ಮೋಳಿಗೆ ಮಹಾದೇವಿ ಮತ್ತು ಅಕ್ಕಮಹಾದೇವಿ ಸೇರಿದಂತೆ ಶರಣೆಯರು ಜೀವನ ಮೌಲ್ಯಗಳನ್ನು ಕಟ್ಟಿಕೊಟ್ಟಿದ್ದಾರೆಂದು ಚಿಕ್ಕಮಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಪೌಷ್ಠಿಕಆಹಾರ ನಿರೀಕ್ಷಕಿ ಸ್ವಾತಿ ಧನಂಜಯ ಅಭಿಪ್ರಾಯಿಸಿದರು.
ಚಿಕ್ಕಮಗಳೂರು ಅಕ್ಕಮಹಾದೇವಿ ಮಹಿಳಾ ಸಂಘದ ಎಂ.ಜಿ.ರಸ್ತೆ ಮತ್ತು ಮಧುವನ ಬಡಾವಣೆಯ ಶರಣೆ ಮೋಳಿಗೆಮಹಾದೇವಿ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ‘ಬನದ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೆಯ ಶತಮಾನದಲ್ಲಿ ಶಿವ-ಶರಣೆಯರು ಸಮಾಜ ಸುಧಾರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ಕಾಲದಲ್ಲೇ ಮಹಿಳೆಯರ ಸಬಲೀಕರಣದ ಆಲೋಚನೆಗಳು ಅವರಲ್ಲಿತ್ತು. ಲೌಕಿಕತೆ ಬದಿಗಿಟ್ಟು ಆಧ್ಯಾತ್ಮಿಕತೆಯತ್ತ ಸಮಾಜವನ್ನು ಮುನ್ನಡೆಸಲು ಪ್ರಯತ್ನಿಸಿದ್ದರು. ದೈಂದಿನ ಜೀವನದ ಗೊಂದಲ ಗೋಜಲುಗಳನ್ನು ಬಿಟ್ಟು ದೇವರ ಕಡೆ ಮುಖಮಾಡಿದ್ದ ಶರಣ ಸಮೂಹ ಮೌಲ್ಯಯುತವಾದ ಜೀವನವನ್ನು ಪ್ರತಿಪಾದಿಸಿದ್ದರೆಂದರು.
ಪ್ರೀತಿ, ವಾತ್ಸಲ್ಯ, ರಕ್ಷಣೆಯ ಪ್ರತೀಕ ಮಹಿಳೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ತಾಯಂದಿರ ಪಾತ್ರ ಹಿರಿದು. ಮಹಿಳೆಯರ ಜೊತೆಗೆ ಮಕ್ಕಳು ಎನ್ನುವುದು ಸಹಜವಾದ ಮಾತು. ಪುರುಷರಿಗಿಂತ ಮಹಿಳೆಯರನ್ನೆ ಮಕ್ಕಳು ಹೆಚ್ಚು ಅವಲಂಬಿಸುತ್ತಾರೆ. ಪ್ರೀತಿ, ವಾತ್ಸಲ್ಯ, ರಕ್ಷಣೆ ಎಲ್ಲವೂ ತಾಯಿಯಿಂದ ಮಕ್ಕಳು ಬಯಸುತ್ತಾರೆ. ಹಾಗಾಗಿಯೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳು ಸಮಾಜದಲ್ಲಿ ಪರಿಣಾಮಕಾರಿಯಾಗಿವೆ ಎಂದರು.
ಒತ್ತಡದ ಬದುಕಿನಲ್ಲಿರುವ ಮಹಿಳೆಯರು ತಮ್ಮ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಪಾಲನೆಗೆ ಆದ್ಯತೆ ನೀಡುತ್ತಾ ತಮ್ಮ ಆರೋಗ್ಯವನ್ನೆ ನಿರ್ಲಕ್ಷಿಸುತ್ತಿರುವುದು ಸಾಮಾನ್ಯವಾಗಿದೆ. ನಮ್ಮ ಆರೋಗ್ಯ, ಸಂತೋಷ, ನೆಮ್ಮದಿಗೆ ಒಂದಷ್ಟು ಸಮಯ ಮೀಸಲಿಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಯೋಗ, ಧ್ಯಾನ, ಪ್ರಾರ್ಥನೆ ನಮ್ಮ ಜೀವನದ ಭಾಗವೆಂದು ಪರಿಗಣಿಸಬೇಕೆಂದ ಸ್ವಾತಿ, ಅಕ್ಕಮಹಾದೇವಿ ಸಮಾಜ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಹೆಣ್ಣುಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ ಎಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಭಾರತಿಶಿವರುದ್ರಪ್ಪ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ ಬನದಹುಣ್ಣಿಮೆ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಸಂಭ್ರಮ ಸಡಗರದ ಹಬ್ಬ. ಜನವರಿಯಲ್ಲಿ ಬರುವ ಮೊದಲ ಹಬ್ಬವಿದು. ಬನಶಂಕರಿ ಅಮ್ಮನವರ ಜಾತ್ರಾª Àುಹೋತ್ಸವ ಇದೇ ಸಂದರ್ಭದಲ್ಲಿ ಸವದತ್ತಿ ಯಲ್ಲಮ್ಮನ ಜಾತ್ರೆ ದಕ್ಷಿಣಭಾರತದಲ್ಲೆ ಬಹಳ ಹೆಸರುವಾಸಿ. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಧನ್ಯತೆಯ ಭಾವ ತಾಳುತ್ತಾರೆ. ಹುಣ್ಣಿಮೆಗಳಲ್ಲೆಲ್ಲ ಬನದಹುಣ್ಣಿಮೆ ಶ್ರೇಷ್ಠ ಎಂಬ ಭಾವ ಕೆಲವರಲ್ಲಿದೆ. ಹೆಣ್ಣುಮಕ್ಕಳಿಗೆ ಇದೊಂದು ಶ್ರದ್ಧೆಯ ಹುಣ್ಣಿಮೆ ಎಂದರು.
ಮೋಳಿಗೆಮಹಾದೇವಿ ತಂಡದ ಮುಖ್ಯಸ್ಥೆ ಭಾಗ್ಯಮಹೇಶ್ ಪ್ರಾಸ್ತಾವಿಸಿ, ಒತ್ತಡದ ನಿವಾರಣೆಗೆ ತಿಂಗಳಿಗೊಮ್ಮೆ ಇಲ್ಲಿ ಸೇರಿ ಸಂತೋಷ ಹಂಚಿಕೊಳ್ಳುವ ಅವಕಾಶವಿದೆ ಪ್ರತಿಭೆಗಳ ಪ್ರದರ್ಶನಕ್ಕೂ ವೇದಿಕೆಯಾಗಿದೆ. ಎಲ್ಲ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದರೆ ಉತ್ತಮ ಕಾರ್ಯಕ್ರಮಗಳನ್ನು ಸಂಯೋಜಿಸಲು ಪ್ರೇರಣೆಯಾಗುತ್ತದೆ ಎಂದರು.
ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿಬಸವರಾಜು, ಸಂಘಟನಾಕಾರ್ಯದರ್ಶಿ ಮಂಜುಳಮ್ಮ ವೇದಿಕೆಯಲ್ಲಿದ್ದರು.
ಮೋಳಿಗೆ ಮಹಾದೇವಿ ತಂಡ ಸದಸ್ಯರುಗಳಾದ ನಾಗಶ್ರೀ ನಿರೂಪಿಸಿ. ಯಶಸ್ವಿನಿ ಸ್ವಾಗತಿಸಿ, ಜಯಾ ವಂದಿಸಿದರು. ಸುಜಾತಾಜಗದೀಶ್ ಮತ್ತು ಶರ್ಮಿಳಾಅಶೋಕ ಪ್ರಾರ್ಥಿಸಿ, ಗೀತಾಬಾಲಿ ಮತ್ತು ಸರೋಜಮ್ಮ ವೇದಘೋಷ ಮಾಡಿದರು. ಉಷಾ ಅತಿಥಿಪರಿಚಯಿಸಿ, ಲತಾಮಹಾಂತೇಶ್ ಮತ್ತು ಸುಧಾಶೇಖರ್ ನಾಡಗೀತೆ ಹಾಡಿದರು.
ವಿವಿಧ ಆಟೋಟ ಸ್ಪರ್ಧಾವಿಜೇತರಿಗೆ ಭಾಗ್ಯಮಹೇಶ್ ಬಹುಮಾನ ವಿತರಿಸಿದರು. ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.



