ಅಡಿಕೆ ಗೊನೆ ತೆಗೆಯುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕಳಸ ತಾಲ್ಲೂಕಿನಲ್ಲಿ ನಡೆದಿದೆ. ಕಳಸ ತಾಲ್ಲೂಕು ಹಿರೇಬೈಲ್ ಬೂದಿಗುಂಡಿ ಗ್ರಾಮದ ನಿವಾಸಿ ಮಂಜುನಾಥ್ (40) ಎಂಬುವವರು ಅಡಿಕೆ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.
ಕಳಸ ತಾಲ್ಲೂಕಿನ ಹಳುವಳ್ಳಿ ಗ್ರಾಮದ ತೋಟವೊಂದರಲ್ಲಿ ಗುರುವಾರ ಅಡಿಕೆ ಗೊನೆ ತೆಗೆಯುವಾಗ ಈ ದುರ್ಘಟನೆ ನಡೆದಿದೆ.
.ಜೀವನಕ್ಕಾಗಿ ಕೂಲಿ ಕೆಲಸವನ್ನೇ ಆಶ್ರಯಿಸಿದ್ದ ಮಂಜುನಾಥ್ ಮರದಿಂದ ಆಯ ತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ.
ಮಂಜುನಾಥ್ ಅವರ ದುಡಿಯೆಯಿಂದ ತಾಯಿ, ಪತ್ನಿ, ಮಕ್ಕಳ ಜೀವನ ಸಾಗುತ್ತಿತ್ತು. ಈ ದುರ್ಘಟನೆಯಿಂದ ಮಂಜುನಾಥ್ ಅವರ ಕುಟುಂಬ ದಿಕ್ಕುತೋಚದಂತಾಗಿದೆ.



