suddi-15

 

 

ಯುವ ಜನಾಂಗ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ತೆರಿಗೆ ಪದ್ಧತಿ ಹಾಗೂ ಕಾನೂನುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರಗಳು ಸಹಕಾರಿ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ವಿ.ಕುಮಾರ್ ತಿಳಿಸಿದರು.

ಅವರು ಗುರುವಾರ ಚಿಕ್ಕಮಗಳೂರು ಎಐಟಿ ಕಾಲೇಜು ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾ ತೆರಿಗೆ ಸಕಹೆಗಾರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಜಿಎಸ್‍ಟಿ ಮತ್ತು ಆದಾಯ ತೆರಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ತೆರಿಗೆ ಇಲಾಖೆಯು ತೆರಿಗೆ ಸಲೆಹೆಗಾರರೊಂದಿಗೆ ಸದಾ ಒಳ್ಳೆಯ ಸಂಬಂಧ ಹೊಂದಿದೆ. ತೆರಿಗೆ ಸಲಹೆಗಾರರು, ಚಾರ್ಟೆಡ್ ಅಕೌಂಟೆಂಟ್‍ಗಳು, ತೆರಿಗೆ ಪಾವತಿದಾರರೆಲ್ಲರೂ ಒಂದೇ ವ್ಯವಸ್ಥೆಯ ಭಾಗೀದಾರರು, ಪರಸ್ಪರ ಸಹಕಾರದಿಂದ ರಾಜ್ಯ ಮತ್ತು ರಾಷ್ಟ್ರದ ಸಂಪನ್ಮೂಲವನ್ನು ಕ್ರೂಢೀಕರಿಸಲು ದುಡಿಯುತ್ತಿದ್ದೇವೆ ಎಂದರು.

ತಳಮಟ್ಟದಲ್ಲಿ ತೆರಿಗೆ ಪಾವತಿದಾರರ ಸಂಶಯಗಳಳನ್ನು ಬಗೆಹರಿಸುವಲ್ಲಿ ಹಾಗೂ ಕಾನೂನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾಹಿತಿ ಒದಗಿಸಿ, ಯಾವುದೆಲ್ಲ ತೆರಿಗೆ ವ್ಯಾಪ್ತಿಗೆ ಬರುತ್ತದೆ, ಯಾವುದು ಬರುವುದಿಲ್ಲ ಎನ್ನುವುದೆಲ್ಲದರ ಬಗ್ಗೆ ಮನವರಿಕೆ ಮಾಡಿಕೊಟ್ಟು ತೆರಿಗೆ ಪಾವತಿದಾರರು ಹಾಗೂ ಇಲಾಖೆ ನಡುವೆ ಸೇತುವೆಯಾಗಿ ಸೇತುವೆಯಾಗಿ ತೆರಿಗೆ ಸಲಹೆಗಾರರ ಸಂಘವು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಇಲಾಖೆ ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡುತ್ತದೆ. ತೆರಿಗೆ ಕಾನೂನುಗಳಲ್ಲಿ ಆಗಾಗ ಬದಲಾವಣೆಗಳು ಆಗುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಪರಸ್ಪರ ಚರ್ಚೆಗಾಗಿ ಸಭೆಗಳನ್ನು ಏರ್ಪಡಿಸುವ ಅಗತ್ಯವಿರುತ್ತದೆ ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಎ.ಗೌತಮ್ ಮಾತನಾಡಿ, ಬಿಕಾಂ ಮತ್ತು ಎಂಬಿಎ ವಿದ್ಯಾರ್ಥಿಗಳು ಆಡಿಟರ್ ಕಚೇರಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವ ಮೂಲಕ ತೆರಿಗೆ ಪದ್ಧತಿ ಕುರಿತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಸಾಮಾನ್ಯ ಜನರಿಗೆ ಜಿಸಿಎಸ್‍ಟಿ ಹಾಗೂ ಆದಾಯ ತೆರಿಗೆ ಬಗ್ಗೆ ಗೊಂದಲಗಳಿರುತ್ತವೆ. ಈ ಕುರಿತು ಹೆಚ್ಚು ಮಾಹಿತಿಗಳನ್ನು ತಿಳಿದುಕೊಳ್ಳುವ ಅಗತ್ಯವಿರುತ್ತದೆ ಎಂದರು.

ಇಂತಹ ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಸಂಪರ್ಕ ಕೌಶಲ್ಯಗಳು ಬೆಳೆಯುತ್ತದೆ. ಭಾಷೆ ಮೇಲೆ ಹಿಡಿತ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಧೈರ್ಯವನ್ನು ಮೈಗೂಡಿಸಿಕೊಳ್ಳಲು ಅವಕಾಶವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಎಸ್.ನಂಜುಂಡ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ತಿಂಗಳು ವಿವಿಧ ತೆರಿಗೆ ಸಂಬಂಧಿತ ವಿಭಾಗವಾರು ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ. ಬಿ.ಕಾಂ. ಪೂರೈಸಿದ ವಿದ್ಯಾರ್ಥಿಗಳು ತೆರಿಗೆ ಸಂಬಂಧಿತ ಚಾರ್ಟೆಡ್ ಅಕೌಂಟೆಂಟ್ ಸೇರಿದಂತೆ ಇತರೆ ಕೆಲಸದಲ್ಲಿ ತೊಡಗಿಸಿಕೊಂಡು ಸ್ವಾವಲಂಭಿಗಳಾಗಲು ಅವಕಾಶವಿದೆ. ಇದಕ್ಕೆ ನಮ್ಮ ಸಂಘದಿಂದ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಚಿಕ್ಕಮಗಳೂರು ಸಂಘವು ಹತ್ತಾರು ವರ್ಷಗಳಿಂದ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಒಡನಾಟದೊಂದಿಗೆ ಬೆಳೆದುಬಂದಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದೆ ಎಂದರು.

ತೆರಿಗೆ ಪದ್ಧತಿ ಬಗ್ಗೆ ಎಷ್ಟೇ ವಿಷಯಗಳನ್ನು ತಿಳಿದುಕೊಂಡರೂ ಯಾವುದೋ ಒಂದು ಸಂದರ್ಭದಲ್ಲಿ ಎಡವುವ ಸಾಧ್ಯತೆಗಳಿರುತ್ತದೆ. ಪ್ರತಿದಿನ ನೋಟೀಸುಗಳು ಬರುತ್ತಿರುತ್ತವೆ. ಯಾವುದೋ ಕಾರಣದಿಂದ ಅದನ್ನು ಗಮನಿಸದ ಸಾಧ್ಯತೆಗಳಿರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ವಾರ ಅಥವಾ ತಿಂಗಳಿಗೊಮ್ಮೆ ಸಂಘವು ಸಭೆ ನಡೆಸಿ ಬೇರೆ ಬೇರೆ ಉದ್ಯಮಗಳು, ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆ ಮಾಡುವುದರಿಂದ ಬೇರೆ ಬೇರೆ ಸಮಸ್ಯೆಗಳನ್ನು ಬಗೆಹಿರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಕಿರಣ್ ಸೋಮಯ್ಯ, ಚಿಕ್ಕಮಗಳೂರು ಛೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಆರ್.ಎಂ.ಮಹೇಶ್, ಬೆಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಟಿ.ಆರ್.ರಾಜೇಶ್ ಕುಮಾರ್, ಸಾಯಿ ರಕ್ಷಿತ್, ಜೆ.ಪಿ ಕೃಷ್ಣೇಗೌಡ, ಆದಾಯ ತೆರಿಗೆ ಅಧಿಕಾರಿ ರಾಕೇಶ್, ಸರಕುಸೇವೆ ಅಧಿಕಾರಿ ಸಂದಿಲ್ ಮುರುಗನ್, ನಶೀರ್ ಭಾಷಾ, ರಂಜಿತ್, ಜಾವಿದ್ ಅಫ್ತರ್, ಬಾಲಸುಭ್ರಹ್ಮಣ್ಯ, ವಿಕ್ರಂ, ಜಗಧೀಶ್, ಪ್ರಸನ್ನಕುಮಾರ್, ಅಬ್ದುಲ್ ಸವೂರ್, ಮುರುಳಿಧರ್, ಸುನೀಲ್, ಆಶಾರಂಗನಾಥ್, ಧರ್ಮಚಾರ್, ಎಂ.ಎನ್ ರಂಗನಾಥನ್, ಇತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ