February 20, 2026

 

 

ರಾಜ್ಯ ನ್ಯಾಯಾಂಗ ಪರೀಕ್ಷಾ ಫಲಿತಾಂಶದಲ್ಲಿ ಹಿರೇಮಗಳೂರು ಗ್ರಾ ಮದ ಹೆಚ್.ಇ.ಶ್ವೇತಾ ಅವರು 59ನೇ ಸ್ಥಾನದೊಡನೆ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನೆಲೆ ಗುರುವಾರ ಹಿರೇಮಗಳೂರು ಶ್ರೀ ಮುತ್ತಿನಮ್ಮ ಹಾಗೂ ಶ್ರೀ ಕೆಂಚರಾಯಸ್ವಾಮಿ ದೇವಾಲಯ ಸಮಿತಿಯಿಂದ ಹೆಚ್.ಇ. ಶ್ವೇತಾ ಅವರಿಗೆ ಗೌರವಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಈ ಕುರಿತು ಕಾಂಗ್ರೆಸ್ ಮುಖಂಡ ಹಿರೇಮಗಳೂರು ರಾಮಚಂದ್ರ ಮಾತನಾಡಿ ಶ್ವೇತಾ ಅವರ ಪಾಲಕರು ಮೂಲತಃ ತರಕಾರಿ ವ್ಯಾಪಾರಸ್ಥರಾಗಿ ಜೀವನ ನಡೆಸುತ್ತಿದ್ದರು. ನಿರಂತರ ಪರಿಶ್ರಮ, ಕಠಿಣ ಅಭ್ಯಾಸ ವೇ ಓರ್ವ ವ್ಯಕ್ತಿಯನ್ನು ಯಾವ ಸಾಧನೆ ಮಾಡಬಹುದು ಎಂಬುದಕ್ಕೆ ಗ್ರಾಮದ ಯುವತಿ ಶ್ವೇತಾ ಅವರು ನಮಗೆಲ್ಲಾ ಉದಾಹರಣೆ ಎಂದರು. ಶ್ವೇತಾ ಅವರ ಸಾಧನೆಯು ಮುಂದಿನ ಯುವಪೀಳಿಗೆಗೆ ಸ್ಪೂರ್ತಿಯಾಗಬೇಕು. ಜೀವನದ ಕಷ್ಟದ ನ ಡುವೆಯು ಎಲ್ಲವನ್ನು ನಿಭಾಯಿಸಿಕೊಂಡು ನ್ಯಾಯಾಧೀಶರಂಥ ಪವಿತ್ರ ಹುದ್ದೆ ಅಲಂಕರಿಸಿರುವ ಅವರ ಸಾ ಧನೆ ನಾಡಿನ ಪ್ರತಿ ಯುವಪ್ರಜೆಗಳಿಗೆ ಪ್ರೇರಣೆ. ಅಲ್ಲದೇ ದಲಿತ ಸಮುದಾಯದ ಯುವತಿ ಎಂಬ ಹೆಗ್ಗಳಿಕೆ ನಮಗಿದ್ದು ಮುಂದಿನ ಅವರ ಭವಿಷ್ಯ ಉಜ್ವಲವಾಗಲೀ ಎಂದು ಆಶಿಸಿದರು.

ಮುತ್ತಿನಮ್ಮ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಕೆ.ಕೇಶವಮೂರ್ತಿ ಮಾತನಾಡಿ ನೊಂದವರು, ಅಸ ಹಾಯಕರು ಹಾಗೂ ಶೋಷಿತರು ಅನ್ಯಾಯಕ್ಕೆ ಸ್ಪಂದಿಸಬೇಕು. ಅಂಬೇಡ್ಕರ್ ನೀಡಿರುವ ಸಂವಿಧಾನ ಕಾನೂ ನಿನಡಿಯಲ್ಲಿ ಸರ್ವಸಮಾನ ನ್ಯಾಯ ಒದಗಿಸುವ ಮೂಲಕ ಹಿರೇಮಗಳೂರು ಗ್ರಾಮ ಹಾಗೂ ಜಿಲ್ಲೆಯ ಕೀ ರ್ತಿ ಹೆಚ್ಚಿಸಬೇಕು ಎಂದರು.

ದೇವಾಲಯ ಸಮಿತಿ ಉಪಾಧ್ಯಕ್ಷ ಜಗನ್ನಾಥ್ ಮಾತನಾಡಿ ಗ್ರಾಮದ ಈಶ್ವರ್ ಮತ್ತು ಕುಸುಮಾ ಅವರ ಪುತ್ರಿಯಾದ ಹೆಚ್.ಇ.ಶ್ವೇತಾ ನ್ಯಾಯಾಧೀಶರ ಹುದ್ದೇಗೇರುವ ಮೂಲಕ ಅಂಬೇಡ್ಕರ್ ಕನಸನ್ನು ಈಡೇರಿ ಸುವಂಥ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ನ್ಯಾ. ಹೆಚ್.ಇ.ಶ್ವೇತಾ ಮಾತನಾಡಿ ಪಾಲಕರು ಮತ್ತು ಗ್ರಾಮಸ್ಥರ ಪ್ರೀತಿ, ಸಹಕಾರದಿಂದ ಇಂದು ಕಾ ನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ. ನ್ಯಾಯಾಧೀಶರ ಪವಿತ್ರ ಹುದ್ದೆಗೆ ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತೇನೆ ಎಂದ ಅವರು ಮೂರು ತಿಂಗಳ ತರಬೇತಿ ಬಳಿಕ ಸರ್ಕಾರ ನಿಗಧಿಗೊಳಿಸುವ ಜಿ ಲ್ಲೆಯಲ್ಲಿ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹಾಲಮ್ಮ, ರವಿಕುಮಾರ್, ಪರಮೇಶ್, ಶಿವಕುಮಾರ್, ವೆಂಕಟೇಶ್ , ರಾಜು, ಗಂಗಾಧರ್, ಸಂಜಯ್, ಚಂದ್ರಯ್ಯ, ಓಂಕಾರೇಶ್, ಸಿಂಸನ್, ಉಮೇಶ್, ಸುರೇಶ್ ಇದ್ದರು.

ಹೆಚ್.ಇ.ಶ್ವೇತಾ ಅವರು ರಾಜ್ಯ ನ್ಯಾಯಾಂಗ ಪರೀಕ್ಷಾ ಫಲಿತಾಂಶದಲ್ಲಿ 59ನೇ ಸ್ಥಾನದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನೆಲೆ ಗುರುವಾರ ಎಂ.ಪವರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ವೇತಾ ಅವರಿಗೆ ಗೌರವಿಸಿ ಅಭಿನಂದನೆ ಸಲ್ಲಿ ಸಲಾಯಿತು. ಈ ಸಂದರ್ಭದಲ್ಲಿ ಎಂ.ಪವರ್ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ಹೆಚ್.ಎಸ್.ಜಗದೀಶ್, ರಾಘವೇಂದ್ರ, ಮಹಾಂತೇಶ್, ಸುರೇಶ್, ಚಂದ್ರಯ್ಯ ಹಾಗೂ ಹಿರೇಮಗಳೂರು ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ