February 4, 2026

 

 

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ ಕೊಡಗು ಜಿಲ್ಲೆಗಳು ಪ್ರಮುಖ ಬೆಳೆಗಳಾದ ಕಾಫಿ, ಕಾಳು, ಮೆಣಸು ಆಡಿಕೆ ವಾಣಿಜ್ಯ ಬೆಳೆಗಳಾದ ಇವುಗಳಿಂದ ಕೆಂದ್ರ ಸರ್ಕಾರಕ್ಕೆ ಹೆಚ್ಚಿನ ವಿದೇಶಿ  ವಿನಿಮಯದ ಮೂಲಕ ಆದಾಯ ಬರುತ್ತಿದ್ದು ಅದರಲ್ಲೂ ಕಾಫಿ ಬೆಳೆಯಿಂದ ಕೇಂದ ಸರ್ಕಾರಕ್ಕೆ ಅತಿಹೆಚ್ಚಿನ ವಿದೇಶಿ ವಿನಿಮಯ ಬರುತ್ತಿದೆ. ಆದರೆ ಇತ್ತೀಚೆಗೆ ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಳಿಗೆ ಉತ್ತೇಜನ ನೀಡುವಂತೆ ಯಾವುದೆ ಕಾರ್ಯಕ್ರಮವನ್ನು ರೂಪಿಸಿಲ್ಲ ಎಂದು ರೈತ ಸಂಘ ಹಸಿರು ಸೇನೆ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶ್ ದಾರದಹಳ್ಳಿ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು ‘; ಮಲೆನಾಡು ಪ್ರದೇಶದಲ್ಲಿ ಸತತ 3 ವರ್ಷಗಳಿಂದ ಮಳೆ ಹೆಚ್ಚಾಗಿ ಅತಿವೃಷ್ಟಿ ಆಗಿ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಕೃಷಿಯಲ್ಲಿ ನಷ್ಟ ಹೊಂದುತ್ತಿವೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿದೆ.

ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಯಾವುದೆ ಅನುಕೂಲವಾಗುವ ರಿಯಾಯಿತಿಗಳನ್ನು ಪ್ರಕಟಿಸಿಲ್ಲ ಅಡಿಕೆ ಬೆಳೆ ಮತ್ತು ಕಾಳು ಮೆಣಸು ಬೆಳೆಗಳು ಅತಿ ಹೆಚ್ಚಿನ ಮಳೆಯಿಂದ ಅಡಿಕೆ ಬೆಳೆಗೆ ಚುಕ್ಕೆ ರೋಗ ಮತ್ತು ಸುಳಿ ರೋಗ ಜಾಸ್ತಿ ಕಾಣಿಸಿಕೊಳ್ಳುತ್ತಿದೆ. ಕಾಳುಮೆಣಸು ಬಳ್ಳಿಗಳು ಸಹ ರೋಗಕ್ಕೆ ನಷ್ಟ ಹೊಂದುತ್ತಿವೆ ಇದಕ್ಕೆಲ್ಲ ಸೂಕ್ತ ಪರಿಹಾರ ದೊರಕಿಸಬೇಕಿತ್ತು ಮತ್ತು ರೈತರು ಪಡೆಯುವ ಬ್ಯಾಂಕ್ ಸಾಲಗಳಿಗೆ ಯಾವುದೆ ಬಡ್ಡಿ ರಿಯಾಯಿತಿ ಪ್ರಕಟಿಸಿಲ್ಲ ಮತ್ತು ಸಹಕಾರ ಸಂಘದಿಂದ ರೈತರಿಗೆ ಈಗ 4 ವರ್ಷಗಳಿಂದಲೂ ಹೊಸದಾಗಿ ಸಾಲ ಕೊಡುತ್ತಿಲ್ಲ ನಮ್ಮ ರಾಜ್ಯದ ಜನ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ