lekaki 1

 

 

ಕರ್ನಾಟಕ ಲೇಖಕಿಯರ ಸಂಘದ ಮೂಡಿಗೆರೆ ತಾಲ್ಲೂಕು ಘಟಕದ ಉದ್ಘಾಟನೆ ಸಮಾರಂಭ ನವೆಂಬರ್ 9 ರಂದು ಮೂಡಿಗೆರೆ ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಹೆಚ್.ಎಂ. ಶಾಂತಕುಮಾರ್ ಆಶಯ ನುಡಿಗಳನ್ನು ಆಡಿದರು.

ಶ್ರೀಮತಿ ಪ್ರೇಮಾ ಪುಣ್ಯಮೂರ್ತಿಯವರ ಮನೆಮನದ ಮಾತು ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ, ಉಪನ್ಯಾಸಕಿ ಭಾರತಿ ಹಾದಿಗೆ ; ಕವಿ ಮೊದಲು ಕಿವಿಯಾಗಬೇಕು, ಇವತ್ತು ರೆಡಿಯೋ ಕೇಳುವ ಹವ್ಯಾಸ ಕಡಿಮೆಯಾಗಿದೆ, ಕಷ್ಟವೇ ಇಲ್ಲದಿದ್ದರೆ ಕತೆಗಳು ಹುಟ್ಟುವುದಿಲ್ಲ. ಕಷ್ಟಸುಖಗಳು ಜೀವನದ ಅವಿಭಾಜ್ಯ ಅಂಗಗಳು ಎಂದರು.


ಯುವ ಸಾಹಿತಿ ಅರ್ಜುನ್ ದೇವಾಲಕೆರೆ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ; ಜನಸಾಮಾನ್ಯರನ್ನು ತಲುಪಿದ್ದೇ ನಿಜವಾದ ಸಾಹಿತ್ಯ, ಸಾಹಿತ್ಯ ಕೇವಲ ನಾಲ್ಕು ಗೋಡೆಗಳ ಒಳಗೆ ಸೀಮಿತವಾಗಬಾರದು, ಅದೊಂದು ಜಾತ್ರೆಯಾಗಬೇಕು, ಸಾಹಿತ್ಯದ ಹೂರಣ ಜನಸಾಮಾನ್ಯರನ್ನು ಸುಲಭವಾಗಿ ತಲುಪುವಂತೆ ಆಗಬೇಕು. ಯುವಜನರು ಸಾಹಿತ್ಯ ರಚನೆ ಮತ್ತು ಓದಿನ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮತ್ತು ಯುವ ಸಾಹಿತಿ ಎಸ್. ಶೃತಿ ಅಜ್ಜಂಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಂಚೇಗೌಡ, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ಕರ್ನಾಟಕ ಸಾಹಿತ್ಯ ಸಂಭ್ರಮ ಅಧ್ಯಕ್ಷ ಎಂ.ಎಸ್. ನಾಗರಾಜು ಮುಂತಾದವರು ಇದ್ದರು.

ಮೂಡಿಗೆರೆ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಪ್ರೇಮಾ ಪುಣ್ಯಮೂರ್ತಿ ಮತ್ತು ಅವರ ತಂಡದ ಸದಸ್ಯರು ಅಧಿಕಾರ ವಹಿಸಿಕೊಂಡರು.

ಸುಚಿತ್ರಾ ಪ್ರಸನ್ನ ಪ್ರಾರ್ಥನೆ ನೆರವೇರಿಸಿದರು, ಇಂಪಾ ಸವಿನ್ ನಿರೂಪಿಸಿ, ಶಕುಂತಲಾ ಪಾಟೀಲ್ ಸ್ವಾಗತಿಸಿ, ಕವಿತಾ ಸಂತೋಷ್ ವಂದಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ