adithya 2

 

 

ಮಹಿಳೆಯೊಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಅವರ ಸ್ನೇಹಿತರಿಗೆ ಕಳುಹಿಸಿ ಮಹಿಳೆಗೆ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬಂಧಿಸ ಲಾಗಿದೆ.

ಆದಿತ್ಯ ಬಿನ್ ಶಂಕರೇಗೌಡ ಎಂಬಾತ ಫೋನ್ ಕಾಲ್ ನಲ್ಲಿ ಪರಿಚಯವಾಗಿ ವಾಟ್ಸಾಪ್ ಕಾಲ್ ಮುಖಾಂತರ ನಿರಂತರವಾಗಿ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಚಿಕ್ಕಮಗಳೂರು ನಗರದ ಜಯನಗರದ ವಾಸಿ, ಮಹಿಳೆಯೊಬ್ಬರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವೈಯಕ್ತಿಕ ಫೋಟೋಗಳನ್ನು ಪಡೆದು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಗೂ ನನ್ನ ಸ್ನೇಹಿತರಿಗೆ ಕಳುಹಿಸಿ, ತೋರಿಸಿ ಕಿರುಕುಳ ನೀಡಿದ್ದು & ಜೀವ ಬೆದರಿಕೆ  ಹಾಕಿರುವುದಾಗಿಯೂ ದೂರು ನೀಡಿದ್ದರು .

ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಮೊಕದ್ದಮೆ  ದಾಖಲಿಸಲಾಗಿತ್ತು. ಆರೋಪಿ ಆದಿತ್ಯನನ್ನು ವಶಕ್ಕೆ ಪಡೆದು  ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

 

ಇತ್ತ ಪರಿಚಿತರ ಪತ್ನಿಯರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು, ಕಿರುಕುಳ ನೀಡಿತ್ತಿದ್ದನೆಂಬ ಆರೋಪದ ಮೇಲೆ ಕಾಂಗ್ರೇಸ್ ಕಾರ್ಯಕರ್ತರೇ ಈತನ ಮನೆಗೆ ತೆರೆಳಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಆದಿತ್ಯನ ಪತ್ನಿ ಮಧ್ಯೆ ಬಂದು ಪತಿಗೆ ಹೊಡೆಯಬೇಡಿರೆಂದು ಅಂಗಾಲಾಚುತ್ತಿರುವ ವಿಡಿಯೋ ವೈರಲ್ ಆಗಿದೆ.

ಸದರಿ ಆದಿತ್ಯ ಆಲ್ದೂರು ಹೋಬಳಿ ಬೆರಣಗೋಡು ಗ್ರಾಮದವನು ಎಂದು ತಿಳಿದುಬಂದಿದ್ದು, ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯನಾಗಿದ್ದು, ಪ್ರಸ್ತುತ ಆಲ್ದೂರು ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷನಾಗಿದ್ದಾನೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಈ ರೀತಿ ದುರ್ವರ್ತನೆ ತೋರಿದ ಆದಿತ್ಯನ ವಿರುದ್ಧ ಸ್ವಪಕ್ಷದವರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ