February 4, 2026

 

 

ಚಿಕ್ಕಮಗಳೂರು, ಜ.20: 2026-27ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸುತ್ತಿರುವ ಚಿಕ್ಕಮಗಳೂರು ಜಿಲ್ಲಾ ಕ್ರೀಡಾ ಶಾಲೆಗೆ ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಜೂಡೋ ಕ್ರೀಡೆಗಳಿಗೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಜನವರಿ 28 ರಿಂದ ಫೆಬ್ರವರಿ 9ರವರೆಗೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಂದರ್ಶನಗಳನ್ನು ಆಯೋಜಿಸಲಾಗಿದೆ.

ಅಭ್ಯರ್ಥಿಗಳು 2026-27ನೇ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಗೆ ಸೇರ್ಪಡೆಗೊಳ್ಳಲು ಅರ್ಹರಿರಬೇಕು. ಮುಂದಿನ ಜೂನ್ 1ಕ್ಕೆ 11 ವರ್ಷದೊಳಗಿದ್ದು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಇಲಾಖೆಯ ನಾರ್ಮ್ಸ್ ಪ್ರಕಾರ ಆಯ್ಕೆ ನಡೆಯಲಿದ್ದು, ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಕ್ರೀಡಾ ಶಾಲೆಗೆ ಪ್ರವೇಶ ಕಲ್ಪಿಸಲಾಗುವುದು.

ಜನವರಿ 28 ರಂದು ಬೆಳಿಗ್ಗೆ 10.30ಕ್ಕೆ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೊಯ್ಸಳ ಪ್ರೌಢಶಾಲೆ, ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ, 29 ರಂದು ಬೆಳಿಗ್ಗೆ 10.30ಕ್ಕೆ ಗಬ್ಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಧ್ಯಾಹ್ನ 2.30ಕ್ಕೆ ನಿಡುವಾಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 30 ಹಾಗೂ 31 ರಂದು ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರಿನ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.

ಫೆಬ್ರವರಿ 2 ರಂದು ಬೆಳಿಗ್ಗೆ 10.30ಕ್ಕೆ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಧ್ಯಾಹ್ನ 2.30ಕ್ಕೆ ಬೀರೂರಿನ ಕೆ.ಎಲ್.ಕೆ. ಪ್ರೌಢಶಾಲೆ, 3 ರಂದು ಬೆಳಿಗ್ಗೆ 10.30ಕ್ಕೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಧ್ಯಾಹ್ನ 2.30ಕ್ಕೆ ಎಂ.ಸಿ.ಹಳ್ಳಿಯ ಸರ್ಕಾರಿ ಪ್ರೌಢಶಾಲೆ, 4 ರಂದು ಬೆಳಿಗ್ಗೆ 10.30ಕ್ಕೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಧ್ಯಾಹ್ನ 2.30ಕ್ಕೆ ಸಿಂಗಟಗೆರೆ ಸರ್ಕಾರಿ ಪ್ರೌಢಶಾಲೆ, ಫೆೆಬ್ರವರಿ 5 ರಂದು ಬೆಳಿಗ್ಗೆ 10.30ಕ್ಕೆ ಅಜ್ಜಂಪುರ ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ 2.30ಕ್ಕೆ ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 6 ರಂದು ಬೆಳಿಗ್ಗೆ 10.30ಕ್ಕೆ ಶೃಂಗೇರಿ ತಾಲ್ಲೂಕಿನ ನೆಮ್ಮಾರು ಸರ್ಕಾರಿ ಪ್ರೌಢಶಾಲೆ, 7 ರಂದು ಬೆಳಿಗ್ಗೆ 10.30ಕ್ಕೆ ನರಸಿಂಹರಾಜಪುರದ ಶ್ರೀ ಕುವೆಂಪು ಕ್ರೀಡಾಂಗಣ, 9 ರಂದು ಬೆಳಿಗ್ಗೆ 10.30ಕ್ಕೆ ಕೊಪ್ಪ ತಾಲ್ಲೂಕಿನ ಕಮ್ಮರಡಿ ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ 2.30ಕ್ಕೆ ಕೊಪ್ಪದ ಜೆಎಂಜೆ ಆಟದ ಮೈದಾನ (ಬಸ್ ನಿಲ್ದಾಣ ಹಿಂಭಾಗ) ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.

ಆಯ್ಕೆಯ ಸಮಯದಲ್ಲಿ ಜನ್ಮ ದಿನಾಂಕ ಪ್ರಮಾಣಪತ್ರ, ಕ್ರೀಡಾ ಸಾಧನೆ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಬೇಕು. ಹೆಚ್ಚಿನ ವಿವರಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರನ್ನು ಖುದ್ದಾಗಿ ಅಥವಾ ದೂರವಾಣಿ (08262-295724) ಮೂಲಕ ಹಾಗೂ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು. ಆಯ್ಕೆಯಲ್ಲಿ ಬಾಲಕ, ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ