IMG-20250929-WA0286

 

 

2015 ರಲ್ಲಿ  ಅಂತರರಾಷ್ಟ್ರೀಯ ಕಾಫಿ ಒಕ್ಕೂಟವು ಅಕ್ಟೋಬರ್ 1 ನ್ನು ಅಂತರರಾಷ್ಟ್ರೀಯ ಕಾಫಿ ದಿನವನ್ನಾಗಿ ಘೋಷಿಸಿದ್ದು, ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಅಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಬೆಳೆಗಾರರ ಸಂಘ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಸಹ ಸಂಘಟನೆಗಳು “ವಾಕ್ ವಿಥ್ ಕಾಫಿ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಬೆಳೆಗಾರರು ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ತಿಳಿಸಿದ್ದಾರೆ

ಸೋಮವಾರ ಚಿಕ್ಕಮಗಳೂರಿನಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು : ಕಳೆದ 10 ವರ್ಷಗಳಿಂದ ಕರ್ನಾಟಕ ಬೆಳೆಗಾರರ ಒಕ್ಕೂಟವು ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳು ಒಟ್ಟಿಗೆ ಸೇರಿ ವಿವಿಧ ಭಾಗಗಳಲ್ಲಿ ಈ ದಿನವನ್ನು ಆಚರಣೆ ಮಾಡುತ್ತಿತ್ತು. ಇದರಲ್ಲಿ ಪ್ರಮುಖವಾಗಿ ಪ್ರವಾಸಿ ಸ್ಥಳಗಳಾದ ಬೇಲೂರು, ಹಳೆಬೀಡು ಕಳೆದ ಬಾರಿ ಮೈಸೂರು ಅರಮನೆ ಮುಂಭಾಗದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಚರಿಸಿ ದೇಶ, ವಿದೇಶದ ಪ್ರವಾಸಿಗರಿಗೆ ಉಚಿತ ಕಾಫಿ ವಿತರಿಸುವ ಮೂಲಕ ಭಾರತದ ಕಾಫಿಯ ಪರಂಪರೆಯನ್ನು ಹೆಚ್ಚು ಹೆಚ್ಚು ಗ್ರಾಹಕರಿಗೆ ತಲುಪಿಸುವಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಯಶಸ್ವಿಯಾಗಿದೆ.

‎ಹಾಗೆಯೇ ಕಾಫಿ ಸೇವನೆಯಿಂದ ನಮ್ಮ ಆರೋಗ್ಯ ವೃದ್ಧಿಯ ಜೊತೆಗೆ ಹೃದಯ ಸಂಬಂಧಿ ಖಾಯಿಲೆಗಳು ದೂರವಾಗುತ್ತವೆ ಎಂಬುದು ಆರೋಗ್ಯ ಇಲಾಖೆಯ ಸಂಶೋದನೆಯಿಂದ ತಿಳಿದು ಬಂದಿದೆ. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ 100 ವರ್ಷದ ಸಂಭ್ರಮ ಅಚರಣೆಯಲ್ಲಿದ್ದು, ಈ ಬಾರಿಯ ಕಾಫಿ ದಿನವನ್ನು ಹೊಸದಾಗಿ ಪ್ರಾರಂಭವಾಗಿರುವ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದಲ್ಲಿ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಅಂದು ಬೆಳಿಗ್ಗೆ 11-00 ಗಂಟೆಗೆ ನಗರದ ತಾಲ್ಲೂಕು ಕಛೇರಿಯಿಂದ “ವಾಕ್ ವಿತ್ ಕಾಫಿ” ಎಂಬ ಶೀರ್ಷಿಕೆಯಡಿ ಅಜಾದ್ ಪಾರ್ಕ್‌ನವರೆಗೆ ಜಾಥಾ ಮಾಡುತ್ತಿದ್ದು, ಈ ಜಾಥಾಕ್ಕೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕಾಫಿ ಬೆಳೆಗಾರರು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಎಲ್ಲರನ್ನು ಆಹ್ವಾನಿಸಿದ್ದು, ಜಾಥಾವು ಅಜಾದ್ ಪಾರ್ಕ್‌ನಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.

‎ಸಭಾ ಕಾರ್ಯಕ್ರಮವನ್ನು ಚಿಕ್ಕಮಗಳೂರಿನ ಶಾಸಕರಾದ ಹೆಚ್.ಡಿ. ತಮ್ಮಯ್ಯ ಮತ್ತು ಕೆ.ಜಿ.ಎಫ್. ಅಧ್ಯಕ್ಷರಾದ ಹಳಸೆ ಶಿವಣ್ಣ ಇವರು ಉದ್ಘಾಟಿಸಲಿದ್ದಾರೆ ಎಂದರು.

ಜಿಲ್ಲಾ ಬೆಳಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್ ಮಾತನಾಡಿ ; ವಂಶಪಾರಂಪರ್ಯವಾಗಿ ಕಾಫಿ ಬೆಳೆಯುವ ಮೂಲಕ ಜೀವನ ನಡೆಸಿಕೊಂಡು ಬಂದಿರುವ ಬೆಳೆಗಾರರು ಮತ್ತು ತೋಟ ಕಾರ್ಮಿಕರು ತಮ್ಮ ಪರಿಶ್ರಮದಿಂದ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅಂತವರುಗಳನ್ನು ಗುರುತಿಸಿ ಜಿಲ್ಲೆಯ 20 ಮಂದಿ ಕಾಮಿಕರಿಗೆ ಪ್ರಶಂಸನಾ ಪತ್ರದೊಂದಿಗೆ ಸನ್ಮಾನಿಸಲಾಗುವುದು.

ತಾಲ್ಲೂಕಿನ ಧರಗುಣಿ ಗ್ರಾಮದ ತೋಟ ಕಾರ್ಮಿಕರ ಮಗಳು ಕೃತಿಕಾ ರವರು ಮಹಿಳಾ ಕಾರ್ಮಿಕರ ಬದುಕು-ಬವಣೆ ಮಹಾಪ್ರಬಂಧಕ್ಕೆ ಹಂಪಿ ವಿಶ್ವ ವಿದ್ಯಾಲಯದಿಂದ ಪಿ.ಹೆಚ್.ಡಿ. ಗೌರವ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಹಾಗೆಯೇ ತೋಟದಿಂದ ನೇರವಾಗಿ ಗ್ರಾಹಕರವರೆಗೆ ಉತ್ತಮ ಗುಣಮಟ್ಟದ ಕಾಫಿಯನ್ನು ವಿತರಿಸಿ ಬೆಂಗಳೂರು. ಮೈಸೂರು, ಚಿಕ್ಕಮಗಳೂರಿನಲ್ಲಿ ಔಟ್ಲೆಟ್ಗಳನ್ನು ಪ್ರಾರಂಭಿಸಿ, ಯುವಕರಿಗೆ ಸ್ಪೂತಿಯಾಗಿ ಸುಮಾರು 200 ಜನರಿಗೆ ಉದ್ಯೋಗ ಒದಗಿಸಿರುವ ನಗರದ ಹಂಕಲ್ ಎಸ್ಟೇಟ್ ಕಾಫಿ ಮಾಲೀಕರಾದ ನಂದನ್ ಇವರನ್ನು ಸನ್ಮಾನಿಸಲಾಗುವುದು.

‎ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಶರ್ಮಿತಗೌಡ ಇವರು ಆಗಮಿಸಲಿದ್ದಾರೆ. ಹಾಗೆಯೇ ಕಾಫಿ ಆರೋಗ್ಯ ಪೇಯವು ಹೌದು, ಹೇಗೆ ? ಎಂಬುದರ ಕುರಿತು ನಗರದ ಖ್ಯಾತ ವೈದ್ಯರು ಹಾಗೂ ಕಾಫಿ ಬೆಳೆಗಾರರು ಆದ ಡಾ. ಡಿ.ಎಲ್. ವಿಜಯಕುಮಾರ್, ಡಾ. ಜೆ.ಪಿ. ಕೃಷ್ಣಗೌಡರು ಮಾತನಾಡಲಿದ್ದಾರೆ.

ಸ್ಥಳೀಯ ಗಾಯಕರಾದ ಮಧು ಮತ್ತು ಸಂಗಡಿಗರಿಂದ ಗೀತ ಗಾಯನ ಕಾರ್ಯಕ್ರಮವು ಇದ್ದು, ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 2-00 ರವರೆಗೆ ಉಚಿತ ಕಾಫಿ ಮತ್ತು ಬಿಸ್ಕೆಟ್‌ನ್ನು ವಿತರಿಸಲಾಗುವುದು.

ಈ ಕಾರ್ಯಕ್ರಮಗಳಿಗೆ ಎಲ್ಲಾ ಬೆಳೆಗಾರರು, ಕಾರ್ಮಿಕ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ, ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬೆಳೆಗಾರರು ಒಕ್ಕೂಟದ ಉಪಾಧ್ಯಕ್ಷ ಸುರೇಶ್, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ