February 22, 2026

 

 

ಹೊರನಾಡು ಅನ್ನಪೂರ್ಣೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಶ್ರೀ ಬ್ರಹ್ಮರಥೊತ್ಸವ ಹಾಗೂ ಶ್ರೀ ಮನ್ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಹೊರನಾಡು, ಕಳಸ, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಸೇರಿದಂತೆ ರಾಜ್ಯದ ವಿವಿಧ  ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮಾತೆ ಅನ್ನಪೂರ್ಣೆಶ್ವರಿ ದರ್ಶನ ಪಡೆದು ಪುನೀತರಾದರು.

ಜಾತ್ರೆಯ ನಿಮಿತ್ತ ಊರು ತುಂಬೆಲ್ಲ ತಳಿರು–ತೋರಣಗಳಿಂದ ಅಲಂಕರಿಸಲ್ಪಟ್ಟಿದ್ದು, ಇಡೀ ಹೊರನಾಡು ದೇವಾಲಯ ವಿದ್ಯುದೀಪಗಳ ಹೊಳಪಿನಲ್ಲಿ ಸ್ವರ್ಗಸಮಾನವಾಗಿ ಕಾಣಿಸಿತು.  ಗಣಪತಿ ಹೋಮ ಮತ್ತು ರಂಗಪೂಜೆಯೊಂದಿಗೆ ರಥೋತ್ಸವ ಚಾಲನೆ ಪಡೆದುಕೊಂಡಿದೆ. ಶುಭ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಧ್ವಜಾರೋಹಣ ನೆರವೇರಿಸಿ ಪುಷ್ಪಕ ರಥಾರೋಹಣ ಸೇವೆ ನಡೆಸಲಾಗಿದೆ.

ಭವ್ಯ ಬ್ರಹ್ಮರಥದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ವಿರಾಜಮಾನವಾಗುವ ಕ್ಷಣಕ್ಕಾಗಿ ಭಕ್ತರು ಉಸಿರುಗಟ್ಟಿಸಿಕೊಂಡಂತೆ ಕಾಯುತ್ತಿದ್ದರು. ಮಧ್ಯಾಹ್ನ ಸ್ತುತಿ ಪಾಠಕರ ವೇದಘೋಷ, ಛತ್ರಿ–ಚಾಮರಗಳ ನೃತ್ಯ, ಮಂಗಳವಾದ್ಯಗಳ ನಾದದೊಂದಿಗೆ ಹೂವಿನ ಅಲಂಕಾರದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ತರಲಾದಾಗ ಭಕ್ತರ ಹೃದಯಗಳಲ್ಲಿ ಭಾವೋದ್ರೇಕ ಉಕ್ಕಿಬಂದಿತು.

ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಭವ್ಯ ಬ್ರಹ್ಮರಥದಲ್ಲಿ ಕುಳ್ಳಿರಿಸಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದಾಗ, ಭಕ್ತಾದಿಗಳು ಫಲ–ಪುಷ್ಪಗಳಿಂದ ಅರ್ಚನೆ ಮಾಡಿ, ತಾವು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಧಾನ್ಯಗಳನ್ನು ಸಮರ್ಪಿಸಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆಯುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದ ಕುರಿತು ಮಾಹಿತಿ ನೀಡಿರುವ ಕ್ಷೇತ್ರದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿಯವರು, ವರ್ಷವಿಡೀ ಗರ್ಭಗುಡಿಯಲ್ಲಿ ದರ್ಶನ ನೀಡುವ ಜಗನ್ಮಾತೆಯು ರಥೋತ್ಸವದ ಸಮಯದಲ್ಲಿ ಭಕ್ತರ ಸನಿಹಕ್ಕೆ ಬರುವುದು ಅತ್ಯಂತ ಪುಣ್ಯದಾಯಕ ತಾಯಿಯು ರಥದಲ್ಲಿ ಹೇಗೆ ವಿಜೃಂಭಣೆಯಿಂದ ಎತ್ತರದಲ್ಲಿ ಕುಳಿತಿರುತ್ತಾಳೋ, ಅದೇ ರೀತಿ ಭಕ್ತರ ಜೀವನದ ರಥವೂ ಸಹ ಪ್ರಗತಿಯ ಪಥದಲ್ಲಿ ಸಾಗಿ ಜೀವನ ಸಮೃದ್ಧವಾಗಲಿ ಎಂದು ಆಶಿಸಿದ್ದಾರೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ