ಮೂಡಿಗೆರೆ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಗೋಣಿಬೀಡು ಇವರ ಸಂಯುಕ್ತಾಶ್ರಯದಲ್ಲಿ ಶ್ರೀಕುಮಾರ ಶಿವಯೋಗಿಗಳ 158ನೇ ಜಯಂತ್ಯೋತ್ಸವ ಹಾಗೂ ಉಪನ್ಯಾಸ “ಜ್ಞಾನ ಪುಷ್ಪ” ಕಾರ್ಯಕ್ರಮ ಮಾಲಿಕೆ-4 ಆಯೋಜಿಸಲಾಗಿತ್ತು
ಕಾರ್ಯಕ್ರಮ ಉದ್ಘಾಟನೆ ಮಾಡಿದ *ಚಿದಾನಂದ್ ಎಸ್.* *ಮಠದ್, ವಕೀಲರು* ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಕೇಂದ್ರ ಸಮಿತಿ, ಅ.ಭಾ.ವೀ.ಲಿಂ.ಮಹಾಸಭಾ (ರಿ.) ಬೆಂಗಳೂರು ಇವರು ಮಾತನಾಡುತ್ತಾ ; ಕುಮಾರ ಶಿವಯೋಗಿ ಸ್ವಾಮಿಗಳು ಸ್ಥಾಪಿಸಿದ ಮಹಾಸಭೆ ಮತ್ತು ಶಿವಯೋಗ ಮಂದಿರದಲ್ಲಿ ನೂರಾರು ಸ್ವಾಮೀಜಿ ಗಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ವಿದ್ಯೆ ಜೊತೆಗೆ ಸಂಗೀತ. ಸಾಹಿತ್ಯ. ಭಕ್ತಿ. ಧ್ಯಾನ. ಸಂಸ್ಕಾರ ಗಳನ್ನು ನೀಡುತ್ತಿದ್ದರು ಎಲ್ಲರೂ ಸಂಘಟಿತರಾಗಿ ವೀರಶೈವ ಲಿಂಗಾಯತ ಸಮಾಜ ವನ್ನು ಇನ್ನೂ ಎತ್ತರ ಕ್ಕೆ ಬೆಳೆಸೋಣ ಎಂದರು..
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ಜಿಲ್ಲಾ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯಕಾರ್ಯನಿರ್ವಾಹಕ ನಿರ್ದೇಶಕ *ಡಾ.ಮೋಹನ್ ರಾಜಣ್ಣ*
ಪ್ರಸ್ತಾವಿಕವಾಗಿ ಮಾತನಾಡುತ್ತಾ ಕುಮಾರೇಶ್ವರರುತಮಗಾಗಿ ಏನೂ ಮಾಡಿಕೊಳ್ಳದೇ ಎಲ್ಲವನ್ನು ಸಮಾಜಕ್ಕಾಗಿ ಮಾಡಿದ್ದಾರೆ ಹಳ್ಳಿ ಹಳ್ಳಿ ಗೆ ಓಡಾಡಿ ಜನರಿಗೆ ಶಿಕ್ಷಣ ನೀಡಿದರು ಸರ್ವ ಜನಾಂಗದ ಸರ್ವತೋಮುಖ ಸುಧಾರಣೆ ಗೆ ಶ್ರಮಿಸಿದ ಮಹಾ ಪುರುಷ ಹಾನಗಲ್ ಕುಮಾರ ಸ್ವಾಮಿಗಳು ಎಂದರು.
ದೆಹಲಿ ರಾಜ್ಯ ಘಟಕದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ
*ಶ್ರೀಕಂಠ. ಚೌಕೀಮಠ ರವರು* ಯುಗಪುರುಷ ಪರಮಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿ ಗಳ ಬಗ್ಗೆ ಉಪನ್ಯಾಸನೀಡಿ ಕುಮಾರಸ್ವಾಮಿಗಳು ಬಡತನದ ಬೇಗೆ ಯಲ್ಲಿ ಬೆಂದು ಮಠ ವನ್ನು ತೊರೆದು ಸಮಾಜದ ಸರ್ವ ರ ಉದ್ದಾರ ಕ್ಕಾಗಿ ಶ್ರಮಿಸಿದರು ಶರಣರ ವಚನ ಗಳು ಬೆಳೆಕು ಕಾಣುವುದಕ್ಕೆ ಸಂಗೀತ ಕ್ಷೇತ್ರ ಉಜ್ವಲ ವಾಗಿ ಬೆಳೆಯಲು ಹಾನಗಲ್ ಕುಮಾರ ಸ್ವಾಮಿ ಗಳ ಕೊಡುಗೆ ಅಪಾರ ಎಂದು ಬಣ್ಣಿಸಿದರುಮತ್ತು ವಿವಿಧ ಪಂಗಡ ಗಳಲ್ಲಿ ಹರಿದು ಹಂಚಿ ಹೋಗಿದ್ದ ಜನರನ್ನೆಲ್ಲ ಮಹಾಸಭಾದ ಮೂಲಕ ಒಂದು ಗುಡಿಸಿ ಒಂದೇವೇದಿಕೆ ಗೆ ತಂದ ಕೀರ್ತಿ ಶ್ರೀ ಗಳಿಗೆ ಸಲ್ಲುತ್ತದೆ ಎಂದರು.
ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ *ಶ್ರೀಮತಿ ರಾಜಲಕ್ಸ್ಮಿ ಕಾಂತರಾಜ್* ಎಲ್ಲರೂ ಒಂದು ಗುಡಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು ಪ್ರತಿಯೊಬ್ಬರು ಕೈ ಜೋಡಿಸಿ ಯಶಸ್ವಿ ಗೆ ಸಹಕರಿಸಿ ಎಂದರು.
*ರಾಜ್ಯಸಮಿತಿ ** *ನಿರ್ದೇಶಕ.ಎಂ.ಆರ್.ಪೂರ್ಣೇಶ್ ಮೂರ್ತಿ* ಹಾನಗಲ್ ಕುಮಾರಸ್ವಾಮಿ ಗಳ ಭಾವಚಿತ್ರ ಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು.

.ಶ್ರೀಕಂಠ. ಚೌಕೀ ಮಠ ರವರಿಗೆ *”ಪುಷ್ಪಗಿರಿ ಕೌಶಲ್ಯ ರತ್ನ “*ಚಿದಾನಂದ್ ಎಸ್ ಮಠದ್ ರವರಿಗೆ ” *ಪುಷ್ಪಗಿರಿ ಜ್ಞಾನ ರತ್ನ “*ಶ್ರೀಮತಿ ತನುಜಾ ರಾಜೇಶ್ ರವರಿಗೆ *”ಪುಷ್ಪಗಿರಿ* *ಪತ್ರಿಕೋದ್ಯಮ ರತ್ನ* ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಅಧ್ಯಕ್ಷ
*ಬಿ.ಎಸ್.ಓಂಕಾರ್* ವಹಿಸಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷೆ. *ಶಾಲಿನಿ ಅನಿಲ್” ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ *ಉಮಾ ಮೋಹನ್..*.
ಜಿಲ್ಲಾ ನಿರ್ದೇಶಕ. *ಎಂ ಡಿ. ಇಂದ್ರೇಶ್..*
ಯುವ ಘಟಕದ ಅಧ್ಯಕ್ಷ ಎ ಏನ್ *ಪ್ರತಾಪ್..**ಅಲ್ದೂರು ರಾಜೇಶ್.*.ಅವಿನ್ ಟಿವಿ ಯ*ಮಗ್ಗಲಮಕ್ಕಿ ಗಣೇಶ್ ಗೌಡ.**ವಸಂತ್ ಹಾರ್ಗೋಡ್.*.*ಹೆಚ್ ಆರ್* *ಕಾಂತರಾಜ್* ದಂಪತಿಗಳು ದಾಸೋಹ ಪ್ರಸಾದ ವ್ಯವಸ್ಥೆ ಮಾಡಿದ್ದರು…
*ವೇ. ಮಹೇಶ್ವರಯ್ಯ.* *ವೇ.ಮೃತ್ಯುಂಜಯ.* *ವೇ. ಸಂಗಮೇಶ* *ಶಾಸ್ತ್ರೀ.* ಜಿಲ್ಲಾ. ತಾಲ್ಲೂಕು. ರಾಜ್ಯ ನಿರ್ದೇಶಕರು ಗಳು. ಹಾಗೂ ತಾಲ್ಲೂಕಿನ ವೀರಶೈವ ಲಿಂಗಾಯತ ಬಂಧುಗಳು ಹಾಜರಿದ್ದರು..ಉಪಸ್ಥಿತರಿದ್ದರು.
ಪ್ರಾರ್ಥನೆ ಯನ್ನು *ಶಕುಂತಲಾ ಪಾಟೀಲ್.* *ಎಂ ಸಿ *ಆದರ್ಶ.ಸ್ವಾಗತಿಸಿದರು. ಕೊನೆಯಲ್ಲಿ *ಪ್ರಮೋದ್* *ಪಲ್ಗುಣಿ* ವಂದಿಸಿದರು. ಕಾರ್ಯಕ್ರಮದ ನಿರೂಪಣೆ ಯನ್ನು *ತನುಜಾ ರಾಜೇಶ್* ನೆರವೇರಿಸಿದರು..



