WhatsApp Image 2026-05-28 at 10.47.45 PM

 

 

ಪ್ರಸಕ್ತ ಸಾಲಿನ ಹತ್ತನೇ ತರಗತಿಯಲ್ಲಿ 612 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಸುರೇಂದ್ರ ಹಾಗೂ ಸುಚೇತಾ ದಂಪತಿಗಳ ಪುತ್ರಿ  ಕುಮಾರಿ ಸುಧನ್ವಿ ಅವರಿಗೆ ಶುಕ್ರವಾರ ಭಂಡಾರಿ ಸಮಾಜದ ಮುಖಂಡ ಹಾಗೂ ಎಲ್‍ಐಸಿ ಉದ್ಯೋಗಿ ರಮೇಶ್  ಭಂಡಾರಿ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಗೌರವಿಸಿದರು.

ಮೂಡಿಗೆರೆ ತಾಲೂಕು ಬಣಕಲ್ ಹೊಬಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರಿ ಸುಧನ್ವಿ ಭಂಡಾರಿ ಇವರು ಪ್ರಸಕ್ತ ಸಾಲಿನ ಹತ್ತನೇ ತರಗತಿಯಲ್ಲಿ 612 ಅಂಕಗಳನ್ನು ಪಡೆದು ಶೇಕಡಾ 97.92% ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ.

ಬಣಕಲ್ ಹೋಬಳಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಇವರು ಬಣಕಲ್ ನ ಸುರೇಂದ್ರ ಭಂಡಾರಿ ಹಾಗೂ ಸುಚೇತಾ ಭಂಡಾರಿ ದಂಪತಿಗಳ ಪುತ್ರಿಯಾಗಿದ್ದಾರೆ. ಈ ಬಡಕುಟುಂಬದ ಪ್ರತಿಭಾವಂತ ವಿಧ್ಯಾರ್ಥಿನಿಗೆ ಚಿಕ್ಕಮಗಳೂರು ಎಲ್.ಐ.ಸಿ ಕಛೇರಿಯ ಹಿರಿಯ ಉದ್ಯೋಗಿಯಾಗಿರುವ  ಶ್ರೀ ರಮೇಶ್ ಭಂಡಾರಿ  ಸನ್ಮಾನ ಮತ್ತು ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದರು.

ಹಾಗೆಯೇ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಸಮಾಜದ ಮತ್ತೋರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ತ್ರಿಶಾ ಭಂಡಾರಿ ಅವರನ್ನು ಗೌರವಿಸಲಾಯಿತು.

ಈ ಇಬ್ಬರು ವಿದ್ಯಾರ್ಥಿನಿಯರ ಮುಂದಿನ ಶೈಕ್ಷಣಿಕ ಜೀವನಕ್ಕೆ ಮೂಡಿಗೆರೆ ತಾಲೂಕು ಭಂಡಾರಿ ಸಮಾಜದಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಬಣಕಲ್ ಝೆಡ್ ಟವರ್ ನಲ್ಲಿ ಹಮ್ಮಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಕೆ ಷಣ್ಮುಖನಂದಾ ಭಂಡಾರಿ, ಮೂಡಿಗೆರೆ ಭಂಡಾರಿ ಸಮಾಜದ ಅಧ್ಯಕ್ಷರು ಇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಭಂಡಾರಿ ಸಮಾಜದ ಕಾರ್ಯದರ್ಶಿ ನಾಗೇಶ್ ಭಂಡಾರಿ, ಪಿ.ಕೆ.ರಾಜು, ಅರುಣ ಭಂಡಾರಿ, ಸುಜಾತ ನಾರಾಯಣ ಭಂಡಾರಿ, ಸತೀಶ್ ಭಂಡಾರಿ ಫಲ್ಗುಣಿ, ವನಿತಾ ಎಸ್.ಭಂಡಾರಿ, ಶಕುಂತಲಾ ಭಂಡಾರಿ, ರೇಷ್ಮಾ ಭಂಡಾರಿ, ತ್ರಿಶಾ ಭಂಡಾರಿ ಉಪಸಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ