8Mudigere1A

 

 

ಮೂಡಿಗೆರೆ ಕ್ಷೇತ್ರದಲ್ಲಿ ಸವಾಲಾಗಿ ಪರಿಣಮಿಸಿರುವ ನಿವೇಶನ ಸಮಸ್ಯೆ ಬಗೆಹರಿಸಲು ಸಂಪೂರ್ಣ ಶ್ರಮಿಸುತ್ತಿದ್ದೇನೆ. ಇದಕ್ಕೆ ತಾಲೂಕಿನ ಜನರ ಸಹಕಾರ ಬೇಕಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಬುಧವಾರ ಪಟ್ಟಣದ ಹೊರವಲಯದ ಬಿಳಗುಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೆಸಗಲ್ ಗ್ರಾ.ಪಂ. ಕಟ್ಟಡ ಉದ್ಘಾಟಸಿ ಮಾತನಾಡಿದರು.

ಹೆಸಗಲ್ ಗ್ರಾ.ಪಂ. ಕಟ್ಟಡ ಕಾರ್ಪೋರೇಟ್ ರೀತಿಯಲ್ಲಿ ನಿರ್ಮಾಣಗೊಂಡಿದೆ. ಅದೇ ರೀತಿಯಲ್ಲಿ ಎಲ್ಲಾ ಸದಸ್ಯರು ಹಾಗೂ ನೌಕರರು ಜನರಿಗೆ ಉತ್ತಮ ಸೇವೆ ನೀಡಬೇಕೆಂದ ಅವರು, ತಾನು ಶಾಸಕಿಯಾದ ಬಳಿಕ ಅನೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಂತ ಹಂತವಾಗಿ ನಿವೇಶನ ಸಮಸ್ಯೆ ಬಗೆಹರಿಸುತ್ತಾ ಬಂದಿದ್ದೇನೆ. ನಿವೇಶನಕ್ಕಾಗಿ ಪ್ರತಿಭಟನೆ ಮಾಡಿ ಒತ್ತಡ ಹಾಕುವುದರಿಂದ ಪ್ರಯೋಜನವಿಲ್ಲ. ನಿವೇಶನಕ್ಕಾಗಿ ಭೂ ಕಬಳಿಕೆ ಮಾಡಿಕೊಂಡವರ ಜತೆ ಹರಸಾಹಸ ಪಡುತ್ತಿದ್ದೇನೆ. ಇದಕ್ಕೆ ಕ್ಷೇತ್ರದ ಜನತೆ ತನ್ನ ಜತ ನಿಂತರೆ ನಿವೇಶನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಲು ಶ್ರಮಿಸುವೆ ಎಂದು ಹೇಳಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೊಡುವ ಆಶ್ವಾಸನೆ, ಭರವಸೆ ಸಂಪೂರ್ಣವಾಗಿ ಈಡೇರಿಸಲು ಗ್ರಾ.ಪಂ. ಸದಸ್ಯರಿಂದ ಎಂಎಲ್‍ಸಿ, ಎಂಎಲ್‍ಎ, ಎಂಪಿ ವರೆಗೂ ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆಯದೇ, ಅಭಿವೃದ್ಧಿ ಜತೆಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ದೊರಕಿಸುಲು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸಗಲ್ ಗ್ರಾ.ಪಂ. ಅಧ್ಯಕ್ಷೆ ನಜ್ಮಾ ಬೇಗಂ ವಹಿಸಿದ್ದರು. ಉಪಾಧ್ಯಕ್ಷ ಎಚ್.ಆರ್.ಆದರ್ಶ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಗ್ರಾ.ಪಂ. ಸದಸ್ಯರಾದ ಬಿ.ಸಿ.ಪ್ರಜಾವತಿ, ಬಿ.ಎಂ.ರಾಧಾ, ಸತ್ಯವತಿ, ಬಿ.ಎನ್.ನಂದಾ, ಹಾಲಮ್ಮ, ಅಶೋಕ್, ಶಿವಣ್ಣ, ಆಶಾ, ಅರವಿಂದ್, ಎಚ್.ಎಲ್.ಪ್ರಶಾಂತ್, ಸುಧಾಮಂಜುನಾಥ್, ಚಂದ್ರಶೇಖರ್, ಪೂರ್ಣೇಶ್, ಕೆ.ಎಂ.ರವಿ, ಶ್ವೇತಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ತಾ.ಪಂ. ಇಒ ದಯಾವತಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ