ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶೀಲಾದಿನೇಶ್ ಅವರು ನಗರಸಭೆಯ 2026-27ನೇ ಸಾಲಿನ 2.61 ಕೋಟಿ ರೂ. ಉಳಿತಾಯ ಬಜೆಟನ್ನು ಗುರುವಾರ ಮಂಡಿಸಿದರು.
ನಗರಸಭಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿದ ಅಧ್ಯಕ್ಷರು ಒಟ್ಟು 156.16 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 153.55 ಕೋಟಿ ವೆಚ್ಚವಾಗುತ್ತಿಲ್ಲ 2.61 ಕೋಟಿ ಉಳಿತಾಯವನ್ನು ನಿರೀಕ್ಷಿಸಲಾಗಿದೆ.ಒಟ್ಟಾರೆಯಾಗಿ ನಮ್ಮ ಆಡಳಿತದ ಬಜೆಟ್ ಸಂಪೂರ್ಣವಾಗಿ ಅಭಿವೃದ್ಧಿ ಪರ, ಪರಿಸರ ಸ್ನೇಹಿ ಹಾಗೂ ದೂರದೃಷ್ಟಿಯುಳ್ಳು ಬಜೆಟ್ ಆಗಿದೆ ಎಂದು ಹೇಳಿದರು.
ಆಸ್ತಿ ತೆರಿಗೆಯಿಂದ 22 ಕೋಟಿ, ವಾಣಿಜ್ಯಮಳಿಗೆ ಬಾಡಿಗೆಯಿಂದ 157.50 ಲಕ್ಷ, ನೀರುಸರಬರಾಜು ಶುಲ್ಕ 3.10 ಕೋಟಿ,ಅಭಿವೃದ್ಧಿ ಶುಲ್ಕ 1.32 ಕೋಟಿ,ಕಟ್ಟಡ ಪರವಾನಗಿ ಮತ್ತು ವ್ಯಾಪಾರ ಪರವಾನಗಿಯಿಂದ ತಲಾ 80 ಲಕ್ಷ, ಖಾತಾ ಬದಲಾವಣೆಯಿಂದ 70 ಲಕ್ಷ, ಖಾತಾ ಪ್ರತಿ ಮತ್ತು ಇತರೆ ಪ್ರತಿಗಳು ಶುಲ್ಕದ ರೂಪದಲ್ಲಿ 45 ಲಕ್ಷ,ಮಾರುಕಟ್ಟೆ-ನೆಲಬಾಡಿಗೆ ಶುಲ್ಕ 26 ಲಕ್ಷ, ರಸ್ತೆ ಅಗೆತದಿಂದ 25 ಲಕ್ಷ, ಎಸ್.ಎಫ್.ಸಿ. ಮುಕ್ತನಿಧಿಯಿಂದ 40 ಲಕ್ಷ,ಎಸ್.ಎಫ್.ಸಿ. ವೇತನಬಾಬ್ತು11.10 ಕೋಟಿ, ವಿದ್ಯುತ್ ಅನುದಾನ 13.10 ಕೋಟಿ, ಘನತ್ಯಾಜ್ಯ ನಿರ್ವಹಣಾಶುಲ್ಕ 2.50 ಕೋಟಿ, ಅನುಪಯುಕ್ತ ವಸ್ತುಗಳ ಮಾರಾಟದಿಂದ 20 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಜಾಹಿರಾತು ತೆರಿಗೆಯಿಂದ 5 ಲಕ್ಷ, ಗೊಬ್ಬರ ಮಾರಾಟದಿಂದ 20 ಲಕ್ಷ, ಅಮೃತ್ 2.0 ಯೋಜನೆಯಿಂದ 4 ಕೋಟಿ, ಸ್ವಚ್ಚಭಾರತ್ ಮಿಷನ್ ಯೋಜನೆಯಿಂದ 5 ಕೋಟಿ,16ನೇ ಹಣಕಾಸಿನ ಅನುದಾನ 12.50 ಕೋಟಿ, ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆ 20 ಲಕ್ಷ, ಕೇಂದ್ರ ಸರ್ಕಾರದ ಡೇ-ನಲ್ಮಾ ಯೋಜನೆಯಿಂದ 30 ಲಕ್ಷ,ಕೇಂದ್ರ ಸರ್ಕಾರದ ಯುಐಡಿಎಫ್ ವಿದ್ಯುತ್, ಅನಿಲಚಿತಾಗಾರ ನಿರ್ಮಾಣ ಯೋಜನೆಯಿಂದ 4 ಕೋಟಿ,ಸರ್ಕಾರಿ ಸಂಸ್ಥೆಗಳಿಂದ ಸಾಲ 35 ಕೋಟಿ, ಶೇ.24.10 ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 1.19 ಕೋಟಿ, ಶೇ.7.25 ಇತರೆ ಬಡವರ ಅಭಿವೃದ್ಧಿಗೆ 35.21 ಲಕ್ಷ ಶೇ. 5ರ ವಿಶೇಷ ಚೇತನರ ಅಭಿವೃದ್ಧಿಗೆ 24.28 ಲಕ್ಷ ವ್ಯಯಿಸಲಾಗುವುದು ಎಂದು ಹೇಳಿದರು.
ನಗರಸಭೆಯ ಎಲ್ಲಾ ಆಸ್ತಿಗಳಾದ ಸಾರ್ವಜನಿಕ ಆಸ್ತಿ, ನಗರಸಭೆ ಆಸ್ತಿ, ಕಟ್ಟಡ, ಖಾಲಿನಿವೇಶನ, ದೇವಾಲಯ ಬಸ್‍ನಿಲ್ದಾಣ, ರಸ್ತೆ, ಹಳ್ಳ,ಕೆರೆಕಟ್ಟೆಗಳು, ಸ್ಮಶಾನ, ಸರ್ಕಾರಿ ಆಸ್ತಿಗಳನ್ನು ಅಳತೆಗೊಳಪಡಿಸಿ, ನಿಖರವಾದ ಸರ್ವೆಕಾರ್ಯವನ್ನು ಭೂಮಾಪನಾ ಇಲಾಖೆ ಮತ್ತು ನಗರಸಭೆ ಜಂಟಿ ಸಹಭಾಗಿತ್ವದಲ್ಲಿ ನಡೆಸುತ್ತಿದ್ದು, ಈಗಾಗಲೇ ಸುಮಾರು 30ಸಾವಿರ ಆಸ್ತಿಗಳ ಸರ್ವೆಕಾರ್ಯ ಅಂತಿಮ ಘಟ್ಟದಲ್ಲಿದೆ. ಎಲ್ಲಾ ಸರ್ವೆಕಾರ್ಯ ಪೂರ್ಣಗೊಂಡು ಆಸ್ತಿಗಳ ಡಿಜಿಟಲೀಕರಣಗೊಳಿಸಿದ್ದಲ್ಲಿ ನಗರಸಭೆಯ ಆದಾಯ ಕಳೆದ ಸಾಲಿಗೆ ಹೋಲಿಸಿದರೆ ಶೇ. 50 ರಷ್ಟು ಹೆಚ್ಚಾಗಲಿದೆ ಎಂದರು.
ಈಗಾಗಲೇ ದಾಖಲಾಗಿರುವ ಬಿ-ಖಾತೆಗಳಿಗೆ ಎ-ಖಾತೆ ನೀಡುವ ಅವಕಾಶ ಕಲ್ಪಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ನಿರ್ದಿಷ್ಟ ಶುಲ್ಕ ನಿಗದಿಪಡಿಸಿದಲ್ಲಿ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ.ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸಿ 200 ಟನ್ ಮಾರಾಟಮಾಡಿದ್ದು, 6 ಲಕ್ಷ ಆದಾಯ ಬಂದಿದೆ.ಒಳತ್ಯಾಜ್ಯಗಳ ಪುನರ್ ಬಳಕೆಯಿಂದ 2.40 ಆದಾಯ ಬಂದಿರುತ್ತದೆ. ಮನೆಕಸ ಸಂಗ್ರಹಣೆಯನ್ನು ನಗರಸಭೆ ಮಾಡುತ್ತಿದ್ದು 2.50ಕೋಟಿ ಶುಲ್ಕ ವಸೂಲಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಹೆರಿಗೆ ಆಸ್ಪತ್ರೆ ಮುಂಭಾಗದಲ್ಲಿರುವ ನಗರಸಭೆ ಜಾಗದಲ್ಲಿ ವಸತಿಗೃಹಗಳನ್ನು ತೆರವುಗೊಳಿಸಿ 1.30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವು ಮತ್ತು ಹಣ್ಣಿನ ಮಾರುಕಟ್ಟೆ ಮಳಿಗೆ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ತಿಳಿಸಿದರು. ಉಪಾಧ್ಯಕ್ಷೆ ಲಲಿತಾ, ನಗರಸಭೆ ಆಯುಕ್ತ ಬಸವರಾಜ್ ಇದ್ದರು.



