ಅರಿವಿಗಿಂತ ಆಚಾರ ದೊಡ್ಡದು ಎಂದು ಲೋಕಕ್ಕೆ ಸಾದಿಸಿ ತೋರಿಸಿದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.
ಅವರು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ವತಿಯಿಂದ ಗೋಣಿಬೀಡು ಪುಷ್ಪಗಿರಿ ಸದನ ದಲ್ಲಿ ಏರ್ಪಡಿಸಿದ್ದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ದಲ್ಲಿ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸತ್ಯ. ಪ್ರಾಮಾಣಿಕತೆ. ದಾನ ಗುಣ ದಾಸೋಹ ತತ್ಪರತೆ ಹಾಗೂ ನಿಸ್ವಾರ್ಥ ಭಕ್ತಿ ಗೆ ಹೆಸರಾದವರು ಹೇಮರಡ್ಡಿ ಮಲ್ಲಮ್ಮ ತನ್ನವರಿಂದ ತಿರಸ್ಕರಿಸಲ್ಪಟ್ಟು ಗುಡಿಸಲಿಲ್ಲಿ ದ್ದರೂ ಬಂದವರಿಗೆ ಪ್ರಸಾದ ವನ್ನುಕ್ಕೀವ ಗುಣ ಅವರಿಗಿತ್ತು ಎಂದರು.
ಅಧ್ಯಕ್ಷತೆಯನ್ನು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್ ವಹಿಸಿ ಮಾತನಾಡುತ್ತಾ ಹೇಮರಡ್ಡಿ ಮಲ್ಲಮ್ಮ ಕಾಯಕ ದಲ್ಲಿ ಕೈಲಾಸ ಕಂಡವರು ಹಾಗೂ ಆಚಾರ ಪೂರ್ಣ.ಸಾತ್ವಿಕ ಬದುಕು ಎಲ್ಲರಿಗೂ ಆದರ್ಶ ಪ್ರಾಯ ವಾಗಿದೆ.ಸತ್ಯ ಪ್ರಾಮಾಣಿಕತೆ. ಸಹನೆ ಶಾಂತಿ ಗುಣ ಕಾಯಕ ನಿಷ್ಠೆ. ದಾನಗುಣ. ಅವಿ ಭಕ್ತ ಕುಟುಂಬ ಪ್ರೀತಿ. ಕ್ಷಮಾ ಶೀಲತೆ. ಮೌಲ್ಯ ಗಳಿಂದ ಕೂಡಿದ ಅವರ ಆದರ್ಶ ದ.ಬದುಕು ಪ್ರತಿಯೊಬ್ಬರಿಗೂ ಮಾದರಿ ಯಾಗಿದೆ ಎಂದರು..
ಗೌರವ ಟ್ರಸ್ತಿ ಸಿ ಸಿ ರಾಜಣ್ಣ. ಟ್ರಸ್ತಿ ಗಳಾದ ಬಾಂಧವ್ಯ. ಡಿಂಪಲ್. ಗಂಗಾಧರ್. ಮಿಥನ್. ಮಾನ್ಯ. ಪ್ರಸನ್ನ. ಅಶ್ವಿನಿ ಮುಂತಾದವರು ಭಾಗವಹಿಸಿ ದ್ದರು.



