February 12, 2026

 

 

ದಿನಾಂಕ 09.02.2026 ರಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ  ಹಳಸೆ ಶಿವಣ್ಣರವರ ನೇತೃತ್ವದ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಕೇಂದ್ರ ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಸಚಿವರಾದ   ಭೂಪೇಂದ್ರ ಯಾದವ್ ರವರನ್ನು ಭೇಟಿ ಮಾಡಿ ದಶಕಗಳಿಂದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಭಾಗಗಳಲ್ಲಿ ಅತ್ಯಂತ ಗಂಭೀರ ಪಿಡುಗಾಗಿರುವ ಆನೆ-ಮಾನವ ಸಂಘರ್ಷದ ಬಗ್ಗೆ ಗಮನ ಸೆಳೆಯಿತು.

ಸುದೀರ್ಘ ಚರ್ಚೆಯ ಸಂದರ್ಭದಲ್ಲಿ ಮಾನ್ಯ ಸಚಿವರು ತಮ್ಮ ಸಚಿವಾಲಯಕ್ಕೆ ಈ ಸಮಸ್ಯೆ ಕುರಿತು ಸಂಪೂರ್ಣ ಅರಿವಿರುವುದಾಗಿಯೂ ಇದರ ನಿವಾರಣೆಗಾಗಿ ಕೇಂದ್ರ ಸರ್ಕಾರದ ಎಲ್ಲ ರೀತಿಯ ಸಹಕಾರವನ್ನು ನೀಡುವುದಲ್ಲದೇ, ಅಗತ್ಯವಾದ ನಿಧಿಯನ್ನು ಕೂಡಾ ಮೀಸಲಿಟ್ಟಿರುವುದಾಗಿ ತಿಳಿಸಿರುತ್ತಾರೆ. ಹಾಗೂ ಈ ವಿಚಾರ ಸಂಬಂಧ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರಾದ  ರಮೇಶ್ ಕೆ. ಪಾಂಡೆ ಐ.ಎಫ್.ಎಸ್ ರವರನ್ನು ಭೇಟಿ ಮಾಡುವಂತೆಯೂ ತಿಳಿಸಿರುತ್ತಾರೆ.

ಒಕ್ಕೂಟದ ನಿಯೋಗವು  ರಮೇಶ್ ಕೆ.ಪಾಂಡೆಯವರನ್ನು ಭೇಟಿ ಮಾಡಿ ಚರ್ಚಿಸಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಈಗಾಗಲೇ ಭಾರತದ ಸುಮಾರು 8 ರಾಜ್ಯಗಳಲ್ಲಿ ವ್ಯಾಪಿಸಿರುವ ಮಾನವ-ಆನೆ ಸಂಘರ್ಷದ ಕುರಿತು ಮಾಹಿತಿ ಹೊಂದಿರುವುದಾಗಿಯೂ ಈ ಸಮಸ್ಯೆಗೆ ಆದಷ್ಟು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಸಮಗ್ರವಾದ ಕ್ರಿಯಾಯೋಜನೆ ಸಿದ್ದವಿರುವುದಾಗಿ ತಿಳಿಸಿರುತ್ತಾರೆ.

ನಿಯೋಗವು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಜೊತೆ ನಿಕಟ ಸಂಪರ್ಕದಲ್ಲಿರುವಂತೆಯೂ ಮತ್ತು ರಾಜ್ಯ ಸರ್ಕಾರಕ್ಕೆ ಈ ಯೋಜನೆ ಜಾರಿಗೊಳಿಸಲು  ಹಣ ಒದಗಿಸಲು 16ನೇ ಯೋಜನೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿರುತ್ತಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಸಿದ್ದಪಡಿಸಲಾದ ಮಾನವ-ಆನೆ ಸಂಘರ್ಷದ ಕುರಿತಾದ ಸಂಕ್ಷಿಪ್ತ ಸಾರಾಂಶದ ವರದಿಯ ಪ್ರತಿಯನ್ನು ಕೇಂದ್ರ ಸಚಿವರಿಗೂ ಹಾಗೂ ಕೇಂದ್ರ ಸರ್ಕಾರದ ಹೆಚ್ಚುವರಿ ಮಹಾನಿರ್ದೇಶಕರಿಗೂ ನೀಡಲಾಯಿತು.

ಮೇ ತಿಂಗಳ ಮೂರನೇ ವಾರದಲ್ಲಿ ರಾಜ್ಯ ಸರ್ಕಾರ, ಬೆಳೆಗಾರರ ಒಕ್ಕೂಟ, ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ನಡುವೆ ಸಮನ್ವಯ ಸಭೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿರುವುದಾಗಿಯೂ ಮಾಹಿತಿ ನೀಡಿರುತ್ತಾರೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಆನೆ-ಮಾನವ ಸಂಘರ್ಷ ನಿವಾರಣೆಗಾಗಿ ಕೇಂದ್ರ ಸರ್ಕಾರ ತನ್ನೆಲ್ಲಾ ಸಹಕಾರ ನೆರವನ್ನು ನೀಡುವುದಾಗಿಯೂ ಭರವಸೆ ನೀಡಿರುತ್ತಾರೆ.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ  ಹಳಸೆ ಶಿವಣ್ಣ, ಉಪಾಧ್ಯಕ್ಷರಾದ  ಕೆ.ಕೆ.ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ  ಕೆ.ಯು.ರತೀಶ್, ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ  ಕೆ.ಡಿ.ಮನೋಹರ್ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಖಜಾಂಚಿ  ಎಂ.ಜೆ.ಸಚಿನ್‌ರವರು ನಿಯೋಗದಲ್ಲಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ