ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) (ಕೆಯುಡಬ್ಲ್ಯೂಜೆ )ಮಹಾರಾಷ್ಟ್ರ ಘಟಕದ ನೂತನ ಅಧ್ಯಕ್ಷರಾಗಿ ಡಾ। ಶಿವ ಗೌಡ ಮೂಡಿಗೆರೆ ಆಯ್ಕೆಯಾಗಿದ್ದಾರೆ.
ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳವಾರ ನೆರವೇರಿತು. ಈ ಸಂದರ್ಭದಲ್ಲಿ ಡಾ. ಶಿವ ಮೂಡಿಗೆರೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ಗೌರವಕಾರ್ಯದರ್ಶಿಯಾಗಿ ದಯಾನಂದ ಸಾಲ್ಯಾನ್ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಕೆಯುಡಬ್ಲ್ಯೂಜೆ (ಕರ್ನಾಟಕ) ಕೇಂದ್ರ ಸಮಿತಿಯ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವರು ಮಹಾರಾಷ್ಟ್ರ ಘಟಕದ 2025-2028ನೇ ಸಾಲಿನ ಚುನಾವಣಾಧಿಕಾರಿಯಾಗಿ ಸಿಎಂ ಜಗದೀಶ್ ಬಿ.ಶೆಟ್ಟಿ ಅವರನ್ನು ನೇಮಿಸಿದ್ದು, ಮುಖ್ಯ ಚುನಾವಣಾಧಿಕಾರಿಗಳ ಆದೇಶನುಸಾರ ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ನಡೆಸಿದ್ದು ಮುಂದಿನ ಮೂರು ವರ್ಷಗಳ ಮಹಾರಾಷ್ಟ್ರ ಸಮಿತಿ ಸರ್ವಾನುಮತದಿಂದ ಆಯ್ಕೆಯಾಗಿದೆ ಎಂದು ಸಿಎಂ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಡಾ| ಶಿವ ಮೂಡಿಗೆರೆ (ಅಧ್ಯಕ್ಷರು), ಶ್ಯಾಮ್ ಎಂ.ಹಂದೆ (ಉಪಾಧ್ಯಕ್ಷರು), ಸಾ.ದಯಾ (ದಯಾನಂದ ಸಾಲ್ಯಾನ್- ಗೌ। ಪ್ರಧಾನ ಕಾರ್ಯದರ್ಶಿ), ಸದಾರಾಮ ಎನ್.ಶೆಟ್ಟಿ (ಗೌ। ಖಜಾಂಚಿ), ವಿಶ್ವನಾಥ ಪೂಜಾರಿ ನಿಡೋಡಿ (ಗೌI ಜೊತೆ ಕಾರ್ಯದರ್ಶಿ) ಡಾ। ದುರ್ಗಪ್ಪ ವೈ.ಕೋಟಿಯವರ್ (ಗೌ। ಜೊತೆ ಖಜಾಂಚಿ) ಹಾಗೂ ಆಡಳಿತ ಸಮಿತಿ ಸದಸ್ಯರುಗಳಾಗಿ ರೋನ್ಸ್ ಬಂಟ್ವಾಳ್, ಗೋಪಾಲ ಪೂಜಾರಿ ತ್ರಾಸಿ, ಡಾ। ಜಿ.ಪಿ ಕುಸುಮಾ, ಡಾ। ದಿನೇಶ್ ಎನ್.ಶೆಟ್ಟಿ ರೆಂಜಾಳ, ರಂಗ ಎಸ್.ಪೂಜಾರಿ, ಸವಿತಾ ಎಸ್.ಶೆಟ್ಟಿ, ಹರೀಶ್ ಪೂಜಾರಿ ಕೊಕ್ಕರ್ಣೆ, ಜೋನ್ విಲ್ಸನ್ ಲೋಬೋ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರ್.ಬೆಳ್ಳಡ, ಅಶೋಕ್ ಆರ್.ದೇವಾಡಿಗ ಅವರ ಆಯ್ಕೆ ನಡೆಸಲಾಗಿ ಚುನಾವಣಾಧಿಕಾರಿ ಸಿಎಂ ಜಗದೀಶ್ ಬಿ.ಶೆಟ್ಟಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು (ತೃತೀಯ ಬಾರಿ) ಆಯ್ಕೆಯಾಗಿದ್ದು ಕರ್ನಾಟಕ, ಮಹಾರಾಷ್ಟ್ರ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ವಿಜೇತ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ ಕೆಯುಡಬ್ಲ್ಯೂಜೆ ಕೇಂದ್ರ ಸಮಿತಿ ಮುಖ್ಯ ಚುನಾವಣಾ ಅಧಿಕಾರಿ ಎನ್.ರವಿಕುಮಾರ್ ಮತ್ತು ಸಿಎಂ ಜಗದೀಶ್ ಬಿ.ಶೆಟ್ಟಿ ತಿಳಿಸಿದ್ದಾರೆ.
ಡಾ.ಶಿವ ಗೌಡ ಮೂಡಿಗೆರೆ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನವರು. ಕಳೆದ ಹಲವು ವರ್ಷಗಳಿಂದ ಮುಂಬೈ ನಗರದಲ್ಲಿ ನೆಲೆಸಿದ್ದು, ಅಲ್ಲಿ ಉದ್ದಿಮೆದಾರರಾಗಿ, ಯುವ ಮುಖಂಡರಾಗಿ, ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮುಂಬೈಗೆ ತೆರಳಿ ಅಲ್ಲಿ ಹಂತಹಂತವಾಗಿ ಅಭಿವೃದ್ಧಿ ಕಂಡಿದ್ದಾರೆ. ಹಲವು ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಶಿವ ಹಾಸ್ಪಿಟಲಿಟಿ ಸರ್ವಿಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ. ಪತ್ರಕರ್ತರ ಸಂಘದಲ್ಲಿಯೂ ಸಕ್ರಿಯರಾಗಿದ್ದಾರೆ. ವಿವಿಧ ಸಂಘಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಸೇವೆಯನ್ನು ಕಾರ್ಯತತ್ಪರತೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕದ ಸದಸ್ಯರು ಶಿವ ಅವರನ್ನು ಸಂಘದ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.



