ಭಗವಂತ ನಿಷ್ಕಲ್ಮಶವಾದ ಭಕ್ತಿಗೆ ಒಲಿಯುತ್ತಾನೆ. ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ಶೃಂಗೇರಿ ರಾಘವೇಂದ್ರಮಠದ ಪ್ರಧಾನ ಕಾರ್ಯದರ್ಶಿ ಹಾಗೂ ವಾಗ್ಮಿ ಶ್ರೀ ಗಿರೀಶ್ ಭಟ್ ಹೇಳಿದರು.
ಅವರು ಗೋಣಿಬೀಡು ಶ್ರೀ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಮತ್ತು ತಿರುಮಲ್ಲೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ “ಶಿವರಾತ್ರಿ ಯಲ್ಲಿ ಧರ್ಮ ಜಾಗರಣೆ ” ಸುಗಮ ಸಂಗೀತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸನೀಡುತ್ತಾ ಮಾತನಾಡಿದರು.
ಭಗವಂತನ ನಾಮ ಸ್ಮರಣೆಯಿಂದ ಎಲ್ಲ ಪಾಪಗಳು ಪರಿಹಾರವಾಗಿ ನೆಮ್ಮದಿಯಿಂದ ಬದುಕಲು ಸಾದ್ಯ ಹಾಗೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹೋನ್ನತ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ವಿಶ್ವ ಹಿಂದೂ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷ ಶ್ರೀ ಸಾಲುಮರ ಮಹೇಶ್ ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಡಿ.ಜಿತೇಂದ್ರ ಅಧ್ಯಕ್ಷತೆ ವಹಿಸಿ ಧರ್ಮವೆಂದರೆ ಕೇವಲ ಪೂಜೆ,ಹೋಮ-ಹವನ ಪಾರಾಯಣಗಳನ್ನು ಮಾಡುವುದಲ್ಲ, ಉತ್ತಮವಾದ ಗುಣಗಳನ್ನು ಅಳವಡಿಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಎಂದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಸ್ವಾಗತಿಸಿ ವಂದಿಸಿದರು ನಂತರ ಭಕ್ತದಿಗಳು ಇನ್ನೂ ಒಂದು ವರ್ಷದ ಒಳಗೆ ಆದಷ್ಟು ಬೇಗನೆ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ಸಹಕರಿಸಿ ಎಂದು ಮನವಿ ಮಾಡಿದರು.
ಮುಖಂಡರಾದ ಹಾಗೂ ದೇವಸ್ಥಾನ ಸಮಿತಿಯ ಕೆ.ಟಿ. ಜಗದೀಶ್. ವರದೇಗೌಡ. ನಯನ್ ಕುಮಾರ್. ಕೆಂಚೇಗೌಡ. ರವಿಕುಮಾರ್.. ಪೃಥ್ವಿ. ಲಯನ್ ನವೀನ್ ಕುಮಾರ್..ಕಾಂತರಾಜ್. ರತೀಶ್. ಪ್ರದೀಪ್. ರಮೇಶ್. ಗ್ರಾಮ ಪಂಚಾಯಿತಿ ಸದಸ್ಯರಾದ ಸುಪ್ರಿತಾ ನಯನ್.. ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ತಿ ಉಮಾ ಮೋಹನ್.ಲೀಲಾ ಜಿತೇಂದ್ರ.ರಾಮ್ ಪ್ರಸಾದ್. ಶರತ್ ಭಟ್ರು. ಗಣೇಶ್ ಗೌಡ ಹಾಗೂ ಇನ್ನೂ ಮುಂತಾದ ವರು ಭಾಗವಹಿಸಿದ್ದರು.
ವಿಶೇಷ ಪೂಜೆ. ಹಾಗೂ ಪ್ರಸಾದ ವಿತರಿಸಲಾಯಿತು.
ಗಾಯಕ ಕುಮಾರ್ ಚಂದನ್ ರವರಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನೆಡೆಸಿದರು.. ನಂತರ ವಾಗ್ಮಿ ಶೃಂಗೇರಿಯ ಗಿರೀಶ್ ಭಟ್ ಹಾಗೂ ಗಾಯಕ ಕುಮಾರ್ ಚಂದನ್ ರವರಿಗೆ ಸನ್ಮಾನಿಸಲಾಯಿತು..



