ತಾವು ವಾಸಿಸುವ ಬಡಾವಣೆ ಸುತ್ತಮುತ್ತಲು ಸ್ವಚ್ಚತೆ ಕಾಪಾಡುವುದು ನಾಗರೀಕರ ಮೂ ಲ ಕರ್ತವ್ಯ. ಕಸ ಕಂಡುಬಂದಲ್ಲಿ ಸ್ವಚ್ಚತೆಗೆ ಮುಂದಾಗುವ ಮೂಲಕ ಸ್ವಚ್ಚ ನಗರಿ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಚಿಕ್ಕಮಗಳೂರು ಬ್ರಹ್ಮಕುಮಾರೀಸ್ ಸಂಸ್ಥೆ ಸಂಚಾಲಕಿ ಕೆ.ಎಸ್.ಭಾಗ್ಯಲಕ್ಷ್ಮೀ ಹೇಳಿದರು.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಸಮೀಪ ಶುಕ್ರವಾರ ಮುಂಜಾನೆ ಸಾರ್ವಜನಿಕರ ಸಹಯೋಗದಲ್ಲಿ ಆ ಯೋಜಿಸಿದ್ಧ ಸ್ವಚ್ಚತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆಯಂಗಳದಿ ಆವರಣದಲ್ಲಿ ಅಕ್ಕಪಕ್ಕದ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಚತೆ ಕಾಪಾಡಬೇಕು. ಇದು ಆರೋಗ್ಯಪೂರ್ಣ ಶರೀರಿಕ್ಕೂ ಪೂರಕವಾಗಲಿದೆ. ಜೊತೆಗೆ ಸಸಿ ನೆಡುವ ಅಭ್ಯಾಸವನ್ನು ರೂಢಿಸಿಕೊ ಂಡರೆ ಸ್ವಚ್ಚಂಧ ಆಮ್ಲಜನಕ ಲಭ್ಯವಾಗಿ ಮುಂದಿನ ಪೀಳಿಗೆಗೆ ಆಸರೆಯಾಗಲಿದೆ ಎಂದರು.
ಸ್ವಚ್ಚತಾ ಅಭಿಯಾನದ ಜೊತೆಗೆ ಮಾನಸಿಕ ಶಾಂತಿ, ನೆಮ್ಮದಿ ಹಾಗೂ ಖಿನ್ನತೆಯಿಂದ ಹೊರಬರಲು ಆಧ್ಯಾತ್ಮಕ ಶಕ್ತಿ ಅವಶ್ಯಕವಾಗಿದ್ದು ಬೆಳಗಿನ ಜಾವದಲ್ಲಿ ಬಳಲುತ್ತಿರುವವರು ಯೋಗ್ಯಾಭ್ಯಾಸ, ಧ್ಯಾನದ ಹವ್ಯಾ ಸ ಇಟ್ಟುಕೊಳ್ಳಬೇಕು. ಇದು ಒತ್ತಡದಿಂದ ಒಳಗಾದವರಿಗೆ ಜೀವನದ ಅರಿವನ್ನು ಮೂಡಿಸಲಿದೆ ಎಂದರು.
ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ ಬಡಾವಣೆ ಸೇರಿದಂತೆ ಜಿಲ್ಲೆಯಾದ್ಯಂತ ಸ್ವಚ್ಚತೆ ನಿರ್ವ ಹಣೆ ದೊಡ್ಡ ಸವಾಲಾಗಿದೆ. ಕೆಲವರು ಬೇಕಾಬಿಟ್ಟಿ ರಸ್ತೆಬದಿ, ಚರಂಡಿಗಳಲ್ಲೇ ಕಸ ಸುರಿದು ಪರಿಸರಕ್ಕೆ ಹಾನಿ ಮಾಡಬಾರದು. ಪ್ರತಿದಿನ ನಗರಸಭೆ ಗಂಟೆಗಾಡಿಗಳಲ್ಲೇ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಹಾಕಬೇಕು ಎಂದು ಸಲಹೆ ಮಾಡಿದರು.
ಪ್ರಸ್ತುತ ಹೌಸಿಂಗ್ ಬಡಾವಣೆ ಸಾಕಷ್ಟು ಮಟ್ಟದಲ್ಲಿ ಸ್ವಚ್ಚತೆ ಆದ್ಯತೆ ನೀಡುತ್ತಿದೆ. ಕೆಲವರು ಅಲ್ಲಲ್ಲಿ ಕಸ ಸುರಿಯುವ ವ್ಯಕ್ತಿಗಳಿಗೆ ಅರಿವು ಮೂಡಿಸಲು ಸ್ವಚ್ಚತಾ ಅಭಿಯಾನ ಹಮ್ಮಿಕೊಂಡು ಕೇಂದ್ರ ಸರ್ಕಾರದ ಸ್ವಚ್ಚ ತಾ ಮಿಷನ್‍ಗೆ ಬೆಂಬಲವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಶ್ರೀ ಶಕ್ತಿ ಅಸೋಸಿಯೇಷನ್ ನಿರ್ದೇಶಕ ಡಾ|| ಅನೀತ್‍ಕುಮಾರ್ ಮಾತನಾಡಿ ಸರ್ಕಾರದ ಒತ್ತಡಕ್ಕೆ ಸಾರ್ವಜನಿಕರು ಸ್ವಚ್ಚತೆ ಕಾಪಾಡಿಕೊಳ್ಳುವುದಲ್ಲ. ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮಲೀನತೆ ಉಂಟಾ ದರೆ ಮನೆಗಳಲ್ಲಿ ವೃದ್ದರು, ಮಕ್ಕಳು ಕೂಡಾ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದ್ದು ಈ ಬಗ್ಗೆ ನಾಗರೀ ಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ದೊಡ್ಡಮಲ್ಲಪ್ಪ, ಶ್ರೀ ಶಕ್ತಿ ಅಸೋಸಿಯೇಷನ್ ವ್ಯವಸ್ಥಾಪಕ ಹೆಚ್.ಮಂ ಜುನಾಥ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.



