7Mudigere1A

 

 

ರಾಮಾಯಣ, ಮಹಾಭಾರತದಲ್ಲಿರುವ ನೈತಿಕಸ್ತಂಭ, ಸತ್ಯ, ಧರ್ಮವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಸ್ವಾಸ್ತ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು.

ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ತಾ.ಪಂ. ಪಂಡಿತ್ ದೀನ್ ದಯಾಳ್ ಉಪಾಧ್ಯಾ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ. ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮಾಯಣದಲ್ಲಿ ಉಲ್ಲೇಖಿಸಿರುವ ಪಿತೃವಾಕ್ಯ, ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯ ಇಂದಿನ ಕಾಲಘಟ್ಟದಲ್ಲಿ ಮರೆಯಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕಾಗಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವೈಷಮ್ಯ ಮನೋಭಾವ ತೊಲಗಿಸಿ ಮುನ್ನಡೆಯದಿದ್ದರೆ ಭವಿಷ್ಯದಲ್ಲಿ ಈ ಸಮಾಜ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಹೇಳಿದರು.

ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹನೀಯರ ಜಯಂತಿ ಕಾರ್ಯಕ್ರಮ ಒಂದು ವರ್ಗ, ಸಮುದಾಯಕ್ಕೆ ಮೀಸಲಾಗುತ್ತಿರುವುದು ದೊಡ್ಡ ದುರಂತ. ಯಾವುದೇ ಜಯಂತಿ ಕಾರ್ಯಕ್ರಮ ಆಚರಿಸುವ ಮುನ್ನ ನಡೆಸುವ ಪೂರ್ವಭಾವಿ ಸಭೆಗಳಿಗೆ ಎಲ್ಲಾ ಇಲಾಖೆ ಅಧಿಕಾರಿಗಳೇ ಬರುತ್ತಿಲ್ಲ. ಪ್ರಜ್ಞಾವಂತರೆ ಹೀಗೆ ಮಾಡಿದರೆ ಮಹನೀಯರ ಜಯಂತಿ ಕಾರ್ಯಕ್ರಮಕ್ಕೆ ಅರ್ಥ ಇರುವುದಿಲ್ಲ. ಇನ್ನು ಮುಂದೆ ಎಲ್ಲಾ ಮಹನೀಯರ ಜಯಂತಿ ಕಾರ್ಯಕ್ರಮ ಎಲ್ಲಾ ಸಮುದಾಯದ ಜನರು ಹಾಗೂ ಅಧಿಕಾರಿಗಳು ಸೇರಿಕೊಂಡು ಮಾಡುವಂತಹ ವಾತಾವರಣ ಇಲ್ಲಿಂದಲೇ ಪ್ರಾರಂಭವಾಗಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಕೆ. ವಾಸುದೇವ್ ಮಾತನಾಡಿ, ರಾಮಾಯಣದಲ್ಲಿ 24 ಸಾವಿರ ಶ್ಲೋಕಗಳಿವೆ. ಇದನ್ನು ಜನರಿಗೆ ಅರ್ಥವಾಗುವಂತೆ 7 ಅಧ್ಯಯದಲ್ಲಿ ರೂಪಿಸಲಾಗಿದೆ. ಇದರಲ್ಲಿ ಕನಿಷ್ಟ 3 ಅಧ್ಯಯನ ತಿಳಿದು ಅದರಂತೆ ಬಾಳಿದರೆ ಈ ಸಮಾಜ ಸಾರಸ್ಯದಿಂದ ಸಾಗುತ್ತದೆ ಎಂದು ಹೇಳಿದರು.

ಪ.ಪಂ. ಸದಸ್ಯರಾದ ಹಂಜಾ, ಜಯಮ್ಮ, ತಾ.ಪಂ. ಇಒ ದಯಾವತಿ, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಟಿಪಿಒ ಶ್ರೀನಿವಾಸ್, ವಿವಿಧ ಸಂಘ ಸಂಸ್ಥೆಯ ಮುಖಂಡರಾದ ಸುಂದ್ರೇಶ್ ಹೊಯ್ಸಳಲು, ಪಿ.ಕೆ.ಮಂಜುನಾಥ್, ರಮೇಶ್ ಲೋಕವಳ್ಳಿ, ಹರೀಶ್ ಸಬ್ಬೇನಹಳ್ಳಿ, ಅಣ್ಣೇಗೌಡ, ಸುಧೀರ್ ಚಕ್ರಮಣಿ, ಸೀತಮ್ಮ, ಪೂರ್ಣೇಶ್, ಬಕ್ಕಿ ರವಿ, ಬಕ್ಕಿ ಮಂಜು ಮತ್ತಿತರರಿದ್ದರು.
*****

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ