IMG-20251015-WA0386

 

 

ಮೂಡಿಗೆರೆ ತಾಲ್ಲೂಕಿನ  ಕೊಟ್ಟಿಗೆಹಾರ ಸಮೀಪದ ಕೋಗಿಲೆ, ಸಬ್ಲಿ ಹಾಗೂ ಬಿನ್ನಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕಿ ನಯನಾ ಮೋಟಮ್ಮ ಬುಧವಾರ ನೆರವೇರಿಸಿದರು.
ಅವರಿ ಈ ಸಂದರ್ಭದಲ್ಲಿ ಮಾತನಾಡಿ’ ತರುವೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಿನ್ನಡಿ ಗ್ರಾಮಕ್ಕೆ ಕಾವೇರಿ ನೀರಾವರಿ ನಿಗಮ ವತಿಯಿಂದ ರೂ50ಲಕ್ಷ ಅನುದಾನದಲ್ಲಿ ಸೋಮಾವತಿ ಹಳ್ಳಕ್ಕೆ ಚೆಕ್ ಡ್ಯಾಂ, ತಡೆಗೋಡೆ ನಿರ್ಮಾಣ ಮಾಡಲಾಗುವುದು. ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಿಲೆ ಗ್ರಾಮದಲ್ಲಿ ವಿಶ್ವೇಶ್ವರ ಜಲ ನಿಗಮದಡಿ ರೂ 52ಲಕ್ಷ ವೆಚ್ಚದಲ್ಲಿ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಮೂಲಸೌಲಭ್ಯದ ಅನುಕೂಲಕ್ಕಾಗಿ ಅನುದಾನ ನೀಡಲಾಗಿದೆ. ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಲಿ ಗ್ರಾಮದಲ್ಲಿ ರೂ30ಲಕ್ಷ ವಿಶೇಷ ಅನುದಾನದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಗುತ್ತಿಗೆದಾರರು ಶೀಘ್ರವಾಗಿ ಕಾಮಗಾರಿ ಆರಂಭಿಸಿ ಗುಣಮಟ್ಟದ ರಸ್ತೆ,ಸೇತುವೆ,ಚೆಕ್ ಡ್ಯಾಂ ನಿರ್ಮಿಸಿ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳನ್ನು ಶೀಘ್ರವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದರು.
ಗ್ರಾಮದ ಜನರು ಕಾಮಗಾರಿ ನಡೆಸುವಾಗ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಜನರು ಗ್ರಾಮದ ಸಮಸ್ಯೆಗಳು ಇದ್ದಲ್ಲಿ ಶಾಸಕರ ಕಚೇರಿಗೆ ಬಂದು ಅರ್ಜಿ ನೀಡಬಹುದು. ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತವಾಗಿ ಸ್ಪಂಧಿಸಲಾಗುವುದು’ ಎಂದರು.
ಭೂಮಿ ಪೂಜೆ ಸಂದರ್ಭದಲ್ಲಿ ಕಾವೇರಿ ನಿರಾವರಿ ನಿಗಮದ ಮುಖ್ಯ ಇಂಜೀನಿಯರ್ ದಯಾನಂದ್, ರಾಮಕೃಷ್ಣ, ತರುವೆ ಗ್ರಾ.ಪಂ.ಅಧ್ಯಕ್ಷೆ ಸುಶೀಲ,  ಬಣಕಲ್  ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಟಿ.ಎಂ.ಸುಬ್ರಹ್ಮಣ್ಯ, ಕ್ರಿಶ್ಚಿಯನ್ ಅಬಿವೃದ್ದಿ ನಿಗಮದ ಅಧ್ಯಕ್ಷ ಹರ್ಷ ಮೆಲ್ವಿನ್ ಲಸ್ರಾದೊ, ಮುಖಂಡರಾದ ವಿಜೇಂದ್ರ ಬಿನ್ನಡಿ, ಸಬ್ಲಿ ದೇವರಾಜ್, ಅಜೀಜ್, ವಿಜೇಂದ್ರ ತರುವೆ, ಅರುಣ್ ಗುತ್ತಿ, ರಂಜಿತ್ ಕೋಗಿಲೆ, ಅರುಣ್ ಕುಮಾರ್, ವಿನಯ್ ಕುಮಾರ್,  ಜರೀನಾ, ಗೋಪಾಲ್, ಸದಸ್ಯರಾದ ಸ್ವರೂಪ, ಪ್ರಶಾಂತ್, ಮಧು ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ