IMG-20251014-WA0006

 

 

ಅಕ್ಟೋಬರ್ 8 ರಂದು ಮೂಡಿಗೆರೆ ಪಟ್ಟಣದಲ್ಲಿ ಕ್ರೇನ್ ಸ್ಕೂಟಿ ಮೇಲೆ ಹರಿದು ಅಂಗನವಾಡಿ ಶಿಕ್ಷಕಿ ಸಂಪ್ರೀತಾ ಎಂಬುವವರು ಸಾವನ್ನಪ್ಪಿದ್ದರು. ಅಮಾಯಕ ಅಂಗನವಾಡಿ ಶಿಕ್ಷಕಿ ಸಾವಿಗೆ ಸೂಕ್ತ ನ್ಯಾಯ ಮತ್ತು ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮೂಡಿಗೆರೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಒತ್ತಾಯ ಮಾಡಿದೆ. ಈ ಸಂಬಂಧ ಮೂಡಿಗೆರೆ ತಹಸೀಲ್ದಾರ್ ಮತ್ತು ಸಿಡಿಪಿಒ ಅವರಿಗೆ ಮನವಿ ಸಲ್ಲಿಸಿದೆ.

ಅವರು ತಮ್ಮ ಮನವಿಯಲ್ಲಿ  AITUC  ಸಂಘಟನೆಯ ನಮ್ಮ ಕಾರ್ಯಕರ್ತೆಯಾದ ಕು.ಸಂಪ್ರಿತಾ ಅಪಘಾತದಿಂದ ಮರಣ ಹೊಂದಿರುತ್ತಾರೆ.

‎ಅಪಘಾತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ವಾಹನ ಬ್ರೆಕ್ ಫ಼ೈಲ್ ಎಂದು ಹೇಳಿರುತ್ತಾರೆ. ಆದರೆ ಅದರಲ್ಲಿ ನಮಗೆ ನಂಬಿಕೆ ಇಲ್ಲ. ದಯಮಾಡಿ ತಾವು ಈ ಅಪಘಾತಕ್ಕೆ ನಿಜವಾದ ಕಾರಣ ಏನು ಎಂದು  ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ..

‎ಮೃತಳಾದ ಸಂಪ್ರೀತಳ ಕುಟುಂಬಕ್ಕೆ ಇಂದು ದಾರಿ ತೊಚದಾಗಿದೆ. ಅದ್ದರಿಂದ ಮೃತ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡ ಬೇಕೆಂದು ಅಗ್ರಹಿಸಿದರು..

ಅದೆ ದಿನ ಅಂಗನವಾಡಿ ಕಾರ್ಯಕರ್ತೆ ಸುಜಾತ ಅಪಘಾತಕ್ಕೆ ಈಡಾಗಿದ್ದಾರೆ. ಅವರ ಆಸ್ಪತ್ರೆಯ ಖರ್ಚಿಗಾಗಿ ರೂ. 25 ಲಕ್ಷ ಪರಿಹಾರ ನೀಡ ಬೇಕೆಂದು ಅಗ್ರಹಿಸಿದರು…

ಅಂಗನವಾಡಿ ಕಾರ್ಯಕರ್ತೆಯರನ್ನು. ಸಹಾಯಕಿಯರನ್ನು ಇನ್ನು ಮುಂದೆ ಮೌಕಿಕ ಆದೇಶ ನೀಡಿ ಕೆಲಸಕ್ಕೆ ಕರೆಯಬಾರದು ಎಂದು ಅಗ್ರಹಿಸಿದರು.

‎ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಶೈಲಾ, ಕಾರ್ಯದರ್ಶಿ ವನಜಾಕ್ಶಿ, ಸೇರಿದಂತೆ ನೂರಾರು ಕಾರ್ಯಕರ್ತೆಯರು, ಸಹಾಯಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮನವಿಯನ್ನು  ಮೂಡಿಗೆರೆ ಶಾಸಕಿಯವರ ಕಛೇರಿಗೆ, ತಹಶಿಲ್ದಾರರಿಗೆ, ಹೆಸಗಲ್ ಗ್ರಾಮ ಪಂಚಾಯಿತಿ ಅದ್ಯಕ್ಷರಿಗೆ ಇಲಾಖೆಯ ಮುಖ್ಯಸ್ಥರಿಗೆ(CDPO) ಸಲ್ಲಿಸಲಾಯಿತು.

ಮೂಡಿಗೆರೆ : ಕ್ರೇನ್ ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿ : ಅಂಗನವಾಡಿ ಶಿಕ್ಷಕಿ ಸಾವು, ಇನ್ನೋರ್ವ ಶಿಕ್ಷಕಿ ಗಂಭೀರ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ