ಆಲ್ದೂರು ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡಂತಹ ಶಾಸಕಿ ನಯನ ಮೋಟಮ್ಮ ಕ್ಷೇತ್ರದ ವ್ಯಾಪ್ತಿಗೆ ಅನುಗುಣವಾಗಿ ಬಂದಂತಹ ಅನುದಾನವನ್ನು ವಿತರಣೆ ಮಾಡಿದ್ದೇನೆ ಎಂದು ತಿಳಿಸಿದರು.
ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಮತದಾರರ ಬಹುಮುಖ್ಯ ಅನಿವಾರ್ಯ ಸೌಕರ್ಯಗಳನ್ನು ಪೂರೈಸಲು ಆದ್ಯತೆಯನ್ನು ನೀಡಿದ್ದು, ಕ್ಷೇತ್ರವಾರು ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಮತದಾರರಿಗೆ ಪ್ರಾಮುಖ್ಯತೆ ನೀಡಿ ತಾರತಮ್ಯವಿಲ್ಲದೆ ಪಾರದರ್ಶಕತೆ ಮತ್ತು ಸಮತೋಲನದೊಂದಿಗೆ ಅನುದಾನ ಹಂಚಿಕೆ ಮಾಡಿದ್ದೇನೆ ಎಂದರು.
ಸಭೆಯಲ್ಲಿ ಸಂತೆ ಮೈದಾನ ಗ್ರಾಮಸ್ಥರು ಸ್ಮಶಾನ ಭೂಮಿ ಮಂಜೂರು ಕುರಿತು ಪ್ರಸ್ತಾಪಿಸಿದಾಗ ಪ್ರತಿಕ್ರಿಯೆ ನೀಡಿದ ಶಾಸಕಿ ಅಧಿಕಾರಿಗಳ ಮೂಲಕ ಮಂಜೂರು ಮಾಡಲು ಉಂಟಾಗಿರುವ ತಾಂತ್ರಿಕ ತೊಂದರೆಗಳ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಗ್ರಾಮದ ಕೃಪಾಕ್ಷ ಕೋಟ್ಯಾನ್ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಮತ್ತು ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು.
ಗ್ರಾಮಸ್ಥರಾದ ಸರೋಜಮ್ಮ ಮಣಿ, ಚಂದು, ನಿವೇಶನ ಇಲ್ಲದೆ ಮನೆ ಕಟ್ಟಲು ಸಾಧ್ಯವಾಗಿಲ್ಲ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಮನೆ ನಿರ್ಮಾಣ ಮಾಡಲು ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಮಂಜುನಾಥ್ ಗ್ರಾಮದಲ್ಲಿ ಹೈ ಮಾಸ್ಕ್ ಲೈಟ್ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದರು.
ಗ್ರಾಮದ ವಯೋವೃದ್ದೆ ಮುತ್ತಮ್ಮ ಮಳೆಗಾಲದಲ್ಲಿ ತಮ್ಮ ಮನೆಯ ಬಳಿ ಉಂಟಾಗುವ ಭೂಕುಸಿತ ತಡೆಗೋಡೆ ನಿರ್ಮಾಣ ಮಾಡುವಂತೆ ಶಾಸಕರಿಗೆ ಕೋರಿದರು.
ಗಾಳಿ ಗಂಡಿ ವಾರ್ಡಿನ ಅಭಿ, ಮತ್ತು ಬಾಬರ್ ಪಾಷಾ ಇದಾಗಲೇ ರಸ್ತೆಗೆ ಹಣ ಮಂಜೂರು ಆಗಿ ಕಾಮಗಾರಿ ಪ್ರಾರಂಭವಾಗಿದ್ದು 10 ಮೀಟರ್ ರಸ್ತೆ ಬಾಕಿಯಾಗುತ್ತದೆ ಅದನ್ನು ಪೂರ್ಣಗೊಳಿಸುವಂತೆ ಶಾಸಕರಿಗೆ ವಿನಂತಿಸಿದರು.
ಸಂತೆ ಮೈದಾನ ವಾರ್ಡಿಗೆ 50 ಲಕ್ಷ ಅನುದಾನ ಒದಗಿಸಿ ಮುಖ್ಯ ರಸ್ತೆ ನಿರ್ಮಿಸಿದ ಶಾಸಕರಿಗೆ ಮತ್ತು ಗದ್ದೆ ಲೇಔಟ್ ನಿವಾಸಿಗಳು ರಸ್ತೆ ಮಾಡಲು ಅನುದಾನ ಮೀಸಲಿಟ್ಟಿದ್ದಕ್ಕಾಗಿ ಮೊಹಮ್ಮದ್ ಖಾನ್ ನೇತೃತ್ವದಲ್ಲಿ ಶಾಸಕಿಗೆ ಸನ್ಮಾನ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ಕೆಳಗೂರು ಪೂರ್ಣೇಶ್, ಕಾರ್ಯದರ್ಶಿ ರವಿಚಂದ್ರ, ಅನುಪ್ ಗೌಡ, ತೀರ್ಥ ಕುಮಾರ್, ಜುನೈಡ್,
ಎ.ಯು ಇಬ್ರಾಹಿಂ,ಅಚ್ಚು ಹಸೈನರ್, ಎಟಿ. ಮಹೇಶ್, ಮೈದಿನ್ ಕುಟ್ಟಿ,ಭೂತ ಅಧ್ಯಕ್ಷ ಜೀವನ್,ಮಮತಾ, ಕರವೇ ಅಧ್ಯಕ್ಷ ಮಹಮ್ಮದ್ ಅಲಿ, ಅಣ್ಣಪ್ಪ, ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.




