D5EF65E7BC586A64832E07BA384082EA7E54FAE6(1)

 

 

ಅವಕಾಶ ಯಾರೂ ಕೊಡುವುದಿಲ್ಲ, ಮಹಿಳೆಯರೆ ಕಿತ್ತುಕೊಳ್ಳಬೇಕೆಂದು ಎಂದು ಹಿರಿಯ ಸಿವಿಲ್‍ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ವಿ.ಹನುಮಂತಪ್ಪ ನುಡಿದರು,

ಚಿಕ್ಕಮಗಳೂರು ನಗರದÀ ಕಸ್ತೂರಿ ಬಾ ಸದನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹಾಗೂ ಕಸ್ತೂರಿ ಬಾ ಸದನದ ಸಂಯುಕ್ತಾಶ್ರಯ ನಿನ್ನೆ ಸಂಜೆ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಹಾಗೂ ‘ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸದಾ ದುಡಿಯುವ ಶ್ರಮಜೀವಿ ಮಹಿಳೆಯನ್ನು ಅಬಲೆಯಾಗಿಸಬಾರದು ಎಂದರು.

ಹೆಣ್ಣನ್ನು ನೆಪಮಾತ್ರಕ್ಕೆ ದೇವತೆ ಎಂದು ದೇವದಾಸಿಯಾಗಿಸಿದ ಸಮಾಜ ನಮ್ಮದು.  ಬಾಲ್ಯದಲ್ಲಿ ತಂದೆ, ತಾರುಣ್ಯದಲ್ಲಿ ಗಂಡ, ವಯಸ್ಕಳಾದ ಮೇಲೆ ಮಗನ ಆಶ್ರಯದಲ್ಲಿ ಹೆಣ್ಣು ಜೀವಸಬೇಕಾಗಿತ್ತು.  ವಿದ್ಯೆ ಕಲಿಯುವಂತಿಲ್ಲ ಎಂಬ ಕಾಲವಿತ್ತು. ಪುರುಷರಿಗೆ ಸಮಾನವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೂ ಅವರಷ್ಟು ವೇತನ ಸೌಲಭ್ಯ ಸಿಗುತ್ತಿರಲಿಲ್ಲ.  1909ರಲ್ಲಿ ಅಮೇರಿಕಾದ ಗಿರಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆರಿಗೆ ಸಮಾನವೇತನ-ಸೌಲಭ್ಯ ಕೊಡಬೇಕೆಂಬ ಹಕ್ಕೊತ್ತಾಯವನ್ನು ಕ್ಲಾರಾಜೆಟ್ ಮೊಟ್ಟಮೊದಲ ಬಾರಿಗೆ ಮಂಡಿಸುತ್ತಾಳೆ.  ಅಲ್ಲಿಂದ ಅನೇಕ ಹೋರಾಟಗಳು ಜಗತ್ತಿನ ವಿವಿಧೆಡೆ ನಡೆದಿವೆ.  ಸುಧಾರಣೆಯೂ ಕಂಡಿದೆ ಎಂದರು.

ವೀರವನಿತೆ ಓಬ್ಬವ್ವ-ಚೆನ್ನಮ್ಮ, ಸಾವಿತ್ರೆಬಾಯಿಪುಲೆ,  ಅತಿಹೆಚ್ಚು ಸಮಯ ರಾಜಭಾರ ಮಾಡಿದ ಇಂದಿರಾಗಾಂಧಿ ಇಂದಿನ ರಾಷ್ಟ್ರಪತಿಯವರೆಗೆ ಮಹಿಳೆಯರ ಸಾಧನೆ ಗಮನಾರ್ಹ-ಆದರ್ಶಪ್ರಾಯ ಎಂದ ಹನುಮಂತಪ್ಪ, ಶೇ.33 ಮಹಿಳಾ ಮೀಸಲಾತಿ ಬಳಸಿಕೊಳ್ಳಬೇಕು.  ಮಹಿಳೆಯರಿಗೆ ನೆರವು ನೀಡಲು, ಅರಿವು ಮೂಡಿಸಲು ಇಂದು ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂದು ವಿವರಿಸಿದರು.

1975ರಲ್ಲಿ ವಿಶ್ವಸಂಸ್ಥೆ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿದ ನಂತರ ಎಲ್ಲೆಡೆ ಮಹಿಳೆಯರ ಹಕ್ಕುಬಾಧ್ಯತೆಗಳ ಬಗ್ಗೆ ಸಮಾಲೋಚನಾ ಕಾರ್ಯಕ್ರಮಗಳು ನಡೆಯುತ್ತಿದೆ ಎಂದ ಹನುಮಂತಪ್ಪ,  ವರದಕ್ಷಣೆ-ಸತಿಪದ್ಧತಿ ಸೇರಿದಂತೆ ಕೆಲ ಅನಿಷ್ಟಗಳ ವಿರುದ್ಧ ಸಮಾಜಸುಧಾರಕರಾದ ರಾಜಾರಾಮಮೋಹನರಾಯ್, ಸ್ವಾಮಿವಿವೇಕಾನಂದ, ದಯಾನಂದಸರಸ್ವತಿ ಮತ್ತಿತರರು ಜನಜಾಗೃತಿ ಮೂಡಿಸಿದರು.

ಇಂದು ಭಾರತದ ಸಂವಿಧಾನದಲ್ಲಿ ಹೆಣ್ಣಿಗೆ ಸಮಾನತೆಯಷ್ಟೇ ಅಲ್ಲ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ.  ಮಹಿಳೆಯರ ಪರವಾದ ಕಾನೂಗಳು ರಚನೆಯಾಗಿವೆ.  ವರದಕ್ಷಿಣೆ, ಸತಿ, 2013ರಲ್ಲಿ ಘೋಷ, ಪೋಕ್ಸೋ ಮತ್ತಿತರ ಕಾಯ್ದೆಗಳು ಜಾರಿಗೊಂಡಿವೆ ಎಂದ ಅವರು, ಹೆಣ್ಣಿನ ಸ್ವಾಭಿಮಾನವನ್ನು ವ್ಯಾಪಾರಕ್ಕಿಡುವ ಸಂಗತಿಗಳನ್ನು  ನಿಷೇಧಸಲಾಗಿದೆ ಎಂದು ವಿವರಿಸಿದರು.

ಕಸ್ತೂರಿ ಬಾ ಸದನದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ ರಾಮಾಯಣ ಮಹಾಭಾರತದ ಕಾಲದಿಂದಲೂ ಹೆಣ್ಣುಮಕ್ಕಳಿಗೆ  ಅನ್ಯಾಯ ನಡೆದಿದೆ. ಕಲಿಯುಗದಲ್ಲೂ ಮುಂದುವರೆದಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತದೆ.  ಸಾಕಷ್ಟು ಸುಧಾರಣೆಗಳು ನಡೆದಿವೆ.  ಮಹಿಳೆಯ ಸಾಮಥ್ರ್ಯ ಮತ್ತು ಪ್ರತಿಭೆಗೂ ಇಂದು ಸಾಕಷ್ಟು ಅವಕಾಶಗಳಿವೆ.  ಮಹಿಳೆಯರು ಜವಾಬ್ದಾರಿ ಅರಿತು ವರ್ತಿಸಬೇಕು.  ಆಸ್ತಿ ಅಂತಸ್ತಿಗಾಗಿ ತಕರಾರು ತೆಗೆಯದೆ ಗೌರವಾನ್ವಿತವಾಗಿ ನಡೆದುಕೊಂಡರೆ ಕುಟುಂಬದ ಸಂಬಂಧಗಳು ಚೆನ್ನಾಗಿರುತ್ತದೆ ಎಂದರು.

ಕಸ್ತೂರಿಬಾ ಸದನದ ನಿರ್ದೇಶಕಿ ಜಯಶ್ರೀನಂಜರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ  1960ರಲ್ಲಿ ಸಾವಿತ್ರಮ್ಮ ಅಣ್ಣೇಗೌಡ, ಶಶಿಕಲಾರಮೇಶ್ ಮತ್ತು ಸುಶೀಲಮ್ಮ ಮತ್ತಿರ ಮಹಿಳೆಯರು ಸೇರಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಗೌರಮ್ಮಚ್ಚಯ್ಯ ಸ್ಥಾಪಕ ಅಧ್ಯಕ್ಷರು.  ಹೆಣ್ಣು ಮಕ್ಕಳಿಗಾಗಿಯೇ ಅನೇಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು ವೃತ್ತಿ ತರಬೇತಿ, ಟೈಲರಿಂಗ್, ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಬಾಲಸೇವಿಕ ತರಬೇತಿ ನೀಡಲಾಗಿದೆ. ಉದ್ಯೋಗಸ್ಥ ಮಹಿಳೆಯರ ವಸತಿನಿಲಯ ಕಟ್ಟಡವನ್ನು ನಮಗೆ ಸ್ಫೂರ್ತಿಯಾಗಿ ನೀಡಿದವರು ಕೇಂದ್ರಸಚಿವರಾಗಿದ್ದ ಮಾರ್ಗರೇಟ್ ಆಳ್ವ ಎಂದು ಸ್ಮರಿಸಿದರು.

ಕಸ್ತೂರಿ ಬಾ ಸದನದಲ್ಲಿ ಮಾಜಿಸಚಿವೆ ಮೋಟಮ್ಮ, ಗೌರಮ್ಮಅಚ್ಚಯ್ಯ, ರಾಜೇಶ್ವರಿ, ಸುಧಾಮಣಿ, ಮೋಹಿನಿಸಿದ್ದೇಗೌಡರು ಪದಾಧಿಕಾರಿಗಳಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.  ಅನೇಕ ಮಹಿಳಾಪರ ಹೋರಾಟ ನಡೆಸಿದ್ದು, ಕೌಟುಂಬಿಕ ಸಲಹಾ ಕೇಂದ್ರ ನಡೆಸಲಾಗುತ್ತಿದೆ.

ಪ್ರಸ್ತುತಸಾಲಿನಲ್ಲಿ  ಯಮುನಾಸಿ.ಶೆಟ್ಟಿ ಅವರು ಅಧ್ಯಕ್ಷರಾಗಿ,  ಕಾರ್ಯದರ್ಶಿಯಾಗಿ ರೀನಾಸುಜೇಂದ್ರ, ಉಪಾಧ್ಯಕ್ಷೆ ಯಶೋಧಲಕ್ಷ್ಮಣಗೌಡ, ಖಜಾಂಚಿ ಶುಭರಾಮೇಗೌಡ, ಸದಸ್ಯರಾಗಿ ಅರ್ಚನಾವಿಕ್ರಂ, ಜಯಶ್ರೀ, ಗೀತಾಚಂದ್ರಶೇಖರ್, ಪಾರ್ವತಿಬಸವರಾಜು, ಸಂಧ್ಯಾಸುಧೀರ್, ಸಾವಿತ್ರಮ್ಮಮಂಜುನಾಥ, ಆರುಂಧತಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಜಯಶ್ರೀ ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಿ.ಸಂತೋಷ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ ಮಹಿಳಾ ಸಬಲೀಕರಣ ಕುರಿತು ಮಾತನಾಡಿದರು.

ಕಸ್ತೂರಿ ಬಾ ಸದನದ ಉಪಾಧ್ಯಕ್ಷೆ ಯಶೋಧ ಲಕ್ಷ್ಮಣಗೌಡ ಸ್ವಾಗತಿಸಿ, ಸದಸ್ಯರಾದ ಅರ್ಚನಾವಿಕ್ರಮ್ ವಂದಿಸಿದರು. ವಕೀಲೆ ಆರುಂಧತಿ ಕಾರ್ಯಕ್ರಮ ನಿರೂಪಿಸಿದರು. ರಾಧಾಮಣಿ ಮತ್ತು ಮಂಜುಳಾ ಪ್ರಾರ್ಥಿಸಿದರು.

ವಾರ್ಡನ್ ಗೀತಾ, ಜ್ಯೋತಿ ಮತ್ತು ಕೃಷ್ಣಮೂರ್ತಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಸ್ವಾಧಾರಶಕ್ತಿ ಸದನ, ಬಾಲಾಸೇವಿಕ ಮಕ್ಕಳು ಮತ್ತು ಕಸ್ತೂರಿಬಾ ಸದನದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ