MDG 14-2 Photo-1

 

 

ನವೆಂಬರ್ 2ರಂದು ನಡೆಯಲಿರುವ ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆಯ ಹೆಸರಿನಲ್ಲಿ ಸಮಾನ ಮನಸ್ಕರು ಪಕ್ಷಾತೀತವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿರುವುದಾಗಿ ಸಂಸ್ಥೆಯ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೇಸ್ ಮುಖಂಡ ಎಂ.ಎಂ. ಲಕ್ಷ್ಮಣಗೌಡ ತಿಳಿಸಿದರು.

ಅವರು ಮಂಗಳವಾರ ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 1997-98ಕ್ಕೆ ಹಿಂದಿನ ದಿನಗಳಲ್ಲಿ ಟಿಎಪಿಸಿಎಂಎಸ್ ಹೊಂದಿದ್ದ ಅಕ್ಕಿಗಿರಣಿಯು ಸಂಘದ ಮುಖ್ಯ ಆದಾಯ ತರುವ ಶಾಖೆಯಾಗಿತ್ತು. ಮುಂದಿನ ದಿನಗಳಲ್ಲಿ ಸಂಘವು ಅನಿವಾರ್ಯವಾಗಿ ನಷ್ಟ ಅನುಭವಿಸುವ ಸೂಚನೆ ಇತ್ತು. ಅಕ್ಕಿಗಿರಣಿಗೆ ಪರ್ಯಾಯವಾಗಿ ಹೆಚ್ಚು ಲಾಭ ತರುವ ವ್ಯವಸ್ಥೆಯನ್ನು ಹುಟ್ಟುಹಾಕುವುದು ಅನಿವಾರ್ಯವಾಗಿತ್ತು. 2001-02 ರ ಆಡಳಿತ ಮಂಡಳಿಗೆ ನಾನು ಸದಸ್ಯನಾಗಿ ನಂತರ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಆಡಳಿತ ಮಂಡಳಿಯಲ್ಲಿ ವಿಷಯ ಪ್ರಸ್ತಾಪಿಸಿ ರೈತ ಭವನ ನಿರ್ಮಾಣ ಮಾಡಲಾಯಿತು.

ಮುಂದಿನ ಹಂತದಲ್ಲಿ ಭೋಜನ ಶಾಲೆಯನ್ನು ನಿರ್ಮಾಣ, ಭೋಜನಶಾಲೆಯ ಮೇಲಂತಸ್ತಿನ ಕಟ್ಟಡ, ರೈತಭವನದ ಅಂಗಳಕ್ಕೆ ಇಂಟರ್ಲಾಕ್ ಅಳವಡಿಕೆ, ಹಳೆಯ ಗೋಡೌನ್ ಭಾಗವನ್ನು ಪರಿವರ್ತನೆ ಮಾಡಿ ಏಳು ಸಂಖ್ಯೆಯ ವಾಣಿಜ್ಯಮಳಿಗೆ ನಿರ್ಮಾಣ, ಆರು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲಾಯಿತು. ಮೇಲ್ಕಂಡ ಕಾಮಗಾರಿಗಳು ಪೂರ್ಣಗೊಂಡಾಗ ಕಾಮಗಾರಿಗಳಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗವಾಗಿದೆ ಎಂದು ಆರೋಪ ಮಾಡಲಾಯಿತು. ಕಳೆದ ಐದು ವರ್ಷಗಳ ಕಾಲ ವಿಚಾರಣೆ ನೆಡೆದು ಮಾಡಿದ ಆಪಾದನೆಗಳೆಲ್ಲಾ ಪಕ್ಕಾ ಸುಳ್ಳು ಎಂದು ವರದಿ ಬಂದಿರುತ್ತೆ.

ಇದೀಗ ಆರೋಪ ಮುಕ್ತನಾಗಿ ಮುಂದಿನ ಅವಧಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಜೊತೆಗೆ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವ ಸಮಾನ ಮನಸ್ಕರ ತಂಡವನ್ನು ಕಟ್ಟಿ ಒಟ್ಟಾಗಿ ಕಣಕ್ಕಿಳಿಯುತ್ತಿದ್ದೇವೆ. ಸಂಸ್ಥೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲು ತಮ್ಮ ತಂಡ ಬದ್ಧವಾಗಿದ್ದು, ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ ; ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು, ಇದು ರೈತರಿಗಾಗಿ, ಸಾರ್ವಜನಿಕರ ಸೇವೆಗಾಗಿ ಇರುವ ಕ್ಷೇತ್ರ. ಮೂಡಿಗೆರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ನಾವು ಪಕ್ಷಾತೀತವಾಗಿ ಹೊಂದಾಣಿಕೆ ಮಾಡಿಕೊಂಡು ಉತ್ತಮ ಅನುಭವಿ ತಂಡವನ್ನು ಕಣಕ್ಕಿಳಿಸುತ್ತಿದ್ದೇವೆ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ, ವಿವಿಧ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ನಮ್ಮ ತಂಡದಲ್ಲಿದ್ದಾರೆ.

ನಮ್ಮ ತಂಡ ಅಧಿಕಾರಕ್ಕೆ ಬಂದರೆ ಭವಿಷ್ಯದ ದೃಷ್ಟಿಯಿಂದ ಸಂಘದ ಎಂ.ಜಿ.ರಸ್ತೆಯ ವಾಣಿಜ್ಯಮಳಿಗೆ ಕಟ್ಟಡ ಎರಡು ಅಂತಸ್ತಿಗೆ ಅಂದಾಜು ಮಾಡಿರುವುದನ್ನು ಕೆಡವಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ, ಆಡಳಿತ ಮಂಡಳಿಯ ಕಛೇರಿಯನ್ನು ಈ ಕಟ್ಟಡದ ನಾಲ್ಕನೇ ಅಂತಸ್ತಿಗೆ ವರ್ಗಾಯಿಸಿಕೊಂಡು ಹಳೆಯ ಆಡಳಿತ ಕಚೇರಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಗೋಡೌನ್ಗಳನ್ನು ಕೆಡವಿ, ಅಗತ್ಯ ಸಂಪನ್ಮೂಲ ಕ್ರೋಢೀಕರಿಸಿ ನಾಲ್ಕು ಅಂತಸ್ತಿನ ಹೊಸಕಟ್ಟಡ ನಿರ್ಮಾಣಮಾಡುವುದು, ರೈತರಿಗೆ ಬೇಕಾದ ಎಲ್ಲ ಸಲಕರಣೆಗಳನ್ನು ಒಂದೇಕಡೆ ಸಿಗುವಂತೆ ವ್ಯವಸ್ಥೆ ಮಾಡುವುದು ಸೇರಿದಂತೆ ಈ ಎಲ್ಲ ಕಾರ್ಯಯೋಜನೆಗಳನ್ನು ಕ್ರಮಬದ್ಧವಾಗಿ ಒಂದು ಯೋಜನೆ ಪರಿಪೂರ್ಣವಾಗಿ ಪೂರ್ಣಗೊಂಡನಂತರ ಮತ್ತೊಂದನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಯು.ಹೆಚ್. ಹೇಮಶೇಖರ್, ಎಂ.ಎಸ್. ಅನಂತ, ಕೆ.ಪಿ. ಭಾರತಿ, ಶಾಂತಲಾ ನಾಗೇಶ್, ಎಂ.ಎನ್. ಮನು ಮಾಲಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ