ಹಿಂದೂ ಸಂಸ್ಕಾರ, ಆಚಾರ-ವಿಚಾರ, ವೈವಿಧ್ಯತೆ ಹಾಗೂ ಪೂಜಾ ವಿಧಾನಗಳ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅರ್ಚಕರ ಸಂಘವನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷ ಉದಯಶಂಕರ ಭಟ್ಟರು ಹೇಳಿದರು.
ನಗರದ ಶಂಕರ ಮಠದ ಸಭಾಂಗಣದಲ್ಲಿ ನೂತನ ಚಿಕ್ಕಮಗಳೂರು ತಾಲ್ಲೂಕು ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಪೂರ್ವಿಕರ ಆಚಾರಗಳನ್ನು ಗಟ್ಟಿಯಾಗಿ ನೆಲೆಯೂರಿಸಲು ಹಾಗೂ ಸನಾತನ ಧರ್ಮ ವನ್ನು ಉಳಿಸಲು ಸಂಘವನ್ನು ಸ್ಥಾಪಿಸಲಾಗಿದೆ. ಆ ನಿಟ್ಟಿನಲ್ಲಿ ತಾಲ್ಲೂಕು ಘಟಕ ಸ್ಥಾಪಿಸುವ ಮೂಲಕ ಅರ್ಚ ಕರ ಮೂಲ ಸೇವಾಕಾರ್ಯಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಹೆಸರಿನಲ್ಲಿ ಈಗಾಗಲೇ ನೂತನ 13 ಮಂದಿ ನೋಂದಣಿಯಾಗಿದ್ದಾರೆ. ಅದರಂತೆ ಸಂ ಘವನ್ನು ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗುವುದು. ಶೃಂಗೇರಿ ಹಾಗೂ ಹರಿಹರಪುರ ಸ್ವಾಮೀಜಿ ಗಳ ಆರ್ಶೀವಾದೊಂದಿಗೆ ತಮ್ಮ ನೇತೃತ್ವದಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಟಗೊಳಿಸಲಾಗುವುದು ಎಂದರು.
ಪ್ರಸ್ತುತ ಅರ್ಚಕರಿಗೆ ದೇವಾಲಯಗಳಲ್ಲಿ ಗೌರವ ಧನ ನೀಡುತ್ತಿಲ್ಲ. ಕೆಲವು ದೇವಾಲಯಗಳಲ್ಲಿ ಅರ್ಚ ಕರನ್ನು ಸಮಯಾವಕಾಶ ನೀಡದೇ ಏಕಾಏಕಿ ತೆಗೆಯುವ ಪ್ರಯತ್ನ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಅರ್ಚಕರು ಯಾವುದೇ ದೇವಾಲಯಕ್ಕೆ ಸೇರುವ ಮುನ್ನ ಸಂಘದಲ್ಲಿ ನೋಂದಾಯಿಸಿಕೊಂಡಲ್ಲಿ, ಸಂಘವು ಅರ್ಚಕರ ಪರವಾಗಿ ಕೆಲಸ ನಿರ್ವಹಿಸಲಿದೆ ಎಂದರು.
ಸಂಘದ ಅಭಿವೃದ್ದಿ ದೃಷ್ಟಿಯಿಂದ ಅರ್ಚಕರು ಸ್ವಯಂ ಪ್ರೇರಿತರಾಗಿ ಧನಸಹಾಯ ಮಾಡಬಹುದು. ಈ ಹಣವನ್ನು ಸಂಘದ ಅರ್ಚಕರ ಆರ್ಥಿಕ ಸಂಕಷ್ಟ ಎದುರಾದಾಗ ಬಳಕೆ ಮಾಡಲಾಗುವುದು ಎಂದ ಅವರು ಈಚೆಗೆ ಓರ್ವ ಅರ್ಚಕರ ಮನೆಗೆ ಬೆಂಕಿತಗುಲಿದಾಗ ಸಂಘ, ಜನಪ್ರತಿನಿಧಿಗಳ ಸಹಕಾರದೊಂದಿಗೆ ಹಾನಿಗೊಳಗಾದ ಅರ್ಚಕರಿಗೆ 1 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದರು.
ನೂತನ ತಾಲ್ಲೂಕು ಸಂಘದ ಅಧ್ಯಕ್ಷ ನಾಗರಾಜ ಭಟ್ಟರು ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಅರ್ಚ ಕರ ಸಂಘವು ಹೆಚ್ಚು ಪ್ರಾತ್ಯನಿಧ್ಯ ನೀಡುತ್ತಿರಲಿಲ್ಲ. ಇದೀಗ ನೂತನ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಹೆಚ್ಚು ಚಟುವ ಟಿಕೆಗಳಲ್ಲಿ ತೊಡಗಿಸಿಕೊಂಡು ಅರ್ಚಕರ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅರ್ಚಕರ ನಡುವಿನ ಕುಂದುಕೊರತೆ ಹಾಗೂ ಚರ್ಚೆಗಳಿದ್ದಲ್ಲಿ ಪ್ರತಿ ಎರಡನೇ ಮಂಗಳವಾರ ಸಭೆ ನಡೆ ಸಲಾಗುತ್ತಿದ್ದು ಸರ್ವರು ಭಾಗವಹಿಸಬೇಕು. ಅಲ್ಲದೇ ಅರ್ಚಕ ವೃತ್ತಿಯಲ್ಲಿರುವವರು ವೇದ, ಉಪನಿಷತ್ತು, ಪುಣ್ಯಹಾ, ಸಂಕಲ್ಪ ಹಾಗೂ ಮಂತ್ರಗಳ ಸಂಪೂರ್ಣ ವಿದ್ಯೆಯನ್ನು ಕಲಿತುಕೊಂಡು ಪೂಜಾಕೈಂಕಾರ್ಯದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ನೂತನ ತಾಲ್ಲೂಕು ಸಂಘದ ಪದಾಧಿಕಾರಿಗಳು : ನಾಗರಾಜಭಟ್ಟರು (ಅಧ್ಯಕ್ಷ), ರಾಮಚಂದ್ರಶಾಸ್ತ್ರಿ (ಗೌರವಾಧ್ಯಕ್ಷ), ರಾಧಾಕೃಷ್ಣಭಟ್ಟರು, ಅನಿಲ್‍ಭಟ್ಟರು (ಉಪಾಧ್ಯಕ್ಷರು), ರಾಜೇಂದ್ರ ಭಟ್ಟರು (ಪ್ರ.ಕಾರ್ಯದ ರ್ಶಿ), ವೆಂಕಟೇಶ್ ಹೆಬ್ಬಾರ್ (ಖಜಾಂಚಿ), ಶ್ರೀನಿಧಿ ಭಟ್ಟರು, ರಾಮಕೃಷ್ಣಭಟ್ಟರು, ಗುರುಪ್ರಸಾದ್ ಭಟ್ಟರು, ಅಶ್ವಥ್‍ಆಚಾರ್, ಗಣೇಶ್ ಭಟ್ಟರು, ಸಂತೋಷ್ ಭಟ್ಟರು, ನವೀನ್ ಭಟ್ಟರು (ಸದಸ್ಯರುಗಳು).
ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಅರ್ಚಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಂದಕುಮಾರ್ ಭಟ್ಟರು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಟ್ಟರು ಮತ್ತು ಅರ್ಚಕರ ವೃಂದವು ಉಪಸ್ಥಿತರಿದ್ದರು.



