ಕಾಡಾನೆಯೊಂದು ಬೈಕ್ ಅಡ್ಡಗಟ್ಟಿ ತುಳಿದು ಹಾಕಿದ ಘಟನೆ ಚಿಕ್ಕಮಗಳೂರು ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ಬಳಿ ನಡೆದಿದೆ. ಈ ವೇಳೆ ಬೈಕ್ ಬಿಟ್ಟು ಸವಾರ ಅಲ್ಲಿಂದ ಓಡಿ ಹೋಗಿದ್ದು ಕೂದಲೆಳೆ ಅಂತರದಿಂದ ಪಾರಾಗಿದ್ದಾನೆ.
ಕಾಡಾನೆಯ ಸಿಟ್ಟಿಗೆ ಬೈಕ್‍ನ ಮುಂಭಾಗ ಪುಡಿಪುಡಿಯಾಗಿದ್ದು, ಸಾಕಷ್ಟು ಹಾನಿಯಾಗಿದೆ. ಕಾಡಾನೆ ಕಾಣುತ್ತಿದ್ದಂತೆ ಬೈಕ್ ಬಿಟ್ಟು ಓಡಿ ಹೋಗಿದ್ದರಿಂದ ಸವಾರನ ಜೀವ ಉಳಿದಿದೆ. ಕಾಡಾನೆ ಸೆರೆಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.



