ದಿನಾಂಕ 15-01-2026 ರಂದು ಮೂಡಿಗೆರೆ ಪಟ್ಟಣದ ಹಳೇಮೂಡಿಗೆರೆ ಸೊಸೈಟಿ ಸಭಾಂಗಣದಲ್ಲಿ ಭಂಡಾರಿ ಸಮಾಜ ಸಂಘ (ರಿ), ಬೆಂಗಳೂರು ವಲಯದ ವತಿಯಿಂದ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಮಾಜದ 11 ಅರ್ಹ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ವಿದ್ಯಾ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಭಂಡಾರಿ ಸಮಾಜ ಸಂಘ, ಬೆಂಗಳೂರು ವಲಯವು ತನ್ನ ವಿವಿಧ ಘಟಕಗಳ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಈ ಬಾರಿ ಒಟ್ಟು ರೂ. 2,12,500/- ವಿದ್ಯಾ ಪ್ರೋತ್ಸಾಹ ಧನವನ್ನು ವಿತರಿಸಿದೆ.
ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಭಂಡಾರಿ ಸಮಾಜ ಬೆಂಗಳೂರು ವಲಯದ ಅಧ್ಯಕ್ಷರಾದ ಮೋಹನ್ ಭಂಡಾರಿ (ಬಾಳೆಹೊನ್ನೂರು) ಅವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಿ ಸಮಾಜ ಸಂಘ ಮೂಡಿಗೆರೆ ಘಟಕದ ಅಧ್ಯಕ್ಷರಾದ ಷಣ್ಮುಖಾನಂದ ಭಂಡಾರಿ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಿ.ಎಸ್. ನಾರಾಯಣ ಭಂಡಾರಿ (ಸಬ್ ರಿಜಿಸ್ಟರ್, ಮೂಡಿಗೆರೆ ತಾಲೂಕು), ರವಿ ಕುಮಾರ್ ಜಿ.ಕೆ (ಕೆ.ಇ.ಬಿ ಇಂಜಿನಿಯರ್, ಜನ್ನಾಪುರ), ರೇಖಾ ಪ್ರಶಾಂತ್ ಭಂಡಾರಿ (ಉಪನ್ಯಾಸಕರು, ಮೌಲಾನಾ ಆಜಾದ್ ಶಾಲೆ, ಮೂಡಿಗೆರೆ), ರಮೇಶ್ ಭಂಡಾರಿ (ಎಲ್.ಐ.ಸಿ ನೌಕರರು, ಚಿಕ್ಕಮಗಳೂರು), ಲೋಕೇಶ್ ಭಂಡಾರಿ (ಗೌರವಾಧ್ಯಕ್ಷರು, ಭಂಡಾರಿ ಸಮಾಜ ಸಂಘ ಮೂಡಿಗೆರೆ ಘಟಕ), ಸುಜಾತಾ ವಾಸು ಭಂಡಾರಿ (ಮಾಜಿ ಉಪಾಧ್ಯಕ್ಷರು, ನಿಡುವಾಳೆ ಗ್ರಾಮ ಪಂಚಾಯಿತಿ), ಕೆ.ಎಸ್. ನಾಗೇಶ್ ಭಂಡಾರಿ (ಕಾರ್ಯದರ್ಶಿ, ಭಂಡಾರಿ ಸಮಾಜ ಸಂಘ ಮೂಡಿಗೆರೆ ಘಟಕ) ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಂಡಾರಿ ಸಮಾಜ ಬೆಂಗಳೂರು ವಲಯದ ನೂತನ ಅಧ್ಯಕ್ಷರಾದ ಮೋಹನ್ ಭಂಡಾರಿ (ಬಾಳೆಹೊನ್ನೂರು) ಹಾಗೂ ದ್ವಿತೀಯ ಪಿಯುಸಿಯಲ್ಲಿ 96.6% ಅಂಕಗಳನ್ನು ಪಡೆದ ಚಿರಾಗ್ ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



