ಮೂಡಿಗೆರೆ ಪಟ್ಟಣದ ಛತ್ರಮೈಧಾನದ ಸಮೀಪದ ಜೆಎಸ್ ಶಾಲೆ ಹಿಂಭಾಗದಲ್ಲಿ ಎಫ್‍ಎಂಎಸ್‍ಸಿಐ ಸಹಕಾರದಿಂದ ಡರ್ಟ್‍ಟ್ರಾಕ್ 2026 ವತಿಯಿಂದ ಇತ್ತೀಚೆಗೆ 2 ದಿನ ಬೈಕ್ ಮತ್ತು ಕಾರ್‍ಗಳ ಡರ್ಟ್‍ಟ್ರಾಕ್ ರ್ಯಾಲಿ ನಡೆಯಿತು.
ರೋಚಕ ಮತ್ತು ಸಾಹಸಮಯವಾದ ಈ ಕ್ರೀಡೆಯಲ್ಲಿ 139 ಬೈಕ್, 161 ಕಾರು ಭಾಗವಹಿಸಿತ್ತು. ಆಯೋಜಕರು ವೈದ್ಯಕೀಯ ಸೌಲಭ್ಯ, ನಿರ್ವಹಣೆ ಜತೆಗೆ ಶಿಸ್ತು, ಸುರಕ್ಷಿತ ಹಾಗೂ ಜವಾಬ್ದಾರಿಯಿಂದ ರ್ಯಾಲಿ ನಡೆಸಿದ್ದು, ಡರ್ಟ್‍ಟ್ರಾಕ್ ಕ್ರೀಡೆ ವೀಕ್ಷಕರನ್ನು ಮನೋರಂಜಿಸಿತು.
ಬೈಕ್‍ಗಳ ವಿಭಾಗದಲ್ಲಿ ಬೆಸ್ಟ್ ರೈಡರ್ ಆಗಿ ಪ್ರಥಮ ಸ್ಥಾನ ಫರಾಜ್ ಪಾಷಾ ಚಾಮರಾಜನಗರ, ದ್ವಿತೀಯ ಮುಸೇನ್ ಶಾಖ್ ಹಾಸನ, ಕಿಡ್ಸ್‍ಬೈಕ್‍ನಲ್ಲಿ ಪ್ರಥಮ ಅಫ್ನಾನ್‍ಖಾನ್ ಚಿಕ್ಕಮಗಳೂರು, ದ್ವಿತೀಯ ಅಯಾನ್ ರಫಿ, ತೃತಿಯ ಸ್ಥಾನ ಮಹಮ್ಮದ್ ಇಮಾನ ಚಿಕ್ಕಮಗಳೂರು, 2ಸ್ಟ್ರೋಕ್ ಮತ್ತು 4 ಸ್ಟ್ರೋಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅರ್ಫಾಜ್ ಅಹಮ್ಮದ್ ಪಡೆದರು. ಬಿ
ಗಿನಿಯರ್ಸ್‍ನಲ್ಲಿ ದೀಕ್ಷಿತ್ ಪೂಜಾರಿ ಪ್ರಥಮ, ಸ್ಟಾರ್ ಆಪ್ ಚಿಕ್ಕಮಗಳೂರು ಪ್ರಥಮ ಸಯೀಫ್‍ಕಾನ್ ಮೂಡಿಗೆರೆ, ದ್ವಿತೀಯ ದಿವನ್‍ಗೌಡ ಚಿಕ್ಕಮಗಳೂರು, ಮೊಪೆಡ್ ಕ್ಲಾಸ್‍ನಲ್ಲಿ ಪ್ರಥಮ ಖಲೀಂ ಹೊಸೂರ್, ದ್ವಿತೀಯ ಸಾಜಿದ್ ಮೈಸೂರು, ಕರ್ನಾಟಕ ಓಪನ್ ಕ್ಲಾಸ್‍ನಲ್ಲಿ ಪ್ರಥಮ ಸಯಯದ್ ಸಮೀರ್ ಮೂಡಿಗೆರೆ, ದ್ವಿತೀಯ ಅಫ್ನಾನ್ ಶರಿಫ್ ಮೈಸೂರು, ಕರ್ನಾಟಕ ಓಪನ್ ಕ್ಲಾಸ್‍ನಲ್ಲಿ ಪ್ರಥಮ ಸೈಯದ್ ಸಮೀರ್ ಮೂಡಿಗೆರೆ, ದ್ವಿತೀಯ ಅಫ್ನಾನ್ ಶರೀಫ್ ಮೈಸೂರು, ಎಕ್ಸ್‍ಪೋರ್ಟ್ ಕ್ಲಾಸ್‍ನಲ್ಲಿ ಪ್ರಥಮ ಅರ್ಷಾಜ್ ಅಹಮ್ಮದ್, ದ್ವಿತೀಯ ಸ್ಥಾನ ಫರಾಜ್ ಪಾಷಾ ಪಡೆದರು.
ಕಾರುಗಳ ವಿಭಾಗದಲ್ಲಿ ಬೆಸ್ಟ್ ಡೈವರ್ ಆಗಿ ದೀಪಕ್‍ಗೌಡ, ಸ್ಟಾರ್‍ಆಫ್ ಚಿಕ್ಕಮಗಳೂರು ಕ್ಲಾಸ್‍ನಲ್ಲಿ ಮೋಹನ್ ಮೂಡಿಗೆರೆ, ಡೀಸಲ್ ಕ್ಲಾಸ್‍ನಲ್ಲಿ ಸಮಯ್ ಮೂಡಿಗೆರೆ, ಸ್ಟ್ರೀಟ್ ಸ್ಟೋಕ್‍ನಲ್ಲಿ ಅರ್ಬಾಸ್‍ಖಾನ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಗೆದ್ದಂತಹ ಎಲ್ಲಾ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಕರ್ಷ್‍ಗೌಡ ಮೂಡಿಗೆರೆ, ಅನುಪ್‍ಶೆಟ್ಟಿ, ಸುಪ್ರಿತ್ ಶೆಟ್ಟಿ, ಅಭಿಷೇಕ್ ಪಟದೂರು ಸೇರಿದಂತೆ ಎಫ್‍ಎಂಎಸ್‍ಸಿಐನ ಸದಸ್ಯರು ಉಪಸ್ಥಿತರಿದ್ದರು.



