anup 2

 

 

ಮೂಡಿಗೆರೆ ತಾಲ್ಲೂಕು ಗೌಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡಲಾಯಿತು.

ಗೌಡಹಳ್ಳಿ ಗ್ರಾಮದ ಪ್ರಸ್ತುತ ಕತಾರ್ ದೇಶದಲ್ಲಿ ವೃತ್ತಿನಿರತರಾಗಿರುವ ಜಿ.ಜೆ. ಅನುಪ್ ಮತ್ತು ಸೌಂದರ್ಯ ದಂಪತಿಗಳು ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡಿದರು.

ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಅನುಪ್ ಸೌಂದರ್ಯ ದಂಪತಿಗಳು ಬ್ಯಾಂಡ್ ಸೆಟ್ ಅನ್ನು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನುಪ್ ; ವಿದ್ಯೆ ಎಂಬುದು ಬಹು ಮುಖ್ಯ ಅದನ್ನು ಯಾರೂ ಕಿತ್ತುಕೊಳ‍್ಳಲು ಸಾಧ್ಯವಿಲ್ಲ. ವಿದ್ಯೆಯಿಂದ ನಾವು ಜಗತ್ತಿನ ಯಾವ ದೇಶದಲ್ಲಿಯಾದರೂ ಬದುಕುವ ಅವಕಾಶ ಮತ್ತು ಆತ್ಮಸ್ಥೈರ್ಯ ಸಿಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕೆಂದು ಸಲಹೆ ನೀಡಿದರು.

ಈ ಸಂರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನೀಲರಾಜು, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಬಿ. ದುಗ್ಗೇಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಪಿ. ಭಾರತಿ, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರಾಜಶೇಖರ್, ಸದಸ್ಯೆ ಶೋಭಾ, ಜಿ.ಎಂ. ಸುರೇಶ್ ಗೌಡ , ಗೀತಾ ಜಗದೀಶ್, ಜಿ.ಎಂ.ಸಂಪತ್ ಮುಖ್ಶಿಯ ಕ್ಷಕರಾದ ಆರ್.ಪ್ರಕಾಶ್, ಸಹಶಿಕ್ಷಕರಾದ ಕೃಷ್ಣ, ಜ್ಯೋತಿ, ಭಾಗ್ಯಜ್ಯೋತಿ, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನುಪ್ ಸೌಂದರ್ಯ ದಂಪತಿಗಳನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ