February 7, 2026

 

 

ರೈತರ ಒಪ್ಪಿಗೆ ಇಲ್ಲದೇ ಜಮೀನಿನಲ್ಲಿ ವಸತಿ ಬಡಾವಣೆಗೆ ಕೃಷಿ ಭೂಮಿಯನ್ನು ಆಕ್ರಮಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಚಿಕ್ಕಮಗಳೂರು ತಾಲ್ಲೂಕು ಇಂದಾವರ ಗ್ರಾಮಸ್ಥರು ಗುರುವಾರ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಗ್ರಾಮದ ಮುಖಂಡ ಐ.ಎಸ್.ಯತೀಶ್ ಕಸಾಬ ಹೋಬಳಿ ಇಂದಾವರ ಗ್ರಾಮದ ರೈತರು ಸಿಡಿಎಕ್ಕೆ ಈಗಾಗಲೇ 193 ಎಕರೆ ಜಮೀನನ್ನು ಎಬಿ ವಾಜಪೇಯಿ ವಸತಿ ಬಡಾವಣೆ, 208 ಎಕರೆ ಜಮೀನು ಇಂದಾವರ ವಸತಿ ಬಡಾವಣೆ ನೀಡಿದ್ದು ಬಡಾವಣೆಯನ್ನು ನಿರ್ಮಿಸಲಾಗಿದೆ ಎಂದರು.

ಪ್ರಸ್ತುತ ನಿರ್ಮಿಸಿರುವ ಬಡಾವಣೆಯಲ್ಲಿ ರೈತರಿಗೆ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ವಾಜಪೇಯಿ ವಸತಿ ಬಡಾವಣೆಗೆ ನೀರಿನ ಸೌಕರ್ಯವಿಲ್ಲ, ತಾತ್ಕಾಲಿಕ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದಾವರ ಬಡಾವಣೆಯ ಕೆಲಸವು ಆಮೆಗತಿಯಲ್ಲಿ ಸಾಗಿದ್ದು ಈಗಾಗಲೇ ಎರಡು ಕಡೆ ಭೂಮಿಯನ್ನು ಸಿಡಿಎ ಅಭಿವೃದ್ದಿಗಾಗಿ ನೀಡಲಾಗಿದೆ ಎಂದು ಹೇಳಿದರು.

ಮಲ್ಲಂದೂರು ಮುಖ್ಯರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಇಂದಾವರ ವಸತಿ ಬಡಾವಣೆಯ ಎ.ಬಿ.ವಾಜಪೇಯಿ ಬಡಾವಣೆಗೆ ಹೊಂದಿಕೊಂಡಿರುವ ಗ್ರಾಮದ ವಿವಿಧ ಸರ್ವೆ ನಂಬರ್‍ಗಳಲ್ಲಿ 150 ಎಕರೆ ಪ್ರದೇಶದಲ್ಲಿ ರೈತರ ಸಹಭಾಗಿತ್ವದಲ್ಲಿ ಶೇ.50:50 ರ ಅನುಪಾತ ಎಂದು ನಮೂದಿಸಿದ್ದು ರೈತರು ಒಪ್ಪ ದಿದ್ದಲ್ಲಿ ಭೂಸ್ವಾಧೀನದಡಿ ಹೆಚ್ಚುವರಿ ವಸತಿ ಯೋಜನೆಯ ರೂಪಿಸುವುದಾಗಿ ಆತಂಕವೊಡ್ಡುತ್ತಿದ್ದಾರೆ ಎಂದರು

ಈಗಾಗಲೇ ಸಿಡಿಎ ಹಲವಾರು ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದು, ಪ್ರಾಧಿಕಾರದ ಆಯುಕ್ತರು, ಗುತ್ತಿಗೆದಾರರು ನೀಡುವ ಹಣದ ಆಮಿಷದೊಂದಿಗೆ ರೈತರಿಗೆ ನೋಟೀಸ್ ನೀಡಿ ಬೆದರಿಕೆ ಒಡ್ಡುವ ಮೂಲಕ ಹೆಚ್ಚುವರಿ ವಸತಿ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿರುವುದು ವಿಷಾದಕರ ಸಂಗತಿ ಎಂದರು.

ಈ ಪ್ರದೇಶದಲ್ಲಿ ಕಾಫಿ, ಅಡಿಕೆ, ಸಿಲ್ವರ್, ತೆಂಗು, ಬಾಳೆ, ಕಾಳುಮೆಣಸು ಮತ್ತು ಮಾಸಿಕ ಬೆಳೆಗಳಾದ ತರಕಾರಿ ಇತ್ಯಾದಿಗಳನ್ನು ಬೆಳೆದು, ಹಸಿರು ವಲಯದಲ್ಲಿದ್ದರೂ ಸಹ ವಸತಿ ಬಡಾವಣೆ ನಿರ್ಮಿಸಲು ಹೊರಟಿರುವುದು ಬೇಸರದ ಸಂಗತಿ, ಹೀಗಾಗಿ ಇಂದಾವರ ಗ್ರಾಮಸ್ಥರಿಗೆ ಜೀವನ ಸಾಗಿಸಲು ಕೃಷಿ ಭೂಮಿಯ ಅವಶ್ಯಕತೆಯಿರುವ ಕಾರಣ ಭೂಮಿ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಇಂದಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಶ್, ರೈತ ಸಂಘದ , ಗುರುಶಾಂತಪ್ಪ, ಹಿರಿಯಣ್ಣಗೌಡ, ಗ್ರಾಮಸ್ಥರಾದ ಚೇತನ್, ಸೋಮೇಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ