ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ನಡೆಸಿದೆ.
ಸೋಮವಾರ ಬೆಳಿಗ್ಗೆ ಸುಮಾರು 8:30ರ ವೇಳೆಗೆ ಮೂಡಿಗೆರೆ ತಾಲ್ಲೂಕಿನ ಗೌತಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದೆ ಅಸ್ಸಾಂ ಮೂಲದ ಕಾರ್ಮಿಕರಾದ ಸಬೀನ ಹಾಗೂ ಸುಲ್ತಾನ ಎಂಬುವವರು ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ತೋಟಕ್ಕೆ ಸುಣ್ಣವನ್ನು ಹಾಕುತ್ತಿರುವ ಸಂದರ್ಭದಲ್ಲಿ ಏಕಾಏಕಿ ಎರಡು ಚಿರತೆಗಳು ದಾಳಿಮಾಡಿವೆ ಎನ್ನಲಾಗಿದೆ. ಚಿರತೆ ದಾಳಿಯಿಂದ ಇಬ್ಬರಿಗೂ ಗಾಯವಾಗಿದ್ದು ತಕ್ಷಣ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು,ಗಾಯಾಳುಗಳ ಸ್ಥಿತಿ ಸದ್ಯ ಸ್ಥಿರ ವಾಗಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಮೂಡಿಗೆರೆಯ ಅರಣ್ಯ ವಲಯಾಧಿಕಾರಿ ಮಂಜುನಾಥ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭವಾಗಿದೆ. ಘಟನೆಯಿಂದ ಗೌತಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಕಾಫಿತೋಟದ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.

ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ :
ದಿನಾಂಕ 9-2-2026 ರ ಸೋಮವಾರ ದಂದು ಮೂಡಿಗೆರೆ ಅರಣ್ಯ ವಲಯ, ಮೂಡಿಗೆರೆ ಶಾಖೆ, ಬಸ್ಕಲ್ ಗಸ್ತಿನ ವ್ಯಾಪ್ತಿಯ ಗೌತಳ್ಳಿ ಗ್ರಾಮದ ಚಂದ್ರೇಗೌಡ್ರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಮಹಿಳೆಯರಾದ 1. ಸಬೀನ w/o ಸಮದ್, 30 ವರ್ಷ 2. ಸುಲ್ತಾನ w/o ಜಾವಿದ್ ರವರ ಮೇಲೆ ಬೆಳಿಗ್ಗೆ 8:30 ರ ಸಮಯದಲ್ಲಿ ಚಿರತೆ ದಾಳಿ ಮಾಡಿ ಕಾಲಿಗೆ ಪರಚಿದ್ದು ಇಬ್ಬರು ಮಹಿಳೆಯರ ಕಾಲಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಸರ್ಕಾರಿ ಆಸ್ಪತ್ರೆ, ಮೂಡಿಗೆರೆ ಗೆ ದಾಖಲಿಸಲಾಯಿತು. ಕೂಡಲೇ ಅರಣ್ಯ ಇಲಾಖೆ ಹಾಗೂ ETF ನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕೂoಬಿoಗ್ ಕಾರ್ಯಾಚಾರಣೆ ಪ್ರಾರಂಭಿಸಲಾಯಿತು…
ಆಸ್ಪತ್ರೆ ಗೆ ಮೂಡಿಗೆರೆ RFO ಮಂಜುನಾಥ್ & ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು… ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ 2 ಪ್ರತ್ಯೇಕ ಆಂಬುಲೆನ್ಸ್ ಗಳಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಚಿಕ್ಕಮಗಳೂರಿಗೆ ದಾಖಲಿಸಲಾಯಿತು..ಇಬ್ಬರೂ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ… ವೈದ್ಯರ ವರದಿಯ ಅನ್ವಯ ಗಾಯಾಳುಗಳಿಗೆ ಅರಣ್ಯ ಇಲಾಖೆ ಇಂದ ಸೂಕ್ತ ಪರಿಹಾರದ ಮೊತ್ತ ಒದಗಿಸಲಾಗುವುದು..
DCF ರಮೇಶ್ ಬಾಬು ಹಾಗೂ ACF ಶಿವರಾತ್ರೇಶ್ವರ ಸ್ವಾಮಿ ರವರ ಮಾರ್ಗದರ್ಶನದಂತೆ ಚಿರತೆಯ ಚಲನವಲನ ಕಂಡುಹಿಡಿಯಲು ಸ್ಥಳದಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ ಹಾಗೂ ಚಿರತೆ ಸೆರೆ ಹಿಡಿಯುವ ಪ್ರಯತ್ನವಾಗಿ ಒಂದು ಬೋನು ಇಡಲಾಗಿದೆ. ಮೂಡಿಗೆರೆ ವಲಯದಲ್ಲಿ ಚಿರತೆ ದಾಳಿ ತೀರಾ ವಿರಳವಾಗಿದ್ದು ಇದೇ ಪ್ರಥಮವಾಗಿ ವರದಿಯಾಗಿದೆ. ಕುರುಚಲು ಅರಣ್ಯ ಇರುವ ಕಡೂರು, ತರೀಕೆರೆ ಯಲ್ಲಿ ಭಾಗದಲ್ಲಿ ಚಿರತೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ… ಆದರೆ ಪಶ್ಚಿಮಘಟ್ಟ ಪ್ರದೇಶ ದಂತಹ ಸ್ಥಳ ಮೂಡಿಗೆರೆಯಲ್ಲಿ ಚಿರತೆ ವರದಿಯಾಗಿರುವುದು ಅಚ್ಚರಿಯ ವಿಷಯವಾಗಿದೆ.
ಕಾರ್ಯಾಚರಣೆಯ ನೇತೃತ್ವ ವನ್ನು RFO ಮಂಜುನಾಥ್ ವಹಿಸಿದ್ದರು…
ಮೂಡಿಗೆರೆ ವಲಯದ ಉಪ ವಲಯ ಅರಣ್ಯಧಿಕಾರಿಗಳಾದ ಅಶ್ವಥ್, ರವಿರಾಜ್, ಗಸ್ತು ಅರಣ್ಯ ಪಾಲಕರಾದ ಪರಮೇಶ್, ಆದರ್ಶ್, ETF dyrfo ವಿಜಯ್ ಕುಮಾರ್, ರಮೇಶ್ ಮತ್ತು ಮೂಡಿಗೆರೆ ವಲಯ & ETF ನ ಸಿಬ್ಬಂದಿಗಳು, ವಾಹನ ಚಾಲಕರಾದ ಸುಮಂತ್, ನವರಾಜ್ ಉಪಸ್ಥಿತರಿದ್ದರು.



