sahakara union

 

 

ನವೆಂಬರ್ 9ರಂದು ನಡೆದ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಪಡೆದಿದ್ದಾರೆ.

ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದರು. ಉಳಿದ 7 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 13 ಸ್ಥಾನಗಳಲ್ಲಿ 12 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು, ಜಿಲ್ಲಾ ಸಹಕಾರ ಯೂನಿಯರ್ ಅಧಿಕಾರ ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ಬಂದಿದೆ.

ಜಿಲ್ಲಾಮಟ್ಟದ ಕಾರ್ಯವ್ಯಾಪ್ತಿ ಹೊಂದಿದ ಸಹಕಾರ ಸಂಘಗಳ ವತಿಯಿಂದ ಬಿ.ಸಿ.ಲೋಕಪ್ಪಗೌಡ, ಮೂಡಿಗೆರೆ ತಾಲ್ಲೂಕಿನಿಂದ ಜಿ.ಕೆ. ದಿವಾಕರ್, ಕೊಪ್ಪ ತಾಲ್ಲೂಕಿನಿಂದ ಹೆಚ್.ಕೆ. ಪ್ರಶಾಂತ್, ಶೃಂಗೇರಿ ತಾಲ್ಲೂಕಿನಿಂದ ಸುಭಾಷ್, ಕಡೂರು ತಾಲ್ಲೂಕಿನಿಂದ ಸೀಗೆಹಡ್ಲು ಹರೀಶ್, ಎನ್.ಆರ್. ಪುರ ತಾಲ್ಲೂಕಿನಿಂದ ವೆಂಕಟೇಶ್ ಕೆ.ಟಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

7 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕ್ಷೇತ್ರದಿಂದ ಭಾರತಿ ರವೀಂದ್ರ, ಚಿಕ್ಕಮಗಳೂರು ತಾಲ್ಲೂಕಿನಿಂದ ಸಿ.ಎಸ್. ರಂಗನಾಥ್, ತರೀಕೆರೆ ತಾಲ್ಲೂಕಿನಿಂದ ಶಶಿಕುಮಾರ್ ಪಿ., ಹಾಲು ಉತ್ಪಾದಕರ ಕ್ಷೇತ್ರದಿಂದ ಶಶಿಕುಮಾರ್ ಸಿ.ಹೆಚ್, ಸೌಹಾರ್ಧ ಸಹಕಾರಿ ಕ್ಷೇತ್ರದಿಂದ ಜಿ.ಎಸ್. ಮಹಾಬಲ, ಇತರೆ ಕ್ಷೇತ್ರಗಳಿಂದ ಕೆ.ಬಿ. ಸೋಮೇಸ್, ಟಿ.ಧನಪಾಲ್ ಆಯ್ಕೆಯಾಗಿದ್ದಾರೆ.

ವಿಜೇತರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಹಿರಿಯ ಮುಖಂಡರು, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ