February 23, 2026

 

 

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದೃಷ್ಟಿಕೋನವು ಸ್ಪೂರ್ತಿದಾಯಕ
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದೃಷ್ಟಿಕೋನವು ಸ್ಪೂರ್ತಿದಾಯಕ. ಈ ಚಳುವಳಿಯು ಯುವಕ ಮತ್ತು ಯುವತಿಯರನ್ನು ನಿಸ್ವಾರ್ಥ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಸಿದ್ದಪಡಿಸುತ್ತದೆ ಎಂದು ಕರ್ನಾಟಕ ಪರಿಸರ ಮೌಲ್ಯಮಾಪನ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಚಿಕ್ಕಮಗಳೂರು ನಗರದ ಸುಭಾಶ್‍ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದ ಸ್ಕೌಟ್ಸ್ ಭವನದಲ್ಲಿ ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಆಯೋಜಿಸಿದ್ಧ ಸಂಸ್ಥಾಪಕರ ದಿನಾಚರಣೆ, ನಿಪುನ್ ಪರೀಕ್ಷಾ ಶೀಬಿರದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1902ರಲ್ಲಿ ಇಂಗ್ಲೆಂಡ್ ರಾಷ್ಟ್ರದಲ್ಲಿ ಸಂಸ್ಥಾಪಕ ರಾಬರ್ಟ್ ಬೇಡನ್ ಪೋವಲ್ ಅವರು ಕೇವಲ 20 ಹುಡುಗರೊಂದಿಗೆ ಒಂದು ಪ್ರಾಯೋಗಿಕ ಶಿಬಿರದ ಮೂಲಕ ಸ್ಕೌಟ್ ಮತ್ತು ಗೈಡ್ ಚಳವಳಿಯನ್ನು ಪ್ರಾರಂಭಿ ಸಿದರು. ಕಿರಿಯ ವಯಸ್ಸಿನ ಮಕ್ಕಳ ಸಮುದಾಯದ ಶಕ್ತಿ-ಸಾಮಥ್ರ್ಯಗಳಿಗೆ ಸಂಘಟನೆ, ಶಿಸ್ತು ಮತ್ತು ಸೇವಾ ಮನೋಭಾವನೆ ಮೂಡಿಸುವುದು ಗುರಿಯಾಗಿತ್ತು ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸುಮಾರು ನೂರಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ಈ ಸಂಸ್ಥೆ ಜಗತ್ತಿನ ಸುಮಾರು 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಪರ ಕಾರ್ಯ ಕ್ರಮಗಳನ್ನು ಆಯೋಜಿಸುವ ಮುಖೇನಾ ಮಕ್ಕಳಲ್ಲಿ ಶಿಸ್ತು, ಸಂ ಮಯ ಹಾಗೂ ಉದಾರ ಮನೋಭಾವಗಳನ್ನು ಬಿತ್ತುತ್ತಿದೆ ಎಂದು ಹೇಳಿದರು.

ಪ್ರಕೃತಿ ವಿಕೋಪ, ಭೂಕಂಪ, ಸುನಾಮಿ ಸೇರಿದಂತೆ ಜಗತ್ತಿಗೆ ಮಾರಕವಾಗಿರುವ ಆಪತ್ತನ್ನು ಎದುರಿ ಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಮೂರು ದಿನಗಳ ಆಪದ್ ಮಿತ್ರ ತರ ಬೇತಿ ಶಿಬಿರ ಆಯೋಜಿಸುವ ಮೂಲಕ ಸನ್ನದ್ಧಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಇದು ದಿಡೀರನೇ ಎದುರಾ ಗುವ ಪ್ರಕೃತಿ ವಿಕೋಪಕ್ಕೆ ಅಣಿಗೊಳಿಸಲು ಸಹಕಾರಿ ಎಂದರು.

ಸಮಾಜದಲ್ಲಿ ಪ್ರಾಮಾಣಿಕತೆಗೆ ಎಂದಿಗೂ ಬೆಲೆಯಿದೆ. ಮನುಷ್ಯ ಯಾವುದೇ ಕೆಲಸ ನಿರ್ವಹಿಸಿದರೆ ಅದರಲ್ಲಿ ನಂಬಿಕೆ, ವಿಶ್ವಾಸ ಹಾಗೂ ಪ್ರಾಮಾಣೀಕತೆ ಬೇಕು. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಪಾಲಕರು ಮ ತ್ತು ಶಿಕ್ಷಕರ ಆಕಾಂಕ್ಷೆಗಳಿಗೆ ಒತ್ತು ನೀಡಿ ಸಮಾಜದ ಮಾದರಿ ವ್ಯಕ್ತಿಯಾಗಿ ಬದುಕಬೇಕು. ಆಗಮಾತ್ರ ವಿದ್ಯಾ ರ್ಥಿ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಕೌ ಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಅಭಿವೃದ್ದಿಗಾಗಿ ಮಹೇಶ್‍ರವರು ರಾಜ್ಯಮಟ್ಟದಲ್ಲಿ ಚರ್ಚಿಸಿ ಸುಮಾರು ಮೂ ರ್ನಾಲ್ಕು ಕೋಟಿ ಅನುದಾನ ತಂದು ಸಮಾಜಸೇವೆಗೆ ಕಂಕಣಬದ್ಧರಾಗಿ ನಿಂತಿದ್ದಾರೆ ಎಂದು ತಿಳಿಸಿದರು.

ಸ್ಕೌಟ್ಸ್ & ಗೈಡ್ಸ್ ತರಬೇತಿಗಳು ತುರ್ತು ಪರಿಸ್ಥಿತಿಯಲ್ಲಿ ಸನ್ನದ್ಧರಾಗುವ ಜೊತೆಗೆ ವಿದ್ಯಾರ್ಥಿದೆಸೆಯ ಲ್ಲೇ ಮಾನಸಿಕ, ದೈಹಿಕವಾಗಿ ಸದೃಢವಾಗಲು ಪೂರಕ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಎ. ಎಲ್.ಟಿ ಮತ್ತು ಆಪದ್ ಮಿತ್ರ ತರಬೇತಿ ಪೂರೈಸಿದ ಮಕ್ಕಳಿಗೆ ಪ್ರಶಸ್ತಿ ವಿತರಿಸಿದ್ದು, ಇನ್ನುಳಿದಂತೆ ನಿಪುನ್ ಪರೀಕ್ಷಾ ತರಬೇತಿ ಮೂರು ದಿನಗಳ ಕಾಲ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತ ಮಮತ, ಸ್ಕೌಟ್ಸ್ ಆಯುಕ್ತ ಫಣಿರಾಜ್, ಖಜಾಂಚಿ ಕೆ.ಎಸ್. ರಮೇಶ್, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಕಾರ್ಯದರ್ಶಿ ನೀಲಕಂಠಚಾರ್, ಸ್ಥಳೀಯ ಸಂಸ್ಥೆ ಕಾರ್ಯ ದರ್ಶಿ ಬಿ.ಆರ್.ರಕ್ಷಿತ್, ರೋವರ್ ರೇಂಜರ್ಸ್ ಸಂಚಾಲಕ ನಿಶಾಂತ್ ನಾಯ್ಕ್, ಸಂಘಟಕ ಕಿರಣ್‍ಕುಮಾರ್ ಮತ್ತು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ