hudugaru 2_page-0001

 

 

ಗುಂಡಿಬಿದ್ದಿದ್ದ ತಮ್ಮ ಗ್ರಾಮದ ರಸ್ತೆಗೆ ಬಾಲಕರಿಬ್ಬರು ಸ್ವಯಂಪ್ರೇರಿತರಾಗಿ ಮಣ್ಣುಹಾಕಿ ರಿಪೇರಿ ಮಾಡಿದ್ದು, ಬಾಲಕರ ಕಾಳಜಿಗೆ ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರುಬಗೆ ಇಂದ ಮೇಕನಗದ್ದೆಗೆ ಹೋಗುವ ರಸ್ತೆಯಲ್ಲಿ ದಿನಕ್ಕೆ ನೂರಾರು ಗಾಡಿ ತಿರುಗುತಿದ್ದರಿಂದ ರಸ್ತೆ ಗುಂಡಿ ಬಿದ್ದು ಹಾಳಾಗಿ ಹೋಗಿತ್ತು. ಕಾಂಕ್ರಿಟ್ ರಸ್ತೆ ಗುಂಡಿಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅದೇ ದಾರಿಯಲ್ಲಿ ಗೌಡಹಳ್ಳಿ ಪ್ರೌಢ ಶಾಲೆಗೆ ತೆರಳುತಿದ್ದ ಪ್ರೀತಮ್ ಮತ್ತು ಸಮರ್ಥ್ ಈ ಗುಂಡಿಗೆ ಮಣ್ಣು ತುಂಬಿಸುವ ಆಲೋಚನೆ ಮಾಡಿದರು.

ಶಾಲೆಗೆ ರಜೆ ಇದ್ದ ದಿನ ಈ ಇಬ್ಬರು ಬಾಲಕರು ಆಟ ಆಡುವುದನ್ನು ಬಿಟ್ಟು ಒಂದು ದಿನದ ಸಮಯವನ್ನು ರಸ್ತೆಗೆ ಮಣ್ಣು ತುಂಬುವ ಕೆಲಸಕ್ಕೆ ಮೀಸಲಿಟ್ಟರು. ಸ್ವಂತ ಬುದ್ದಿಯಿಂದ ಆ ಮಕ್ಕಳು ಸಮಾಜಮುಖಿ ಕೆಲಸವನ್ನು ಮಾಡಿ ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರಿದರು. ಈ ಮಕ್ಕಳ ಒಳ್ಳೆತನಕ್ಕೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ :  ಅದೀಪ್ ಊರುಬಗೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ