ಆಲ್ದೂರು ಸಮೀಪದ ಕೆಳಗೂರು ನಾಡ ದೇವತೆಯಾದ ಶ್ರೀದೇವಿರಮ್ಮನವರ 21 ದಿನಗಳ ಸುಗ್ಗಿ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಸ್ಥಳೀಯ ಮುಖಂಡರಾದ ಕೆಳಗೂರು ಪೂರ್ಣೇಶ್ ಮಾತನಾಡಿ, ಒಟ್ಟು 12 ಹಳ್ಳಿಗಳ ವ್ಯಾಪ್ತಿಯಲ್ಲಿ ನಡೆಯುವ ಸುಗ್ಗಿ ಮಹೋತ್ಸವವು ಯಲಗುಡಿಗೆ ಮಡೆನೇರಲು ಗ್ರಾಮಕ್ಕೆ ಮೊದಲ ದಿನ ತೆರಳಿ ದೀಪಾವಳಿ ಕಂಬವನ್ನು ಎದುರು ಗಾಣುವುದರ ಮೂಲಕ ಚಾಲನೆಗೊಳ್ಳುತ್ತದೆ ಸೋಮವಾರದಿಂದ ಶುಕ್ರವಾರದವರೆಗೆ ಗುರಿ ಕಾವಲು ಆಚರಣೆ, ಶುಕ್ರವಾರ ದೇವಿರಮ್ಮ ದೇವಿಗೆ ಉಡುಗೆ ತೊಡಿಸುವುದು, ಶನಿವಾರ ಹೊನ್ನಾರ ಉತ್ಸವ, ಸಂಜೆ ಭೂತಪ್ಪ ದೇವರ ನಾಡ ಸವಾರಿ, ಭಾನುವಾರ ಇಡು ಸುಗ್ಗಿ ಮಹೋತ್ಸವ, ಸೋಮವಾರ ಗುಡ್ಡದ ಚೌಥ,ಮಡೆನೇರಲು ಗ್ರಾಮದಲ್ಲಿ ಚೌಥ,
ನಂತರದ ದಿನ ಅಮ್ಮನವರಿಗೆ ಮಡಿಪ್ರಸಾದ,ಗುರುವಾರ ಹಗಲಿನ ಸಮಯದಲ್ಲಿ ಕೆಂಡೋತ್ಸವ, ರಾತ್ರಿ ಹೊತ್ತಿನಲ್ಲಿ ಹಗಲು ಸುಗ್ಗಿ, ಶುಕ್ರವಾರ ಮುಂಜಾನೆ ತೇರನ್ನು ಎಳೆಯುವುದು ಶನಿವಾರ ಕೋಲಾಟ ದೊಂದಿಗೆ ತೇರು, ಓಕುಳಿಯೊಂದಿಗೆ ಸುಗ್ಗಿ ಮಹೋತ್ಸವ ಸಂಪನ್ನ ಗೊಂಡಿತು.
ಈ ಆಚರಣ ಮಹೋತ್ಸವದ ಮುಂದಾಳತ್ವವನ್ನು ನಾಡಪಟೆಲ್ ವೀರರಾಜು ವಹಿಸಿದ್ದು, ಅವರ ಪುತ್ರ ದೇವಾನಂದನ್ ನೇತೃತ್ವ ವಂಶಪಾರಂಪರೆಯಾಗಿ ವಹಿಸಿಕೊಂಡು ನಿರ್ವಹಿಸುತ್ತಿರುವುದು ಸಂಪ್ರದಾಯ ವಾಡಿಕೆ ಎಂದು ಮಾಹಿತಿ ನೀಡಿದರು.



