🔹🔹 ನಿಧನ ಸುದ್ದಿ 🔹🔹
ಮೂಡಿಗೆರೆ ತಾಲ್ಲೂಕು, ಬಾಳೂರು ಹೋಬಳಿ, ಮರ್ಕಲ್ ಗ್ರಾಮದ ರೈತ ಮಹಿಳೆ ಶ್ರೀಮತಿ ಗಾಯತ್ರಿ (58 ವರ್ಷ)
(ಬಾಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮೇಶ್ ಮರ್ಕಲ್ ಅವರ ಪತ್ನಿ)
ಈ ದಿನ ಸೋಮವಾರ ಮುಂಜಾನೆ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ನೆರವೇರಲಿದೆ ಕುಟುಂಬ ಮೂಲಗಳು ತಿಳಿಸಿವೆ
ಗಾಯತ್ರಿ ಅವರು ಬಣಕಲ್ ಜೆಸಿಐ ಮಹಿಳಾ ವಿಭಾಗದ ಪದಾಧಿಕಾರಿಯಾಗಿದ್ದರು. 15 ದಿನಗಳ ಹಿಂದೆಯಷ್ಟೇ ಅವರ ಪುತ್ರನ ವಿವಾಹ ನೆರವೇರಿಸಿದ್ದರು.
ಗಾಯತ್ರಿ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ, ಮೂಡಿಗೆರೆ ಬೆಳಗಾರರ ಸಂಘ, ಜೆಸಿಐ ಬಣಕಲ್ ಅಧ್ಯಕ್ಷರು ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ



