suddi-7 (4)

 

 

ವಿಶ್ವ ಪರಿಸರ ದಿನದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪರಿಸರಕ್ಕೆ ಸಂಬಂಧಿಸಿದ ಅಂಚೆ ಚೀಟಿ, ಲಕೋಟೆ, ನಾಣ್ಯ ನೋಟುಗಳ ಪ್ರದರ್ಶನ ನಡೆಯಲಿದೆ.

ಜೂನ್ 5 ರಿಂದ 7 ರವರಗೆ ಬೆಳಿಗ್ಗೆ 9-30 ರಿಂದ ಸಂಜೆ 7-30 ರವರೆಗೆ ಪ್ರದರ್ಶನ ನಡೆಯಲಿದ್ದು ಪರಿಸರ ಸಂರಕ್ಷಣೆ ಮತ್ತು ಜೀವ ವೈವಿದ್ಯತೆಯನ್ನು ಸಾರುವ ಕ್ರಿ.ಪೂ 500 ರಿಂದ ಇಂದಿನವರೆಗಿನ ಪುರಾತನ ನಾಣ್ಯಗಳು ಮತ್ತು ನೋಟುಗಳು, ಪರಿಸರ ಪ್ರಜ್ಞೆ ಮತ್ತು ಅಳಿವಿನಂಚಿನ ಜೀವಿಗಳ ಮಹತ್ವವನ್ನು ಸಾರುವ ವಿಶೇಷ ಅಂಚೆ ಚೀಟಿಗಳು ಮತ್ತು ಲಕೋಟೆಗಳು, ವಿಶ್ವದಲ್ಲೇ ಅತ್ಯಂತ ಯಶಸ್ವಿ ಹುಲಿ ಸಂರಕ್ಷಣಾ ಯೋಜನೆ ಎಂದು ಗುರುತಿಸಿ ಕೊಂಡಿರುವ ಪ್ರಾಜೆಕ್ಟ್ ಟೈಗರ್ ಅಥವಾ ರಾಷ್ಟ್ರೀಯ ಹುಲಿ ಯೋಜನೆ ಕುರಿತಾದ ವಿಶೇಷ ಅಂಚೆ ಪ್ರಕಟಣೆಗಳು ಮತ್ತು ನಾಣ್ಯಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

ಇವಿಷ್ಟೆ ಅಲ್ಲದೇ ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದ ಅರಣ್ಯ ರಕ್ಷಕರ ಗೌರವಾರ್ಥವಾಗಿ ಬಿಡುಗಡೆಗೊಳಿಸಿದ ಅಂಚೆ ಲಕೋಟೆಗಳು, ಅಪರೂಪದ ಆರ್ಕಿಡ್‍ಗಳು, ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಭೌಗೋಳಿಕವಾಗಿ ವಿಶಿಷ್ಟ ಎನಿಸಿಕೊಂಡಿರುವ ಬೌಗೋಳಿಕ ಸೂಚ್ಯಂಕದಲ್ಲಿ ನಮೂದಾಗಿರುವ ಉತ್ಪನ್ನಗಳ ಮಹತ್ವ ಸಾರುವ ಒಂದು ಜಿಲ್ಲೆ ಒಂದು ಉತ್ಪನ್ನದ ಕುರಿತ ಲಕೋಟೆಗಳು, ಅಂಚೆ ಚೀಟಿಗಳು, ರಾಷ್ಟ್ರೀಯ ಚಿಹ್ನೆಗಳಾದ ನವಿಲು, ಹುಲಿ, ಕಮಲ ಇವುಗಳನ್ನು ಚಿತ್ರಿಸಿರುವ ನಾಣ್ಯಗಳು, ಪರಿಸರ ಸಂಬಂಧಿಸಿದ ದಿನಾಚರಣೆಗಳ ಸಂದರ್ಭದಲ್ಲಿ ಹೊರ ತಂದಿರುವ ಅಂಚೆ ಲಕೋಟೆಗಳು, ರಾಷ್ಟ್ರೀಯ ಅಂತರಾಷ್ಟ್ರೀಯ ಉದ್ಯಾನಗಳು, ಜಲಪಾತ, ವೃಕ್ಷ, ಕೀಟ, ಅಳಿವಿನಂಚಿನ ಪ್ರಾಣಿ, ಪಕ್ಷಿ, ಜಲಚರ ಇತ್ಯಾದಿಗಳ ಕುರಿತ ಅಂಚೆ ಚೀಟಿ, ಲಕೋಟೆ, ನಾಣ್ಯ ನೋಟುಗಳನ್ನು ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.

ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಅವರ ಸಂಗ್ರಹದಲ್ಲಿರುವ ಈ ಎಲ್ಲಾ ಅಪರೂಪದ ವಸ್ತುಗಳು ಈ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿವೆ. ಹೆಚ್ಚಿನ ಮಾಹಿತಿಗೆ 9663098873/9449309067 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ