MDG 14 Photo-1

 

 

ನವೆಂಬರ್ 2ರಂದು ನಡೆಯಲಿರುವ ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಟಿ.ಎಂ. ಗಜೇಂದ್ರ ಹೇಳಿದರು.

ಅವರು ಮಂಗಳವಾರ ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವರಿಷ್ಟರ   ತೀರ್ಮಾನದಂತೆ ಎಲ್ಲಾ ಚುನಾವಣೆಗಳಲ್ಲಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಾಗುವುದು. ಅದರಂತೆ ಮೂಡಿಗೆರೆ ಟಿಎಪಿಸಿಎಂಎಸ್ ನ 8 ಕ್ಷೇತ್ರಗಳಲ್ಲಿ  ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಸಲಾಗುವುದು, ಎರಡೂ ಪಕ್ಷಗಳು ಸೇರಿರುವುದರಿಂದ ಚುನಾವಣೆಯಲ್ಲಿ ಆನೆ ಬಲ ಬಂದಂತಾಗಿದ್ದು, ಗೆಲುವು ನಿಶ್ಚಿತ ಎಂದರು.

ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಬಾಳೂರು ಲಕ್ಷ್ಮಣಗೌಡ ಮಾತನಾಡಿ ವರಿಷ್ಠರ ನಿರ್ದೇಶನದಂತೆ ಸ್ಥಳೀಯವಾಗಿ ಸಹಕಾರ ಸಂಘವಿರಬಹುದು, ಗ್ರಾಮ ಪಂಚಾಯಿತಿ ಇರಬಹುದು ಎಲ್ಲಾ ತಳ ಹಂತದ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಾಗುವುದು.  ಜೆಡಿಎಸ್ ಕೆಲ ಸದಸ್ಯರು ಪಕ್ಷವಿರೋಧಿ ಚಟುವಟಿಕೆ ಮತ್ತು ಗೊಂದಲ ಮೂಡಿಸುತ್ತಿದ್ದಾರೆ. ಮತದಾರರು, ಪಕ್ಷದ ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದರು.

ಜೆಡಿಎಸ್ ಹಿರಿಯ ಮುಖಂಡರ ಡಿ.ಬಿ. ಅಶೋಕ್ ದಾರದಹಳ್ಳಿ ಮಾತನಾಡಿ ; ಎನ್.ಡಿ.ಎ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೊಂದಾಣಿಕೆಯಾಗಿದ್ದು, ಅದರ ಭಾಗವಾಗಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಎಲ್ಲಾ ಚುನಾವಣೆಗಳನ್ನು ಎದುರಿಸುವುದು ಎಂದು ತೀರ್ಮಾನವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಲೋಕಸಭಾ ಚುನಾವಣೆ ವರೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಬೇಕು ಎಂದು ವರಿಷ್ಟರು ತೀರ್ಮಾನ ಕೈಗೊಂಡಿದ್ದಾರೆ. ಕೆಲವರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ದ ವರಿಷ್ಠರಿಗೆ ದೂರು ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಸಿ. ಹೂವಪ್ಪ, ಅಜಿತ್ ಗೌಡ ಬಾಳೂರು,  ಉತ್ತಮ್ ಹಂತೂರು, ಎಂ.ಕೆ. ರವಿಗೌಡ, ನಿಡುವಾಳೆ ಚಂದ್ರು, ರೆಹಮಾನ್, ನೂರುಲ್ಲಾ, ಸುರೇಂದ್ರ ಹ್ಯಾರಗುಡೆ, ಲೋಹಿತ್ ಬಿದರಹಳ್ಳಿ, ಧರ್ಮೇಶ್ ಹಂಡುಗುಳಿ , ಪ್ರಸನ್ನ ಗೌತುವಳ್ಳಿ, ಸಂದೇಶ್ ಪಟ್ಟದೂರು, ಮಂಜುನಾಥ್ ಮಡ್ಡಿಕೆರೆ, ರಘು ಉದುಸೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ