jci samstha1

 

 

ಮೂಡಿಗೆರೆ ಜೇಸಿ ಭವನದಲ್ಲಿ ಜೇಸಿಐ ಸಂಸ್ಥಾಪಕರ ದಿನ ಆಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಜೆಸಿಐ ಅಲೂಮ್ನಿ ಕ್ಲಬ್ ಝೋನ್ ಚೇರ್ಮನ್ ಜೇಸಿ ಯೋಗೇಶ್ ಹೆಚ್.ಕೆ. ಅವರು – ಇದೀಗ ಜೆಸಿಐ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ವಿಸ್ತರಿಸಿದೆ. ವಿಶ್ವದ ಅತ್ಯಂತ ಶ್ರೇಷ್ಠ ಯುವ ಸಂಘಟನೆಗಳಲ್ಲಿ ಒಂದಾದ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (JCI) ತನ್ನ ಪರಂಪರೆಯನ್ನು ಇಂದು ಆಚರಿಸುತ್ತಿದೆ. 1915ರಲ್ಲಿ ಹೆನ್ರಿ ಗೈಸೆನ್ ಬಿಯರ್ ರವರು ಈ ಜೆಸಿಐ ಸಂಸ್ಥೆಯನ್ನು ಸ್ಥಾಪಿಸಿದರು. ಈ ಜಾಗತಿಕ ಚಳುವಳಿ ಯುವ ನಾಯಕರನ್ನು, ಬದಲಾವಣೆಯ ಶಿಲ್ಪಿಗಳನ್ನು ಹಾಗೂ ದೃಷ್ಟಿವಂತರನ್ನು ರೂಪಿಸುತ್ತಿದೆ, 40 ವರ್ಷಗಳ ಬಳಿಕ ಸದಸ್ಯರು ಜೆಸಿಐ ಅಲೂಮ್ನಿ ಕ್ಲಬ್‌ಗೆ ಸೇರಿ ಪ್ರಾದೇಶಿಕ ಚೇರ್ಮನ್, ವಲಯಾಧ್ಯಕ್ಷ ಹಾಗೂ ರಾಷ್ಟ್ರೀಯ ಚೇರ್ಮನ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಬಹುದು ಎಂದರು.

2026 ನೇ ಸಾಲಿನ ನಿಯೋಜಿತ ಅಧ್ಯಕ್ಷರಾದ ಜೆಸಿ ಸುನಿಲ್ ಅವರು ಸಭೆಯಲ್ಲಿ ಮಾತಾನಾಡುತ್ತಾ  “ಯುವಜನರಿಗೆ ಸಕಾರಾತ್ಮಕ ಬದಲಾವಣೆಯನ್ನು ತರಲು ಅಭಿವೃದ್ಧಿ ಅವಕಾಶಗಳನ್ನು ನೀಡುವುದು.” ವೃತ್ತಿಪರರು ಹಾಗೂ ಉದ್ಯಮಿಗಳನ್ನು ಒಗ್ಗೂಡಿಸುವ ಜಾಗತಿಕ ವೇದಿಕೆ ಆಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಜೆಸಿಐ ಮೂಡಿಗೆರೆ ಅಧ್ಯಕ್ಷ ಜೆಸಿ ಪ್ರದೀಪ್ ಕೆ.ಕೆ. ವಹಿಸಿದ್ದರು.  ಮೂಡಿಗೆರೆ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಡಾ. ರಾಮಚರಣ ಅಡ್ಯಂತಾಯ, ಮಾಜಿ ಅಧ್ಯಕ್ಷ ಬಿ. ಬಸವರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಜೆಸಿಐ ಅಲೂಮ್ನಿ ಕ್ಲಬ್ ಸದಸ್ಯರಾದ ರಾಜೇಶ್ ಜಿ.ಟಿ., ವಿಶ್ವಕುಮಾರ್, ಪವನಾ ವಿಜಯಕುಮಾರ್, ದೀಪಕ್ ದೊಡ್ಡಯ್ಯ, ಚಂದ್ರಶೇಖರ್, ನಯನ್ ಕಣಚೂರು ಹಾಗೂ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಸ್ಥಾಪಕರ ದಿನಾಚರಣೆ ಸವಿನೆನಪಿನಲ್ಲಿ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ