suddi-11 (2)

 

 

ಆಲ್ದೂರು ಸಮೀಪದ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದ ನಾಗಶ್ರೀ ಸಭಾಂಗಣದಲ್ಲಿ ಗುರುವಾರ ವೀರಶೈವ ಲಿಂಗಾಯತ ಸಮುದಾಯದಿಂದ ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ  ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಹರೀಶ್ ಯಲಗುಡಿಗೆ ಮೂರನೇ ವರ್ಷದ ಕಾರ್ಯಕ್ರಮವಾಗಿದ್ದು, ಸಮುದಾಯದಲ್ಲಿ ಸಾಧಿಸುವ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬುವುದು ಮೂಲ ಉದ್ದೇಶ ಗುರಿಯಾಗಿದ್ದು, ಆಯೋಜನೆಗೆ ಸ್ಪಂದಿಸಿದವರ ಮಾಹಿತಿಗಳನ್ನು ಹಂಚಿಕೊಂಡರು.

ಉದ್ಘಾಟನಾ ಭಾಷಣವನ್ನು ಮಾಡಿದ ಸರ್ಕಲ್ ಇನ್ಸ್ಪೆಕ್ಟರ್ ಪಿಪಿ ಸೋಮೇಗೌಡ ವಿದ್ಯಾರ್ಥಿಗಳ ಜೀವನ ತಪಸ್ಸಿನಂತೆ ಮಹತ್ವಪೂರ್ಣವಾಗಿದ್ದು, ಅವರ ಸಾಧನೆಗೆ ,ಪ್ರೇರಣೆ ಶಕ್ತಿ,ತುಂಬಿದ ಪೆÇೀಷಕರು ಶಿಕ್ಷಕರು ಮತ್ತು ಸಮಾಜವನ್ನು ಶ್ಲಾಘಿಸಬೇಕು ಎಂದು ತಿಳಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸುವುದರ ಜೊತೆಗೆ ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಉತ್ತಮ ವಿದ್ಯಾರ್ಥಿಗಳು ಮಾದಕ ವ್ಯಸನ,ಅಪರಾಧ ಜಗತ್ತಿನ ಕರಾಳತೆಯ ಪಾಶಕ್ಕೆ ಬಲಿಯಾಗದಂತೆ ಪೆÇೀಷಕರು ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಬೇರುಗಂಡಿ ಬೃಹನ್ಮಠದ ಪೀಠಾಧ್ಯಕ್ಷರಾದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಮುದಾಯದ ಮುಖಂಡರು ಶ್ರೀ ಬಸವೇಶ್ವರ ಮತ್ತು ರೇಣುಕಾಚಾರ್ಯ ಜಯಂತಿಯನ್ನು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಅರ್ಥಪೂರ್ಣ ಆಚರಣೆಗೆ ವೇದಿಕೆ ಕಲ್ಪಿಸಿದ್ದು, ವ್ಯಕ್ತಿಯು ದುರಾಚಾರದಿಂದ ದೂರವಿದ್ದು ಸದಾಚಾರ ಸನ್ನಡತೆ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಗುರುಗಳ ಆಶೀರ್ವಚನ ಪಡೆದುಕೊಳ್ಳುವುದು ಬಹು ಮುಖ್ಯ,ಅದಕ್ಕೆ ಸ್ಪಷ್ಟ ನಿದರ್ಶನ ಮಹಾಭಾರತದಲ್ಲಿ ಶ್ರೀ ಕೃಷ್ಣನನ್ನು ಗುರುವಾಗಿ ಸ್ವೀಕರಿಸಿದ ಪಾಂಡವರು ಧರ್ಮ ಯುದ್ಧ ಜಯ ಸಾಧಿಸಿದ್ದಾಗಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವನಮಲಾ ಮೃತ್ಯುಂಜಯ ಪ್ರತಿಭಾ ಪುರಸ್ಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇದ್ದು, ಇಂದು ಮಹಿಳೆಯರು ಸಾಧಿಸದ ಕ್ಷೇತ್ರಗಳೇ ಇಲ್ಲ, ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೆಲ್ಲರಿಗೂ ಉತ್ತಮ ಭವಿಷ್ಯ ರೂಪಿತವಾಗಲಿ ಎಂದು ಹಾರೈಸಿದರು.

ಸಮುದಾಯದ ಹಿರಿಯ ಮುಖಂಡರಾದ ಬಿಬಿ ರೇಣುಕಾರ್ಯ ಶ್ರೀ ಸದ್ಗುರು ರೇಣುಕಾಚಾರ್ಯ ಮತ್ತು ಬಸವೇಶ್ವರರ ವ್ಯಕ್ತಿತ್ವ ಆದರ್ಶಗಳ ಕುರಿತು ಮಾಹಿತಿ ಹಂಚಿಕೊಂಡರು.

ವಿದ್ಯಾರ್ಥಿನಿ ಭುವನೇಶ್ವರಿ ತಾನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತಮ ಅಂಕಗಳನ್ನು ಗಳಿಸಿದ್ದು, ಸರ್ಕಾರಿ ಶಾಲೆಗಳಲ್ಲೂ ಉತ್ತಮವಾದಂತಹ ಪ್ರತಿಭಾನ್ವಿತ ಶಿಕ್ಷಕ ವರ್ಗ ಇದ್ದು,ಸಾಧನೆಗೆ ಪರಿಪೂರ್ಣ ಬೆಂಬಲವನ್ನು ನೀಡುತ್ತಾರೆ  ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂದರು.ವಿದ್ಯಾರ್ಥಿನಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಲು ಅನುಸರಿಸಿದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಬಳಿ ವೀರಶೈವ  ಲಿಂಗಾಯತ ಸಮಾಜದ ಅಧ್ಯಕ್ಷ ಮಹೇಶ್ ಕೆ ಎಸ್, ಕಾರ್ಯಕ್ರಮದ ಸುವ್ಯವಸ್ಥಿತ ಆಯೋಜನೆಗೆ ಸಹಕರಿಸಿದ ಸಮಾಜದ ಮುಖಂಡರುಗಳೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.

ನಾಡ ಪಟೇಲ್ ವೀರೇಂದ್ರ ಎಎನ್ ಹಳೆ ಆಲ್ದೂರು, ಸಮಾಜದ ಮುಖಂಡರುಗಳು ನಿರ್ದೇಶಕರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ