Screenshot_20251029-130215~2

 

 

ಚಿಕ್ಕಮಗಳೂರು ಮಹಿಳಾ ಜಾಗೃತಿ ಸಂಘದ ವತಿಯಿಂದ ಮೂಗ್ತಿಹಳ್ಳಿ ಸರ್ಕಾರಿ ಮಾದರಿ ಹಿರಿಯಪ್ರಾಥಮಿಕ ಶಾಲಾ ಮಕ್ಕಳಿಗಿಂದು ಟ್ರ್ಯಾಕ್ ಸೂಟ್ ವಿತರಿಸಲಾಯಿತು.

ಮಹಿಳಾ ಜಾಗೃತಿ ಸಂಘದ ಸಹಕಾರ್ಯದರ್ಶಿ ಗೀತಾ ಸುಂದರೇಶ್ ಈ ಸಂದರ್ಭದಲ್ಲಿ ಮಾತನಾಡಿ ಸಮವಸ್ತ್ರ ಮತ್ತು ಟ್ರ್ಯಾಕ್‍ಸೂಟ್‍ಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾನತೆಯನ್ನು ತರಲು ಸಹಕಾರಿ. ಟ್ರ್ಯಾಕ್‍ಸೂಟ್ ಮಕ್ಕಳು ಕವಾಯಿತ್ ಮಾಡಲು ಕ್ರೀಡಾ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲಕರ ಎಂದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಗತ್ಯತೆಗೆ ಸ್ಪಂದಿಸುವ ಆಶಯ ಸಂಘದ್ದಾಗಿದೆ. ಮೂಗ್ತಿಹಳ್ಳಿ ಶಾಲೆಯಿಂದ ಟ್ರ್ಯಾಕ್ ಸೂಟ್ ಬೇಡಿಕೆ ಬಂದಿದ್ದು ಶಾಲೆಯ 22ಮಕ್ಕಳಿಗೆ 11,000ರೂ.ವೆಚ್ಚದಲ್ಲಿ ಪೂರೈಸಲಾಗಿದೆ. ತಮ್ಮೊಂದಿಗೆ ಕಾರ್ಯದರ್ಶಿ ಕಾತ್ಯಾಯಿನಿಚಂದ್ರಶೇಖರ್ ನೇತೃತ್ವದಲ್ಲಿ ರೇಣುಕಾಕುಮಾರ್, ಗೀತಾಮೂರ್ತಿ, ಭಾರತಿಶಿವರುದ್ರಪ್ಪ ಮತ್ತು ರೇಣುಕಾಪ್ರಸನ್ನ ಕೈಜೋಡಿಸಿದ್ದಾರೆಂದರು.

ನಿರ್ದೇಶಕಿ ಗೀತಾಮೂರ್ತಿ ಮಾತನಾಡಿ 1983ರಲ್ಲಿ ಗೌರಮ್ಮಬಸವೇಗೌಡರ ನೇತೃತ್ವದಲ್ಲಿ ಆರಂಭಗೊಂಡ ಸಂಘ ನಿರಂತರವಾಗಿ ಕಾರ್ಯ ಚಟುವಟಿಕಗಳನ್ನು ನಡೆಸಿಕೊಂಡು ಬಂದಿದೆ. ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆಗೆ ವೇದಿಕೆ ನಿರ್ಮಿಸುತ್ತಿದೆ. ಇದರ ಜೊತೆಗೆ ಒಂದಷ್ಟು ಸೇವಾಕಾರ್ಯವನ್ನು ಮಾಡಬೇಕೆಂಬುದು ಹಿರಿಯರ ಅಪೇಕ್ಷೆ. ಪ್ರತಿವರ್ಷ ಕನಿಷ್ಟು ನಾಲ್ಕು ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಅಲ್ಪ ಕಾಣಿಕೆಯನ್ನು ಸಲ್ಲಿಸಲಾಗುತ್ತಿದೆ ಎಂದರು.

ಕೊಡುಗೆ ಸ್ವೀಕರಿಸಿ ಕೃತಜ್ಞತೆಸಲ್ಲಿಸಿದ ಶಾಲಾಮುಖ್ಯಶಿಕ್ಷಕಿ ಶುಭಮಣಿ ಗ್ರಾಮೀಣ ರೈತಾಪಿವರ್ಗದ ಮಕ್ಕಳು ಕಲಿಯುತ್ತಿರುವ ಸರ್ಕಾರಿ ಶಾಲೆಯನ್ನು ಆಯ್ಕೆಮಾಡಿಕೊಂಡು ಅವಶ್ಯಕತೆ ಅರಿತು ನೆರವು ನೀಡುವ ಮಹಿಳಾಜಾಗೃತಿ ಸಂಘದ ಕಾರ್ಯ ಸಮಾಜಕ್ಕೆ ಮಾದರಿ ಎಂದರು. ಶಿಕ್ಷಕರಾದ ನಾಗಮಣಿ ಮತ್ತು ಆನಂದ, ಸಂಘದ ಸದಸ್ಯೆ ರೇಣುಕಾಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ