನ್ನು ವಂಚಿಸಿ ಮೋಸ ಮಾಡಿರುವ  ಪ್ರಕರಣ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೊಬೈಲ್ ನ್ನು ವೀಕ್ಷಣೆ ಮಾಡುತ್ತಿರುವಾಗ ಟೆಲಿಗ್ರಾಂ ಆಪ್ ನಲ್ಲಿ ವರ್ಕ್ ಪ್ರಮ್ ಹೊಂ ಮಾಡಲು ನಿಮಗೆ ಇಷ್ಟ ಇದ್ದರೆ ನಮ್ಮ ಜಾಹೀರಾತನ್ನು ಕ್ಲಿಕ್ ಮಾಡಿ ಎಂದು ಲಿಂಕ್  ಕಳುಹಿಸಿದ್ದರು.

ಇದನ್ನು ನಂಬಿದ ಮಹಿಳೆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ಅದರಲ್ಲಿನ ಸೂಚನೆಗಳನ್ನು ಪಾಲಿಸಿದ್ದಾರೆ. ಜಾಹೀರಾತು ಹಾಕಿರುವ ಸೈಬರ್ ವಂಚಕರು ನಾವು ನೀಡುವ ಟಾಸ್ಕ್ ಗಳನ್ನು ನೀವು ಮಾಡಿದರೆ ನಿಮಗೆ ಹಣವನ್ನು ನೀಡುತ್ತೇವೆಂದು ಹೇಳಿ ನಂಬಿಸಿದ್ದರು.

ಮೊದಲಿಗೆ 1000 ರೂ ಗಳಿಗೆ 1300 ರೂ ಹಣವನ್ನು ಮಹಿಳೆಗೆ ನೀಡಿ ನಂತರ ಸೈಬ‌ರ್ ಫ್ರಾಡ್ ಗಳು ನಾವು ಹೇಳಿದಂತೆ ಹಣವನ್ನು ಇನ್ವೆಸ್ಟ್ ಮೆಂಟ್ ಮಾಡಿದರೆ ನಿಮಗೆ ದುಪ್ಪಟ್ಟು ಹಣವನ್ನು ನೀಡುತ್ತೇವೆಂದು ನಂಬಿಸಿದ್ದಾರೆ.

ಹಂತ ಹಂತವಾಗಿ ಒಟ್ಟು 2,57,600/- ರೂ ಗಳನ್ನು ಸೈಬರ್ ವಂಚಕರು ಮಹಿಳೆಯಿಂದ ಪಡೆದು ವಂಚಿಸಿ ಮೋಸ ಮಾಡಿರುತ್ತಾರೆ. ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ