February 23, 2026

 

 

ಕಾಡಾನೆ ದಾಳಿಗೆ ಕಾಫಿ ನಾಡಿನಲ್ಲಿ ಒಂದೇ ವಾರದಲ್ಲಿ ಎರಡನೇ ಬಲಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪ ಕಡಬಗೆರೆ, ಹುಣಸೆಹಳ್ಳಿ ಬಳಿ ಕಾರ್ಮಿಕ ಮಹಿಳೆಯರವರು ಕಾಡಾನೆಗೆ ಬಲಿಯಾಗಿದ್ದಾರೆ.

ಕಳೆದ ವಾರ ಇದೇ ಸ್ಥಳದಲ್ಲಿ ಕಾರ್ಮಿಕ ಪುರುಷರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು.

ಅದಾದ ನಂತರ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭವಾಗಿತ್ತು.

ಕಾರ್ಯಾಚರಣೆ ಚಾಲ್ತಿಯಲ್ಲಿರುವಾಗಲೇ ಇದೀಗ ಕಾರ್ಮಿಕ ಮಹಿಳೆ ಕಾಡಾನೆಗೆ ಬಲಿಯಾಗಿದ್ದಾರೆ. ಭಾನುವಾರ ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಗೆ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ಮಾಡಿದ್ದು. ಮೃತ ಮಹಿಳೆಯನ್ನು ಹಾವೇರಿ ಮೂಲದ ಬೋರಮ್ಮ ಎಂದು ಗುರುತಿಸಲಾಗಿದೆ.

ಆನೆ ದಾಳಿಗೆ ಮಹಿಳೆ ಬಲಿ ಪ್ರಕರಣದಲ್ಲಿ ಮೃತದೇಹವನ್ನ ಟಾರ್ಪಲ್ ನಲ್ಲಿ ಸುತ್ತಿ ಸ್ಥಳದಿಂದ ಪಿಕಪ್ ವಾಹನದಲ್ಲಿ ಕೊಂಡೊಯ್ದ ಅಧಿಕಾರಿಗಳು. ಈ ಸಂದರ್ಭದಲ್ಲಿ ವಾಹನವನ್ನು ತಡೆದ ಸ್ಥಳೀಯರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಮೃತದೇಹವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಅರಣ್ಯ ಸಚಿವರು ಬರೋವರೆಗೂ ಮೃತದೇಹ ತೆಗೆಯಲ್ಲ ಎಂದು ಆಕ್ರೋಶ. ಜನರಿಗೆ ಗೊತ್ತಾಗಬಾರದು ಎಂದು ಪಿಕಪ್ ನಲ್ಲಿ ಮೃತದೇಹ ಸಾಗಿಸ್ತಿದ್ದ ಅರಣ್ಯ ಇಲಾಖೆ

ಪಿಕಪ್ ಅಡ್ಡಗಟ್ಟಿ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ

ಎನ್.ಆರ್.ಪುರ ತಾಲೂಕಿನ ಕಡಬಗೆರೆಯಲ್ಲಿ ಘಟನೆ

ನಿರಂತರ ಆನೆ ದಾಳಿಗೆ ತಂದಿಟ್ಟಿರುವ ಮಲೆನಾಡಿಗರಿಂದ ತೀವ್ರ ಆಕ್ರೋಶ

ಅರಣ್ಯ ಇಲಾಖೆ ವಿರುದ್ಧ ತಾಳ್ಮೆ ಕಳೆದುಕೊಂಡಿರೋ ಮಲೆನಾಡಿಗರು.

ಕಳೆದ ನಾಲ್ಕು ದಿನಗಳಿಂದ ಕಾಡಾನೆ ಸೆರೆಗೆ ಕಾರ್ಯಚರಣೆ ಆರಂಭವಾಗಿತ್ತು. ಕಾಡಾನೆಗೆ ಮದುವೇರಿರುವುದರಿಂದ ತಾತ್ಕಾಲಿಕವಾಗಿ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ