suddi-2 (2)

 

 

ಅಂಬೇಡ್ಕರ್ ಜಯಂತಿ ವೇಳೆ ಅಪಘಾತಕ್ಕೆ ಒಳಗಾದ ಗಾಯಾಳುಗ ಳಿಗೆ ರಾಜ್ಯಸರ್ಕಾರ ಸಮರ್ಪಕ ಚಿಕಿತ್ಸೆಗೆ ಹಾಗೂ ಸಾವಪ್ಪಿದ ಕುಟುಂಬಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಹಿಂದೂ ಭೀಮ್ ಆರ್ಮಿ ಮುಖಂಡರುಗಳು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಶಿರಸ್ತೇದಾರ್ ಹೇಮಂತ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಕುರುವಂಗಿ ವೆಂಕಟೇಶ್ ಚಿಕ್ಕಮಗಳೂರು ತಾಲ್ಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಕಳೆದ ಏ.14 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ದಲ್ಲಿ ಕಾರು ಚಾಲಕ ಮದ್ಯಪಾನ ನಡೆಸಿ ಅಜಾಗರೂಕತೆಯಿಂದ ದಲಿತರ ಮೇಲೆ ಏಕಾಏಕಿ ಡಿಕ್ಕಿ ಹೊಡೆದಿ ದ್ದಾನೆ ಎಂದರು.

ಅಂದು ರಾತ್ರಿ 10 ಗಂಟೆ ಸಮಯದಲ್ಲಿ ಕಾರು ಚಾಲಕ ಮದ್ಯಪಾನ ಮಾಡಿಕೊಂಡು ಬರುವಾಗ, ಗ್ರಾಮದಲ್ಲೇ ನಡೆಯುತ್ತಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಏಳು ಮಂದಿಗೆ ಡಿಕ್ಕಿ ಹೊಡೆದು, ಮಗುವೊಂದು ಸ್ಥಳದಲ್ಲೇ ಸಾವಪ್ಪಿದ್ದು, ಇತರೆ ಮಂದಿ ಗಂಭೀರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಪ್ರತಿ ವರ್ಷದಂತೆ ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ನಡೆಸಲಾಗುತ್ತಿದೆ. ಅಲ್ಲದೇ ಹಿಂದಿನ ದಿನ ಶ್ರೀ ರಂಗನಾಥ ಸ್ವಾಮಿ ರಥೋತ್ಸವ, ಶ್ರೀ ಶನೇಶ್ವರ ಸ್ವಾಮಿ ನಾಟಕ ಕಾರ್ಯಕ್ರಮ ಇತ್ತು. ಮೂರನೇ ದಿನ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಹಿನ್ನೆಲೆ ತಾಲ್ಲೂಕಿನ ಇಂದಾವರ, ಅಲ್ಲಂಪುರ ಮತ್ತು ಮುಗು ಳುವಳ್ಳಿ ಗ್ರಾಮದ ಬಂಧುಗಳು ಆಗಮಿಸುತ್ತಿದ್ದರು ಎಂದರು.

ಈ ನಡುವೆ ಮದ್ಯಪಾನವೆಸಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ಅಂಬೇಡ್ಕರ್ ಜಯಂತಿ ಗುಂಪಿ ನಲ್ಲಿದ್ಧ ಇಂದಾವರ ಗ್ರಾಮಸ್ಥರಿಗೆ ಕಾರನ್ನು ಗುದ್ದಿಸಿದಾಗ ಮಗುವೊಂದು ಸ್ಥಳದಲ್ಲಿ ಸಾವಪ್ಪಿದ್ದು, ಇತರೆ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕಾರು ಚಾಲನೆ ನಡೆಸಿದ ವ್ಯಕ್ತಿಯನ್ನು ಇಂದಿಗೂ ಬಂಧಿಸದಿ ರುವುದು ಖಂಡನೀಯ ಎಂದು ತಿಳಿಸಿದರು.

ಮೂಲತಃ ದಲಿತರು ಆರ್ಥಿಕ, ಶೈಕ್ಷಣಿಕ ಹಿಂದುಳಿದ ಜನಾಂಗ. ಇದೀಗ ಆಸ್ಪತ್ರೆಯಲ್ಲಿ ಸಾವು-ನೋವಿ ನ ನಡುವೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ತೀವ್ರ ಬಡವರಾಗಿದ್ದು ಚಿಕಿತ್ಸೆಯ ವೆಚ್ಚ ಭರಿಸಲು ಕಷ್ಟಸಾಧ್ಯವಾ ಗಿದೆ. ಆದ್ದರಿಂದ ಸರ್ಕಾರ ಮೃತಪಟ್ಟ ಮತ್ತು ಗಾಯಳುಗಳಿಗೂ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಈ ಘಟನೆಯನ್ನು ಜಿಲ್ಲಾಡಳಿತ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಗಾಯಾಳುಗಳಿಗೆ ನೀಡಲಾಗುವ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ನೀಡಬೇಕು. ಹಿಂದೆ ಗಣಪತಿ ವಿಸರ್ಜನೆ ವೇಳೆ ಸಾವಪ್ಪಿದ ವ್ಯಕ್ತಿಗೆ ಸರ್ಕಾರ ಪರಿಹಾರ ಘೋಷಿಸಿತ್ತು. ಆ ಮಾದರಿಯಲ್ಲೇ ದೊಡ್ಡ ದುರಂತ, ಈ ರೀತಿ ಅವಘಡ ಸಂಭವಿಸಿದಾಗ ಸರ್ಕಾ ರವೇ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಿಂದೂ ಭೀಮ್ ಆರ್ಮಿ ಅಧ್ಯಕ್ಷ ಯೋಗೀಶ್, ಮುಖಂಡರುಗಳಾದ ಪ್ರದೀಪ್, ಹಂಪಯ್ಯ, ಹೆಚ್.ಕೆ.ಕೇಶವಮೂರ್ತಿ, ರೇವನಾಥ್, ರಾಜ್‍ಕುಮಾರ್, ಗುರು, ಜೆ.ಡಿ.ಲೋಕೇಶ್, ನರಸಿಂಹ, ಹೂವಪ್ಪ, ಧರ್ಮರಾಜ್, ನಂಜುಂಡಪ್ಪ, ಚಂದ್ರು, ಸಂಗೀತ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ