February 22, 2026

 

 

ಮೂಡಿಗೆರೆ ಪಟ್ಟಣದ ವಿದ್ಯಾನಗರದಲ್ಲಿ ಶುದ್ಧಗಂಗಾ ಘಟಕ ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಸ್ಥಳೀಯರು ಶುದ್ಧಗಂಗಾ ನೀರಿಗಾಗಿ ಪರದಾಡುವಂತಾಗಿದೆ.

ಇಲ್ಲಿನ ವಿದ್ಯಾನಗರದಲ್ಲಿ ಕಳೆದ 4 ವರ್ಷದ ಹಿಂದೆ ಶುದ್ಧಗಂಗಾ ಘಟಕ ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಅದರ ನಿರ್ವಹಣೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಇದರಿಂದ ಸ್ಥಳೀಯ ಜನರು, ಈ ಘಟಕದ ನೀರನ್ನು ಯತೇಚ್ಛವಾಗಿ ಬಳಸುತ್ತಿದ್ದರು. ಆದರೆ ಕಳೆದ ಐದಾರು ತಿಂಗಳಿಂದ ಘಟಕ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ನೀರು ತರಲು ಹೋದಾಗಲೆಲ್ಲಾ ಖಾಲಿ ಟ್ಯಾಂಕ್, ಯಂತ್ರದಲ್ಲಿ ಕೆಂಪು ಚಿಹ್ನೆ ನೋಡಿ   ವಾಪಾಸು ಬರಬೇಕಾಗುತ್ತದೆ. ಅಲ್ಲದೆ 5 ರೂ ನಾಣ್ಯಕ್ಕೆ ಮಾತ್ರ ನೀರು ಬರುವಂತೆ ತಂತ್ರಜ್ಞಾನದಲ್ಲಿ ಅಳವಡಿಸಿದ್ದು,  ಕೆಲವೊಂದು  5 ರೂ ನಾಣ್ಯ ಕೂಡ ಯಂತ್ರ ಸ್ವೀಕರಿಸುವುದಿಲ್ಲ. ಒಳಗೆ ಬಿದ್ದ ನಾಣ್ಯ ವಾಪಾಸು ಬರುವುದಿಲ್ಲ. ಇದರಿಂದ ಎಷ್ಟೋ ಮಂದಿ ಹಣ ಕಡೆದುಕೊಳ್ಳುತ್ತಿದ್ದು,  ಕಾರ್ಡ್ ಮಾಡಿಸಿಕೊಂಡಿದ್ದಾರೆ. ಆದರೆ ಕಾರ್ಡ್ ನವೀಕರಣ ಹಾಗೂ ನೀರಿಗಾಗಿ ಪರದಾಡುವಂತಾಗಿದೆ

ಟ್ಯಾಂಕ್‍ನಲ್ಲಿ ಯಾವಾಗಲೂ ನೀರಿಲ್ಲದ ಕಾರಣ ಸ್ಥಳೀಯರು ಬಂದ ದಾರಿಗೆ ಸುಂಕವಿಲ್ಲದಂತೆ ಶುದ್ಧಗಂಗಾ ನಿರ್ವಹಣೆ ಮಾಡುವವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಘಟಕವಿರುವ ಪ್ರದೇಶದಲ್ಲಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಸಂತೆಗೆ ಬರುವ ಜನರು, ಸುತ್ತಮುತ್ತಲಿನ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜನರು ಈ ಶುದ್ಧಗಂಗ ಘಟಕದ ನೀರು ಬಳಸಲು ಅಸಾಧ್ಯವಾಗಿದೆ. ಹಾಗಾಗಿ ಈ ಶುದ್ಧಗಂಗಾ ಘಟಕ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದರೆ ಶಾಶ್ವತವಾಗಿ ಬೀಗ ಜಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ